ಚಂಡಮಾರುತ ಜಾವದ್ ವಿಚಾರದಲ್ಲಿ ನೆಮ್ಮದಿಯ ಸುದ್ದಿ! ಏನು ಗೊತ್ತಾ?

masthmagaa.com:
ಚಂಡಮಾರುತ ಜಾವದ್ ವಿಚಾರದಲ್ಲಿ​​ ಒಡಿಶಾ ಮತ್ತು ಆಂಧ್ರ ಪ್ರದೇಶ ಕರಾವಳಿ ತೀರಕ್ಕೆ ನೆಮ್ಮದಿಯ ಸುದ್ದಿ ಸಿಕ್ಕಿದೆ. ಅದೇನಂದ್ರೆ ಎರಡೂ ರಾಜ್ಯಗಳ ನಡುವೆ ಅಪ್ಪಳಿಸಬೇಕಿದ್ದ ಜಾವದ್​ ತಿರುವು ಪಡ್ಕೊಂಡಿದೆ. ಹೊಸ ಲೆಕ್ಕಾಚಾರದ ಪ್ರಕಾರ ನಾಳೆ ಅಥವಾ ನಾಡಿದ್ದು ಜಾವದ್​​ ಒಡಿಶಾದ ಪುರಿಗೆ ಅಪ್ಪಳಿಸಬಹುದು ಅಂತ ಹವಾಮಾನ ಇಲಾಖೆ ತಿಳಿಸಿದೆ. ಇದ್ರ ಜೊತೆಗೆ ಚಂಡಮಾರುತ ಅಪ್ಪಳಿಸುವ ವೇಳೆಗೆ ಅದ್ರ ವೇಗ ಕಡಿಮೆಯಾಗ್ತಿದ್ದು, ಪುರಿಗೆ ಬಂದು ಅಪ್ಪಳಿಸಿದ್ರೂ ಅಷ್ಟೇನೂ ಹಾನಿಯಾಗಲ್ಲ. ನಂತರದಲ್ಲಿ ಅದು ಸೀದಾ ಪಶ್ಚಿಮ ಬಂಗಾಳದತ್ತ ಹಾದು ಹೋಗಲಿದೆ ಅಂತ ಹವಾಮಾನ ಇಲಾಖೆ ತಿಳಿಸಿದೆ. ಸದ್ಯ ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕರಾವಳಿ ತೀರದಲ್ಲಿ ಮುಂದಿನ 2 ದಿನಗಳಲ್ಲಿ ಮಳೆಯಾಗೋ ಸಾಧ್ಯತೆ ಇರೋದ್ರಿಂದ ಜನರನ್ನು, ಪ್ರವಾಸಿಗರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗ್ತಿದೆ. ಪುರಿ ಕರಾವಳಿ ತೀರದಲ್ಲಿರೋ ಅಂಗಡಿ ಮಾಲೀಕರು ತಮ್ಮ ಅಂಗಡಿಗಳು ಮತ್ತು ವಸ್ತುಗಳನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡ್ತಿರೋದು ಕಂಡು ಬಂತು.
-masthmagaa.com

Contact Us for Advertisement

Leave a Reply