ಸಂಬಂಧಿಕರ ಮಗನ ರಿಲೀಸ್​​​ಗೆ ಜೈಲಲ್ಲೇ ಪ್ರತಿಭಟನೆಗೆ ಕೂತ ಶಾಸಕ!

masthmagaa.com:

ಸಾಮಾನ್ಯ ಜನ ತಪ್ಪು ಮಾಡಿದ್ರೆ ಪೊಲೀಸ್ರು ಅರೆಸ್ಟ್ ಮಾಡ್ತಾರೆ, ಆದ್ರೆ ರಾಜಕಾರಣಿಗಳ ಮಕ್ಕಳು, ಸಂಬಂಧಿಕರು ತಪ್ಪು ಮಾಡಿದ್ರೆ ಮೃದು ಧೋರಣೆ ತಾಳ್ತಾರೆ ಪೊಲೀಸ್ರು ಅನ್ನೋ ಆರೋಪ ಕೇಳಿ ಬರೋದು ಸಹಜ. ಆದ್ರೆ ರಾಜಸ್ಥಾನದಲ್ಲಿ, ಆಡಳಿತ ಪಕ್ಷದ ಶಾಸಕ ಅಂದ್ರೆ ಕಾಂಗ್ರೆಸ್ ಶಾಸಕಿ ಮತ್ತು ಆಕೆಯ ಪತಿ, ತಮ್ಮ ಸಂಬಂಧಿಕರೊಬ್ಬರ ಮಗನನ್ನ ರಿಲೀಸ್​ ಮಾಡಿಸಿಕೊಳ್ಳಲು ಪೊಲೀಸ್ ಸ್ಟೇಷನ್​ನಲ್ಲೇ ಧರಣಿ ಕೂತಿರೋ ಘಟನೆ ನಡೆದಿದೆ. ಇದರ ವಿಡಿಯೋ ವೈರಲ್​ ಆಗಿದೆ. ಅಂದ್ಹಾಗೆ ಇದು ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಕೇಸ್​. ಈ ಕೇಸ್​​ನಲ್ಲಿ ಇವರ ಸಂಬಂಧಿಕರೊಬ್ಬರ ಮಗ ಸೇರಿದಂತೆ ಹಲವರನ್ನ ಪೊಲೀಸರು ಎಳ್ಕೊಂಡ್​ ಹೋಗಿದ್ರು. ಅವರನ್ನ ರಿಲೀಸ್​ ಮಾಡಿ ಅಂತ ಇವರು ಸ್ಟೇಷನ್​​ ಒಳಗೆ ಧರಣಿ ನಡೆಸಿದ್ದಾರೆ. ಆದ್ರೆ ಪೊಲೀಸರು ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಲೇ ಇಲ್ಲ. ಇನ್ನು ಧರಣಿ ವೇಳೆ ಶಾಸಕಿ, ಎಲ್ಲಾ ಮಕ್ಕಳು ಮದ್ಯಪಾನ ಮಾಡ್ತಾರೆ ಅಂತ ಹೇಳಿದ್ದು ಕೂಡ ವೈರಲ್​ ಆಗಿದೆ.

-masthmagaa.com

Contact Us for Advertisement

Leave a Reply