ರೆಸ್ಟೋರೆಂಟ್ ಮಾಲೀಕನನ್ನು ಕೊಂದ ಸ್ವಿಗ್ಗಿ ಡೆಲಿವರಿ ಬಾಯ್!

masthmagaa.com:

ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್ ಒಬ್ಬ ಆರ್ಡರ್ ಐಟಮ್ಸ್ ನೀಡಲು ತಡ ಮಾಡಿದ್ದಕ್ಕೆ ರೆಸ್ಟೋರೆಂಟ್ ಓನರ್​​ನ್ನೇ ಹತ್ಯೆ ಮಾಡಿದ್ದಾನೆ. ಮೃತ ವ್ಯಕ್ತಿ ಸುನಿಲ್ ಝಮ್ ಝಮ್ ಅನ್ನೋ ರೆಸ್ಟೋರೆಂಟ್ ನಡೆಸ್ತಿದ್ರು. ನಿನ್ನೆ ರಾತ್ರಿ ಸ್ವಿಗ್ಗಿಯಲ್ಲಿ ಯಾರೋ ಚಿಕನ್ ಬಿರಿಯಾನಿ ಮತ್ತು ಪುರಿ ಸಬ್ಜಿ ಆರ್ಡರ್ ಮಾಡಿದ್ರು. ಅದನ್ನು ಕೆಲೆಕ್ಟ್ ಮಾಡೋಕೆ ಸ್ವಿಗ್ಗಿ ಡೆಲಿವರಿ ಬಾಯ್ ಬಂದಾಗ ಐಟಮ್ಸ್ ಕೊಡೋದು ಸ್ವಲ್ಪ ತಡವಾಗಿದೆ. ಡೆಲಿವರಿ ಬಾಯ್ ಗಲಾಟೆ ಶುರು ಮಾಡಿದ್ದು, ಈ ವೇಳೆ ಓನರ್ ಸುನಿಲ್ ಮಧ್ಯಪ್ರವೇಶಿಸಿದಾಗ ಗುಂಡಿಕ್ಕಿ ಓಡಿಹೋಗಿದ್ದಾನೆ. ಆತ ಕುಡಿದ ಅಮಲಲ್ಲಿದ್ದು, ಆತನ ಜೊತೆಗೆ ಮತ್ತೋರ್ವ ಕೂಡ ಇದ್ದ ಅಂತ ಗೊತ್ತಾಗಿದೆ. ಸದ್ಯ ಕೇಸ್ ದಾಖಲಿಸಿರೋ ಪೊಲೀಸರು ಆರೋಪಿಗಳಿಗೆ ಹುಡುಕಾಡ್ತಿದ್ದಾರೆ.

-masthmagaa.com

Contact Us for Advertisement

Leave a Reply