ತಾಲಿಬಾನಿಗಳು ಪಂಜ್​ಶಿರ್​ಗೆ ಬಂದೇ ಇಲ್ಲ: ಪಂಜ್​ಶಿರ್ ಗ್ಯಾಂಗ್

masthmagaa.com:

ನಿನ್ನೆಯಷ್ಟೇ ತಾಲಿಬಾನಿಗಳು ನಾವು ಪಂಜ್​ಶಿರ್ ಪ್ರಾಂತ್ಯದೊಳಗೆ ವಿವಿಧ ದಿಕ್ಕುಗಳಿಂದ ಎಂಟ್ರಿ ಕೊಟ್ಟಿದ್ದೀವಿ ಅಂತ ಹೇಳ್ಕೊಂಡಿದ್ರು. ಆದ್ರೆ ಇವೆಲ್ಲಾ ಸುಳ್ಳು. ಪಂಜ್​ಶಿರ್ ಒಳಗೆ ಇನ್ನೂ ತಾಲಿಬಾನಿಗಳು ಬಂದಿಲ್ಲ ಅಂತ ರೆಸಿಸ್ಟೆನ್ಸ್ ಫೋರ್ಸ್​ ಹೇಳಿಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಅಹ್ಮದ್ ಮಸ್ಸೌದ್ ಬೆಂಬಲಿಗರು, ಪಂಜ್​ಶಿರ್ ಪ್ರಾಂತ್ಯದ ಗಡಿಯನ್ನು ಯಾವುದೇ ತಾಲಿಬಾನ್ ದಾಟಿಲ್ಲ. ಯಾವುದೇ ರೀತಿಯ ಕಾಳಗ ಕೂಡ ಶುರುವಾಗಿಲ್ಲ ಅಂತ ಹೇಳಿದ್ದಾರೆ. ಅಂದಹಾಗೆ ಇಡೀ ಅಫ್ಘಾನಿಸ್ತಾನ ಕಂಟ್ರೋಲ್​​ಗೆ ಬಂದ್ರೂ ಈ ಒಂದು ಪ್ರಾಂತ್ಯ ಇನ್ನೂ ತಾಲಿಬಾನ್ ಕಂಟ್ರೋಲ್​​ಗೆ ಬಂದಿಲ್ಲ. ಇಲ್ಲಿನ ರೆಸಿಸ್ಟೆನಸ್ ಫೋರ್ಸ್​ ಮತ್ತು ತಾಲಿಬಾನಿಗಳ ಜೊತೆ ಈಗಾಗಲೇ ಮಾತುಕತೆ ಕೂಡ ಶುರುವಾಗಿದೆ.

-masthmagaa.com

Contact Us for Advertisement

Leave a Reply