ಕೈ ಪಾಳಯ ಸೇರಲು ಪ್ರಶಾಂತ್‌ ಕಿಶೋರ್‌ ನಕಾರ. ಏನ್‌ ಹೇಳ್ತು ಕಾಂಗ್ರೆಸ್‌?

masthmagaa.com:

ಸತತ ಸೋಲುಗಳಿಂದ ಮುಳುಗ್ತಾ ಇರೋ ಕಾಂಗ್ರೆಸ್‌ ಎಂಬ ಹಡಗನ್ನ ಮೇಲತ್ತಲು ರಾಜಕೀಯ ಚಾಣಾಕ್ಷ ಪ್ರಶಾಂತ್‌ ಕಿಶೋರ್‌ರನ್ನ ಪಾರ್ಟಿಗೆ ಸೇರ್ಸ್ಕೋಳಲಾಗುತ್ತೆ ಅನ್ನೋ ವದಂತಿಗಳಿಗೆ ಇವತ್ತು ತೆರೆಬಿದ್ದಿದೆ. 2024ರ ಕೇಂದ್ರ ಚುನಾವಣೆ ಗಮನದಲ್ಲಿ ಇಟ್ಕೊಂಡು ಕಾಂಗ್ರೆಸ್‌ “Empowered Action Group 2024” ಅಂದ್ರೆ ಸಬಲೀಕರಣ ಕ್ರಿಯಾ ಸಮಿತಿ ಅನ್ನೋ ಟಾಸ್ಕ್‌ ಫೋರ್ಸ್‌ ರಚಿಸಿತ್ತು. ಇದಕ್ಕೆ ಪ್ರಶಾಂತ್‌ ಕಿಶೋರ್‌ಗೆ ಆಹ್ವಾನ ನೀಡಿ ಆ ಮೂಲಕ ಅವ್ರನ್ನ ಪಕ್ಷಕ್ಕೆ ಸೇರಿಸಿಕೊಳ್ಳೋ ಯೋಚನೆ ಇತ್ತು. ಆದ್ರೆ ಈ ಆಫರ್‌ನ್ನ ಪ್ರಶಾಂತ್‌ ಕಿಶೋರ್‌ ತಿರಸ್ಕರಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರೋ ಅವ್ರು, ಕಾಂಗ್ರೆಸ್‌ ಉದಾರ ಮನಸ್ಸಿನಿಂದ ಪಕ್ಷಕ್ಕೆ ಸೇರಿಕೊಳ್ಳಲು ನೀಡಿದ ಆಹ್ವಾನವನ್ನ ನಾನು ತಿರಸ್ಕರಿಸ್ತಾ ಇದ್ದೇನೆ. ನನ್ನ ಪ್ರಕಾರ ಕಾಂಗ್ರೆಸ್‌ಗೆ ನನಗಿಂತ ಹೆಚ್ಚಾಗಿ ನಾಯಕತ್ವ ಮತ್ತು ಬೇರುಗೊಂಡ ರಚನಾತ್ಮಕ ಸಮಸ್ಯೆಗಳನ್ನ ಸರಿಪಡಿಸೋಕೆ ಸಾಮೂಹಿಕ ಇಚ್ಛಾಶಕ್ತಿಯ ಅವಶ್ಯಕತೆ ಇದೆ ಅಂತ ಹೇಳಿದ್ದಾರೆ. ಇನ್ನು ಕಾಂಗ್ರೆಸ್‌ ಕಡೆಯಿಂದ ಹಿರಿಯ ಮುಖಂಡ ಮತ್ತು ವಕ್ತಾರ ರಣದೀಪ್‌ ಸುರ್ಜೆವಾಲ ಕೂಡ ಇದನ್ನ ಟ್ವೀಟ್‌ ಮಾಡಿ ಖಚಿತ ಪಡಿಸಿದ್ದಾರೆ. ಪ್ರಶಾಂತ್‌ ಕಿಶೋರ್‌ ಅವ್ರ ನಿರ್ಧಾರವನ್ನ ನಾವು ಗೌರವಿಸ್ತೇವೆ ಅಂತ ಸುರ್ಜೇವಾಲ ಹೇಳಿದ್ದಾರೆ. ಮೂಲಗಳ ಪ್ರಕಾರ ಕಾಂಗ್ರೆಸ್‌ ಹೊಸ ಮುಖ ಮತ್ತು ಹೊಸ ಸ್ಟ್ರಟಜಿ ಬೇಕು ಅನ್ನೋದನ್ನ ಒಪ್ಕೊಂಡಿತ್ತಾದ್ರು, ಪ್ರಶಾಂತ್‌ ಕಿಶೋರ್‌ಗೆ ಫ್ರೀ ಹ್ಯಾಂಡ್‌ ಕೊಡೋಕೆ ಸಿದ್ಧ ಇರ್ಲಿಲ್ಲ. ಇನ್ನು ಈ ಕಡೆ ಕಾಂಗ್ರೆಸ್‌ ಜೊತೆಗೆ ಮಾತುಕತೆಯಲ್ಲಿ ಇರೋವಾಗ್ಲೆ ಪ್ರಶಾಂತ್‌ ಕಿಶೋರ್‌ ಹೈದರಾಬಾದ್‌ನಲ್ಲಿ ಟಿಆರ್‌ಎಸ್‌ ಮುಖ್ಯಸ್ಥ ಕೆ.ಚಂದ್ರಶೇಖರ್‌ ರಾವ್‌ ಜೊತೆ ಮಾತುಕತೆ ನಡೆಸಿದ್ದು ಮತ್ತು ಅದೇ ಸಮಯದಲ್ಲಿ ಕಿಶೋರ್‌ರ ನಿಕಟ ಸಂಸ್ಥೆ ಐ-ಪ್ಯಾಕ್‌ ಟಿಆರ್‌ಎಸ್‌ನೊಂದಿಗೆ ಒಪ್ಪಂದ ಮಾಡ್ಕೊಂಡಿದ್ದು ಕಾಂಗ್ರೆಸ್‌ನ ಒಂದು ವರ್ಗಕ್ಕೆ ಇಷ್ಟವಾಗಿಲ್ಲ. ಇನ್ನು ಈ ಬಗ್ಗೆ ನಡೆದ ಸಭೆಯಲ್ಲಿ ದಿಗ್ವಿಜಯ್‌ ಸಿಂಗ್‌, ಮುಕುಲ್‌ ವಾಣ್ಸಿಕ್‌, ರಣದೀಪ್‌ ಸುರ್ಜೆವಾಲ ಮತ್ತು ಜೈರಾಮ್‌ ರಮೇಶ್‌ ಕಿಶೋರ್‌ ಕಾಂಗ್ರೆಸ್‌ ಸೆರೋದನ್ನ ವಿರೋಧಿಸಿದ್ದಾರೆ.

-masthmagaa.com

Contact Us for Advertisement

Leave a Reply