₹20 ಲಕ್ಷ ಕೋಟಿ ಮೌಲ್ಯ ಕ್ರಾಸ್‌ ಮಾಡಿದ ರಿಲಾಯನ್ಸ್‌ ಗ್ರೂಪ್‌!

masthmagaa.com:

ವರ್ಷದ ಆರಂಭದಲ್ಲೇ ರಿಲಾಯನ್ಸ್‌ ಒಡೆಯ ಮುಖೇಶ್‌ ಅಂಬಾನಿಯವ್ರಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ರಿಲಾಯನ್ಸ್‌ ಸಮೂಹದ ಕಂಪನಿಗಳಲ್ಲಿ ಹೂಡಿಕೆಯ ಹೊಳೆಯೇ ಹರೀತಿದೆ. ಪರಿಣಾಮ ರಿಲಾಯನ್ಸ್‌ ಸಮೂಹದ ಒಟ್ಟು ಮಾರ್ಕೆಟ್‌ ಕ್ಯಾಪಿಟಲೈಸೇಶನ್‌ 20 ಲಕ್ಷ ಕೋಟಿ ಕ್ರಾಸ್‌ ಮಾಡಿದೆ. ಅದ್ರಲ್ಲೂ ಇತ್ತೀಚೆಗೆ ಭರ್ಜರಿ ಪರ್ಫಾರ್ಮ್‌ ಮಾಡ್ತಿರೋ ಅಂಬಾನಿ ಫ್ಲ್ಯಾಗ್‌ಶಿಪ್‌ ಕಂಪನಿ ರಿಲಾಯನ್ಸ್‌ ಇಂಡಸ್ಟ್ರೀಜ್‌ ದೊಡ್ಡ ಕೊಡುಗೆ ನೀಡಿದೆ. ರಿಲಾಯನ್ಸ್‌ ಇಂಡಸ್ಟ್ರೀಸ್‌ ಕ್ಯಾಪೆಕ್ಸ್‌ ಹತತ್ರ ಸುಮಾರು 18 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಇದು ರಿಲಾಯನ್ಸ್‌ ಸಮೂಹದ ಒಟ್ಟು ಮಾರ್ಕೆಟ್‌ ವ್ಯಾಲ್ಯೂನ 90% ಆಗಿದೆ. ಇದರ ಜೊತೆಗೆ ಇತ್ತೀಚೆಗೆ ಲಿಸ್ಟಿಂಗ್‌ ಆಗಿರೊ ಜಿಯೋ ಫಿನಾನ್ಶಿಯಲ್‌ ಕೂಡ ಒಳ್ಳೆ ಪರ್‌ಫಾರ್ಮನ್ಸ್‌ ನೀಡ್ತಿದ್ದು, 1.5 ಲಕ್ಷ ಕೋಟಿ ರೂಪಾಯಿ ಮಾರ್ಕೆಟ್‌ ವ್ಯಾಲ್ಯೂವನ್ನ ಹೊಂದಿದೆ. ಕಳೆದ ವರ್ಷ 13% ಏರಿಕೆ ಕಂಡಿದ್ದ ರಿಲಾಯನ್ಸ್‌ ಇಂಡಸ್ಟ್ರೀಸ್‌ ಪ್ರತಿ ಷೇರಿನ ಬೆಲೆ ಸದ್ಯ ₹2,655 ಇದೆ. ನಿಮಗೆ ನೆನಪಿರ್ಲಿ, ಜುಲೈ 20ರಂದು ಎರಡೂ ಡಿಮರ್ಜ್‌ ಆಗಿದ್ವು. ಆದ್ರು ಈ ರೀತಿ ಪರ್ಫಾರ್ಮ್‌ ಮಾಡ್ತಿವೆ.

-masthmagaa.com

Contact Us for Advertisement

Leave a Reply