ರೇವಣ್ಣ ಪ್ರಕಾರ ಡಸ್ಟ್ ಬಿನ್‍ನಲ್ಲಿ ಇದ್ದವರು ಯಾರು..?

ಎಚ್.ಡಿ.ದೇವೇಗೌಡ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಡಸ್ಟ್ ಬಿನ್‍ನಲ್ಲಿ ಇದ್ದವರನ್ನೆಲ್ಲಾ ಕರ್ಕೊಂಡ್ ಬಂದು ಎಲೆಕ್ಷನ್‍ಗೆ ನಿಲ್ಲಿಸ್ತಾರೆ ಅಂತ ರೇವಣ್ಣ ಹೇಳಿದ್ದಾರೆ. ಹಾಸನದಲ್ಲಿ ಮಾತನಾಡಿದ ಮಾಜಿ ಸಚಿವ ರೇವಣ್ಣ, ಪಕ್ಷದ ವಿರುದ್ಧ ಮಾತನಾಡಿದವರಿಗೆಲ್ಲಾ ತಿರುಗೇಟು ಕೊಟ್ಟಿದ್ದಾರೆ. ಕುಮಾರಸ್ವಾಮಿ ಒಂದು ರೀತಿ ಧರ್ಮರಾಯ ಇದ್ದಂತೆ. ಯಾರು ಎಲ್ಲಿದ್ದರು..? ಅವರ ತೂಕ ಏನು ಅನ್ನೋದನ್ನ ನೋಡದೇ ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್ ಕೊಟ್ಟು ಗೆಲ್ಲಿಸ್ತಾರೆ. ಆದ್ರೆ ಗೆದ್ದ ಬಳಿಕ ಅವರೇ ಪಕ್ಷದ ವಿರುದ್ಧ, ಕುಮಾರಸ್ವಾಮಿ ವಿರುದ್ಧ ತಿರುಗಿಬೀಳ್ತಾರೆ ಎಂದಿದ್ದಾರೆ.

ಇನ್ನು ನಾನ್ ಸಿಎಂ ಆಗಿರಲಿ, ಡಿಸಿಎಂ ಆಗಿರಲಿ. ಯಾವುದಕ್ಕೆ ಬೇಕಾದ್ರೂ ಸೀಲ್ ಒತ್ತಿಸಿಕೊಂಡು ಬರುತ್ತೇನೆ ಎಂದಿದ್ದಾರೆ. ಈ ಮೂಲಕ ಡಿಸಿಎಂ ಆಗೋದನ್ನು ತಪ್ಪಿಸಿದ್ರು ಎಂದಿದ್ದ ಜಿ.ಟಿ.ದೇವೇಗೌಡರಿಗೆ ತಿರುಗೇಟು ಕೊಟ್ಟಿದ್ದಾರೆ.

Contact Us for Advertisement

Leave a Reply