ರಿಲಾಯನ್ಸ್‌, ಡಿಸ್ನಿ ಮದುವೆ: $8.5 ಕೋಟಿ ಮೌಲ್ಯದ ಕಂಪನಿ ಜನನ

masthmagaa.com:

ರಿಲಯಾನ್ಸ್‌ ಇಂಡಸ್ಟ್ರೀಸ್, ವಯಾಕಾಂ18 ಮೀಡಿಯಾ ಹಾಗೂ ವಾಲ್ಟ್‌ ಡಿಸ್ನಿ ಕಂಪನಿಗಳು $8.5 ಬಿಲಿಯನ್‌ ಡಾಲರ್‌ ಮೌಲ್ಯದ ಜಾಯಿಂಟ್‌ ವೆಂಚರ್‌ಗೆ ಜನ್ಮ ನೀಡಿವೆ. ವಯಾಕಾಮ್18‌ ಹಾಗೂ ಸ್ಟಾರ್‌ ಇಂಡಿಯಾ ಕಂಪನಿಗಳು ಮರ್ಜ್‌ ಆಗೋದನ್ನ ಅಫಿಷಿಯಲ್ಲಾಗಿ ಈ ಕಂಪನಿಗಳು ಅನೌನ್ಸ್‌ ಮಾಡಿವೆ. ನೀತಾ ಅಂಬಾನಿ ಹಾಗೂ ಉದಯ್‌ ಶಂಕರ್‌ ಈ ಹೊಸ ಕಂಪನಿಯನ್ನ ಲೀಡ್‌ ಮಾಡಲಿದ್ದಾರೆ. ಈ ಮೂಲಕ ಟಿವಿ ಹಾಗೂ ಸ್ಟ್ರೀಮಿಂಗ್‌ ಸೆಕ್ಟರ್‌ನಲ್ಲಿ ಛಾಒಉ ಮೂಡಿಸೋಕೆ ರಿಲಾಯನ್ಸ್‌ ಗ್ರೂಪ್‌ ಮುಂದಾಗಿದೆ. ಯಾಕಂದ್ರೆ $8.5 ಬಿಲಿಯನ್‌ ಡಾಲರ್‌ ಕಂಪನಿ ಅಂದ್ರೆ, ಸಂಪತ್ತಿನ ವಿಚಾರದಲ್ಲಿ ಮೀಡಿಯಾದಲ್ಲಿರೋ ಇತರ ಯಾವುದೇ ಕಾಂಪಿಟಿಟರ್‌ಗಳಿಗಿಂತ ಒಂದ್‌ ಹೆಜ್ಜೆ ಮುಂದೆ ಅಂತಾನೇ ಹೇಳ್ಬೋದು. ಈ ಕಂಪನಿಯಲ್ಲಿ 63.16% ಷೇರುಗಳ ಮೂಲಕ ರಿಲಾಯನ್ಸ್‌ ಹಾಗೂ ಅದರ ಅದೀನ ಸಂಸ್ಥೆಗಳು ಅತಿ ದೊಡ್ಡ ಪಾಲುದಾರರಾಗಿದ್ದಾರೆ. ವಾಲ್ಟ್‌ ಡಿಸ್ನಿ ಬಳಿ ಉಳಿದ 36.84% ಶೇರ್ಸ್‌ ಇರಲಿದೆ. ಈ ಮರ್ಜರ್‌ ಮೂಲಕ ಹೆಚ್ಚಿನ ಆಡಿಯನ್ಸ್‌ಗೆ ಹೆಚ್ಚೆಚ್ಚು ಕಂಟೆಂಟ್‌ ತಲುಪಿಸೋಕೆ ಈ ಕಂಪನಿಗಳು ಡಿಸೈಡ್‌ ಮಾಡಿವೆ. ಇನ್ನು ಈ ಮರ್ಜರ್‌ ವಿಚಾರ ಅನೌನ್ಸ್‌ ಆಗ್ತಿದ್ದಂಗೆ ರಿಲಾಯನ್ಸ್‌ ಷೇರುಗಳು ಭಾರತದ ಸ್ಟಾಕ್‌ ಮಾರ್ಕೆಟ್‌ಗೇ ಬೂಸ್ಟ್‌ ನೀಡಿವೆ. ಸುಮಾರು 1.5% ವರೆಗೂ ರಿಲಯಾನ್ಸ್‌ ಗ್ರೂಪ್ಸ್‌ ಷೇರುಗಳು ಲಾಭ ಗಳಿಸಿವೆ. ಕಳೆದ 5 ಟ್ರೇಡಿಂಗ್‌ ಸೆಶನ್‌ಗಳಿಂದ RIL ಸ್ಟಾಕ್‌ಗಳು ನಷ್ಟ ಅನುಭವಿಸಿದ್ವು. ಹೂಡಿಕೆದಾರರು ಪ್ರಾಫಿಟ್‌ ಬುಕಿಂಗ್‌ ಮಾಡಿದ್ರಿಂದ ಷೇರುಗಳು ಡಲ್‌ ಹೊಡೆದಿದ್ವೂ. ಆದ್ರೆ ಗುರುವಾರ ರಿಲಾಯನ್ಸ್‌ ಷೇರುಗಳು ಕಮ್‌ಬ್ಯಾಕ್‌ ಮಾಡಿವೆ.

-masthmagaa.com

Contact Us for Advertisement

Leave a Reply