ಕುಸಿಯುತ್ತಿದೆ ಬೈಡೆನ್ ಜನಪ್ರಿಯತೆ: ತಂದ್ರು 3 ಲಕ್ಷ ಕೋಟಿ ಡಾಲರ್ ಸ್ಕೀಮ್!

masthmagaa.com:

1.2 ಲಕ್ಷ ಕೋಟಿ ಡಾಲರ್ ಮೊತ್ತದ ಮೂಲಸೌಕರ್ಯ ಯೋಜನೆಗೆ ಅಮೆರಿಕದ ಕಾಂಗ್ರೆಸ್ ಅನುಮೋದನೆ ನೀಡಿದೆ. ಅಮೆರಿಕನ್ ಎಕಾನಮಿ ಯನ್ನು ಮತ್ತೆ ಚಿಗುರುವಂತೆ ಮಾಡಲು ಅಧ್ಯಕ್ಷ ಜೋಸೆಫ್ ಬೈಡೆನ್ ಒಟ್ಟು 3ಲಕ್ಷ ಕೋಟಿ ಡಾಲರ್ ಖರ್ಚು ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ಅದರಲ್ಲಿ ಅತ್ಯಂತ ಇಂಪಾರ್ಟೆಂಟ್ ಪಾರ್ಟ್ ಎಂದರೆ ಈಗ ಪಾಸ್ ಮಾಡಿರೋ 1.2 ಲಕ್ಷ ಕೋಟಿ ಡಾಲರ್ ಮೊತ್ತದ ಮೂಲಸೌಕರ್ಯ ಪ್ಯಾಕೇಜ್. ಇದರಲ್ಲಿ ಪ್ರತಿಯೊಬ್ಬ ಅಮೆರಿಕನ್ನರಿಗೆ ಶುದ್ಧ ಕುಡಿಯುವ ನೀರು, ಬ್ರಾಡ್ಬ್ಯಾಂಡ್ ಇಂಟರ್ನೆಟ್, ಎಲೆಕ್ಟ್ರಿಕ್ ವಾಹನಗಳು, ಸಾರ್ವಜನಿಕ ಸಾರಿಗೆ ಕ್ಷೇತ್ರದಲ್ಲಿ ಇದುವರೆಗೂ ಕಂಡು ಕೇಳರಿಯದ ಹಣಹೂಡಿಕೆ ಸೇರಿದಂತೆ ಹಲವು ಇನ್ಫ್ರಾಸ್ಟ್ರಕ್ಚರ್ ಪ್ಲಾನ್ ಇವೆ. ಅಧಿಕಾರಕ್ಕೆ ಬಂದು ಹತ್ತೆ ತಿಂಗಳಲ್ಲಿ ಬೈಡನ್ ಜನಪ್ರಿಯತೆ ದಿನದಿನಕ್ಕೂ ಡೌನ್ ಆಗುತ್ತಿದೆ. ಅಮೆರಿಕದಲ್ಲಿ ಕಾಲಕಾಲಕ್ಕೆ ನಡೆಯುವ ಅಪ್ರುವಲ್ ರೇಟಿಂಗ್ ಈ ವಿಚಾರವನ್ನು ಸಾರಿ ಸಾರಿ ಹೇಳುತ್ತಿದೆ. ಹೀಗಾಗಿ ಬೈಡನ್ ಮತ್ತು ಅವರ ಡೆಮಾಕ್ರಟಿಕ್ ಪಾರ್ಟಿ ಅರ್ಜೆಂಟಾಗಿ ಈ ಪ್ಯಾಕೇಜನ್ನು ಪಾಸ್ ಮಾಡಲೇಬೇಕಾದ ಒತ್ತಡದಲ್ಲಿತ್ತು. ಸೆನೆಟ್ನಲ್ಲಿ ಈಗಾಗಲೇ ಪಾಸಾಗಿತ್ತು. ಈಗ ಕಾಂಗ್ರೆಸ್ನಲ್ಲಿ ಕೂಡ 228-206 ಮತಗಳ ಅಂತರದಲ್ಲಿ ಪಾಸಾಗಿದೆ.
ಆದರೆ ತಮ್ಮ build back better ಹೆಸರಿನ ಸ್ಕೀಮಿನಲ್ಲಿ ಇದೊಂದೇ ಅಲ್ಲ. 1.85 ಟ್ರಿಲಿಯನ್ ಡಾಲರ್ ನ ಇನ್ನೊಂದು ಸೋಶಿಯಲ್ ವೆಲ್ಫೇರ್ ಸ್ಕೀಮ್ ಕೂಡ ಇದೆ. ಅದಕ್ಕೆ ಇನ್ನೂ ಕೂಡ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ‌ನ ಒಪ್ಪಿಗೆ ಸಿಕ್ಕಿಲ್ಲ.

-masthmagaa.com

Contact Us for Advertisement

Leave a Reply