ಬಗ್ಲನ್ ಪ್ರಾಂತ್ಯದಲ್ಲಿ ತಾಲಿಬಾನಿಗಳಿಂದ 3 ಜಿಲ್ಲೆಗಳ ಸ್ವಾತಂತ್ರ್ಯ!

masthmagaa.com:

ಅಫ್ಘಾನಿಸ್ತಾನ ವಶಕ್ಕೆ ಪಡೆದಿರೋ ತಾಲಿಬಾನಿಗಳು ಅಲ್ಲಿ ಸರ್ಕಾರ ರಚನೆಯ ಅವಸರದಲ್ಲಿದ್ರೆ ದೇಶದಲ್ಲಿ ಅವರಿಗೆ ವಿರೋಧ ದಿನದಿಂದ ದಿನಕ್ಕೆ ಜಾಸ್ತಿಯಾಗ್ತಿದೆ. ಬಗ್ಲನ್ ಪ್ರಾಂತ್ಯದ ಪೋಲ್ ಎ ಹೆಸಾರ್, ಡೇಹ್ ಸಲಾಹ್​ ಮತ್ತು ಖಸಾನ್ ಜಿಲ್ಲೆಯನ್ನು ತಾಲಿಬಾನ್ ವಿರೋಧಿಗಳು ವಶಕ್ಕೆ ಪಡೆದಿದ್ದಾರೆ. ಈ ಕಾರ್ಯಾಚರಣೆಯಲ್ಲಿ 40 ಮಂದಿ ತಾಲಿಬಾನಿಗಳನ್ನು ಹೊಡೆದುರುಳಿಸಿದ್ದು, ಕನಿಷ್ಠ 15 ಮಂದಿಗೆ ಗಾಯಗಳಾಗಿವೆ ಅಂತ ಸ್ಥಳೀಯರು ಹೇಳ್ಕೊಂಡಿದ್ದಾರೆ. ಈ ಬಗ್ಗೆ ಅಫ್ಘಾನಿಸ್ತಾನದ ಮಾಜಿ ಕಾರ್ಯಕಾರಿ ರಕ್ಷಣಾ ಸಚಿವ ಬಿಸ್ಮಿಲ್ಲಾ ಮುಹಮ್ಮದಿ ಕೂಡ ಮಾಹಿತಿ ನೀಡಿದ್ದಾರೆ. ಟ್ವೀಟ್ ಮಾಡಿರೋ ಅವರು, ದೇಶದಲ್ಲಿ ತಾಲಿಬಾನಿಗಳಿಗೆ ವಿರೋಧ ಇನ್ನೂ ಜೀವಂತವಾಗಿದೆ. ಬಗ್ಲನ್​ನ 3 ಜಿಲ್ಲೆಗಳನ್ನು ಅವರ ಕೈಯಿಂದ ಕಿತ್ತುಕೊಳ್ಳಲಾಗಿದೆ ಅಂತ ಹೇಳಿದ್ದಾರೆ. ಅಂದಹಾಗೆ ಬಿಸ್ಮಿಲ್ಲಾ ಮುಹಮ್ಮದಿ ಸದ್ಯ ಪಂಜ್​ಶೀರ್ ಪ್ರಾಂತ್ಯದಲ್ಲಿದ್ದಾರೆ. ಇಡೀ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಕೈಗೆ ಜಾರದೇ ಉಳಿದಿರೋ ಏಕೈಕ ಪ್ರಾಂತ್ಯ ಅಂದ್ರೆ ಅದು ಪಂಜ್​ಶಿರ್​.. ಇನ್ನು ಬಗ್ಲನ್​​ನಲ್ಲಿ ತಾಲಿಬಾನಿಗಳಿಂದ 3 ಜಿಲ್ಲೆಗಳನ್ನು ವಶಕ್ಕೆ ಪಡೆದಿರೋದು ವಿರೋಧಿ ಪಡೆಗಳು ಅಂತ ವರದಿಯಾಗಿದೆ. ಆದ್ರೆ ಅದು ಸೇನೆಯೋ, ಬಂಡುಕೋರರ ಗುಂಪಾ ಅಥವಾ ಜನರೇ ಒಟ್ಟಾಗಿ ವಶಕ್ಕೆ ಪಡೆದಿದ್ದಾ ಅನ್ನೋದು ಮಾತ್ರ ಇನ್ನೂ ಕ್ಲಿಯರ್ ಆಗಿಲ್ಲ.

-masthmagaa.com

Contact Us for Advertisement

Leave a Reply