ಫ್ಯಾಮಿಲಿ ಮ್ಯಾನ್ 3 ನಲ್ಲಿ ವಿಜಯ್ ಸೇತುಪತಿ ನಟಿಸುವುದು ಪಕ್ಕ!!?

masthmagaa.com

ಭಾರತದ ವೆಬ್​ ಸಿರೀಸ್​ಗಳ ಪೈಕಿ ‘ದಿ ಫ್ಯಾಮಿಲಿ ಮ್ಯಾನ್​’ ದೊಡ್ಡ ಯಶಸ್ಸು ಕಂಡಿದೆ. ಎರಡು ಸೀಸನ್​ಗಳಲ್ಲಿ ರಿಲೀಸ್​ ಆದ ಈ ವೆಬ್​ ಸರಣಿಗೆ ಪ್ರೇಕ್ಷಕರು ಫಿದಾ ಆಗಿದ್ದರು.

ಅಮೇಜಾನ್​ ಪ್ರೈಮ್​ನಲ್ಲಿ ಬಿಡುಗಡೆಯಾದ ‘ದಿ ಫ್ಯಾಮಿಲಿ ಮ್ಯಾನ್​’ ಒಂದು ಮತ್ತು ಎರಡನೇ ಸೀಸನ್​ ಸೂಪರ್​ ಹಿಟ್​ ಆಗಿರುವುದರಿಂದ 3ನೇ ಸೀಸನ್ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ.ಅದಕ್ಕಾಗಿ ಘಟಾನುಘಟಿ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲು ನಿರ್ದೇಶಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ವಿಜಯ್​ ಸೇತುಪತಿ ಜೊತೆ ಮಾತುಕತೆ ನಡೆದಿರುವ ಬಗ್ಗೆ ಮಾಹಿತಿ ಕೇಳಿಬರುತ್ತಿದ್ದು ಸದ್ಯಕ್ಕೆ ಯಾವುದು ಅಧಿಕೃತ ಆಗಿಲ್ಲ.

‘ದಿ ಫ್ಯಾಮಿಲಿ ಮ್ಯಾನ್​’ಗೆ ದೇಶಾದ್ಯಂತ ಪ್ರೇಕ್ಷಕರು ಇದ್ದಾರೆ. ದಕ್ಷಿಣ ಭಾರತದಲ್ಲಿ ಇನ್ನಷ್ಟು ಸಂಖ್ಯೆಯ ನೋಡುಗರನ್ನು ಸೆಳೆದುಕೊಳ್ಳಲು ಇಲ್ಲಿನ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳುವ ತಂತ್ರವನ್ನು ಬಳಸಲಾಗುತ್ತಿದೆ. ‘ದಿ ಫ್ಯಾಮಿಲಿ ಮ್ಯಾನ್​ 2’ನಲ್ಲಿ ಸಮಂತಾ ಅಕ್ಕಿನೇನಿ ಒಂದು ಖಡಕ್​ ಪಾತ್ರ ಮಾಡಿದ್ದಾರೆ. ಅದು ಜನಪ್ರಿಯತೆಯ ಜೊತೆಗೆ ಸಾಕಷ್ಟು ವಿವಾದವನ್ನೂ ಮೈಮೇಲೆ ಎಳೆದುಕೊಂಡಿತು. ಇದನೆಲ್ಲ ಬದಿಗೊತ್ತಿ ‘ದಿ ಫ್ಯಾಮಿಲಿ ಮ್ಯಾನ್​ 2’ ಈಗ ಯಶಸ್ವಿ ಆಗಿದೆ.

ಮೂಲಗಳ ಪ್ರಕಾರ, ‘ದಿ ಫ್ಯಾಮಿಲಿ ಮ್ಯಾನ್​ 2’ನಲ್ಲಿಯೇ ವಿಜಯ್​ ಸೇತುಪತಿ ನಟಿಸಬೇಕಿತ್ತಂತೆ. ಆದರೆ ಡೇಟ್ಸ್​ ಹೊಂದಾಣಿಕೆ ಆಗದ ಕಾರಣ ಅವರು ನಟಿಸಲು ಸಾಧ್ಯವಾಗಿಲ್ಲ. ಈಗ ಹೇಗಾದರೂ ಮಾಡಿ ಮೂರನೇ ಸೀಸನ್​ನಲ್ಲಿ ಅವರಿಂದ ಒಂದು ಮುಖ್ಯ ಪಾತ್ರ ಮಾಡಿಸಬೇಕು ಎಂದು ನಿರ್ದೇಶಕರು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಸಧ್ಯಕ್ಕೆ ವಿಜಯ್​ ಸೇತುಪತಿ ಕೂಡ ಇರುತ್ತಾರೆ ಎಂಬ ಸುದ್ದಿ ಹರಿದಾಡುತ್ತಿರುವುದರಿಂದ ಕೇಳಿಬರುತ್ತಿರುವುದರಿಂದ ಆ ಕೌತುಕ ದುಪ್ಪಟ್ಟಾಗಿದೆ.

masthmagaa.com

Contact Us for Advertisement

Leave a Reply