ನಾರ್ವೆ ಮೂಲದ ಕಂಪನಿ ಖರೀದಿಗೆ ಮುಂದಾದ ರಿಲಾಯನ್ಸ್!

masthmagaa.com:

ಮುಖೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ನಾರ್ವೆ ಮೂಲದ REC ಗ್ರೂಪ್ ಕಂಪನಿಯನ್ನ ಸುಮಾರು 9 ಸಾವಿರ ಕೋಟಿಗೆ ಖರೀದಿಸಲು ಮುಂದಾಗಿದೆ. ಸದ್ಯ ಈ ಕಂಪನಿ ಚೀನಾದ ಸರ್ಕಾರಿ ಸ್ವಾಮ್ಯದ ಕೆಮಿಕಲ್ ಕಂಪನಿ ಕೆಮ್ ಚೈನಾದ ಅಧೀನದಲ್ಲಿತ್ತು. ಅಂದಹಾಗೆ REC ಗ್ರೂಪ್ ಒಂದು ಸೋಲಾರ್ ವಿದ್ಯುತ್ ಟೆಕ್ನಾಲಜಿ ಕಂಪನಿ. ಕ್ಲೀನ್ ಎನರ್ಜಿ ಕ್ಷೇತ್ರದಲ್ಲಿ 75 ಸಾವಿರ ಕೋಟಿಗೂ ಅಧಿಕ ಬಂಡವಾಳ ಹೂಡಿಕೆ ಮಾಡೋ ಪ್ಲಾನ್ ಹೊಂದಿದೆ. ಹೀಗಾಗಿ ಈಗಾಗಲೇ ಈ ಕ್ಷೇತ್ರದಲ್ಲಿ ಪಳಗಿರೋ ಒಂದು ಕಂಪನಿ ಖರೀದಿ ಮಾಡಿದರೆ ಅನುಕೂಲ ಅನ್ನೋದು ಅವರ ಲೆಕ್ಕಾಚಾರ.

-masthmagaa.com

Contact Us for Advertisement

Leave a Reply