ಶ್ರೀಮಂತರ ಸ್ಪೇಸ್​ ರೇಸ್​: ಬೆಝೋಸ್​ ಹಿಂದಿಕ್ಕಲಿರೋ ಬ್ರಾನ್ಸನ್

masthmagaa.com:

ಅಮೆಜಾನ್ ಸಂಸ್ಥಾಪಕ ಜೆಫ್ ಬೆಝೋಸ್​, ಸ್ಪೇಸ್​​ಎಕ್ಸ್​ ಸಂಸ್ಥಾಪಕ ಎಲಾನ್ ಮಸ್ಕ್​, ವರ್ಜಿನ್ ಗ್ರೂಪ್ ಸಂಸ್ಥಾಪಕ ರಿಚರ್ಡ್ ಬ್ರಾನ್ಸನ್​.. ಮೂವರು ಕೂಡ ಕುಬೇರರೇ.. ಇಂಥಾ ಆಗರ್ಭ ಶ್ರೀಮಂತರ ನಡುವೆ ಈಗ ಸ್ಪೇಸ್​ ಶುರುವಾಗಿದೆ. ಜೆಫ್​ ಬೆಝೋಸ್​ ಅಂತೂ ತಮ್ಮ ತಮ್ಮನ ಜೊತೆ ಜುಲೈ 20ಕ್ಕೆ ಬಾಹ್ಯಾಕಾಶಕ್ಕೆ ಹಾರೋದಾಗಿ ಈಗಾಗಲೇ ಘೋಷಿಸಿಬಿಟ್ಟಿದ್ದಾರೆ. ತಾವೇ ಕಟ್ಟಿರೋ ಬ್ಲೂ ಆರಿಜಿನ್ ಕಂಪನಿಯ ಸ್ಪೇಸ್​ಕ್ರಾಫ್ಟ್​ ಏರಿ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಬೆಝೋಸ್. ಆದ್ರೆ ಬೆಝೋಸ್​ಗಿಂತ ಮೊದಲೇ ತಾನು ಬಾಹ್ಯಾಕಾಶಕ್ಕೆ ಹೋಗೋದಾಗಿ ವರ್ಜಿನ್​ ಗ್ರೂಪ್​ನ ಸಂಸ್ಥಾಪಕ ರಿಚರ್ಡ್ ಬ್ರಾನ್ಸನ್​ ​ಘೋಷಿಸಿದ್ದಾರೆ. ಜುಲೈ 11ಕ್ಕೆ ತಮ್ಮದೇ ವರ್ಜಿನ್​ ಗ್ಯಾಲಾಕ್ಟಿಕ್ ಕಂಪನಿಯ ವಿಎಸ್​ಎಸ್​ ಯುನಿಟಿ​ ಸ್ಪೇಸ್​ಪ್ಲೇನ್​ನಲ್ಲಿ ರಿಚರ್ಡ್​ ಬ್ರಾನ್ಸನ್​ ಸ್ಪೇಸ್​ ಟೂರ್ ಕೈಗೊಳ್ಳಲಿದ್ದಾರೆ. ಇವರ ಜೊತೆಗೆ ಮೂವರು ಮಿಷನ್​ ಸ್ಪೆಷಲಿಸ್ಟ್ಸ್​ ಮತ್ತು ಇಬ್ಬರು ಪೈಲಟ್​ – ಒಟ್ಟು 6 ಜನ ಈ ಟ್ರಿಪ್​ ಕೈಗೊಳ್ಳಲಿದ್ದಾರೆ. ಈ ಮೂಲಕ ಬಾಹ್ಯಾಕಾಶಕ್ಕೆ ಹೋದ ಮೊದಲ ಅಗರ್ಭ ಶ್ರೀಮಂತ ಎನಿಸಿಕೊಳ್ಳಲಿದ್ದಾರೆ ರಿಚರ್ಡ್ ಬ್ರಾನ್ಸನ್​. ಜೊತೆಗೆ ಜೆಫ್​ ಬೆಝೋಸ್​ರ ಸ್ಪೇಸ್​ ಟೂರಿಸಂ ವೆಂಚುರ್ ಆಗಿರೋ ಬ್ಲೂ ಆರಿಜಿನ್​ಗೆ ರಿಚರ್ಡ್​ ಬ್ರಾನ್ಸನ್​ ಅವರ ವರ್ಜಿನ್​ ಗ್ಯಾಲಾಕ್ಟಿಕ್ ಟಕ್ಕರ್ ಕೊಟ್ಟಂತಾಗಿದೆ. ಬಿಲೇನೇರ್​​ಗಳ ಈ ಸ್ಪೇಸ್​ ರೇಸ್​ನಿಂದ​ ಪ್ರೈವೆಟ್​ ಕಮರ್ಷಿಯಲ್​ ಸ್ಪೇಸ್​ ಟ್ರಾವೆಲ್​ನಲ್ಲಿ ಹೊಸ ಯುಗವೇ ಆರಂಭವಾಗಲಿದೆ. ಅಂದ್ಹಾಗೆ ಬ್ರಾನ್ಸನ್​ ಅವರ ಜುಲೈ 11ರ ಮಿಷನ್ ವಿಎಸ್​ಎಸ್​ ಯುನಿಟಿಯ 22ನೇ ಟೆಸ್ಟ್​ ಫ್ಲೈಟ್​ ಮತ್ತು ಮನುಷ್ಯರನ್ನ ಕರ್ಕೊಂಡ್​ ಹೋಗ್ತಿರೋ ನಾಲ್ಕನೇ ಸ್ಪೇಸ್​​ಕ್ರಾಫ್ಟ್​ ಆಗಲಿದೆ ಅಂತ ವರ್ಜಿನ್​ ಕಂಪನಿ ಹೇಳಿದೆ. ಇನ್ನು ಸ್ಪೇಸ್​ಎಕ್ಸ್ ಕಂಪನಿಯ ಸಂಸ್ಥಾಪಕ ಎಲಾನ್ ಮಸಸ್ಕ್​ಗೂ​ ಬಾಹ್ಯಾಕಾಶ ಟೂರ್ ಕೈಗೊಳ್ಳೋ ಆಸೆಯಿದ್ರೂ ಅದಕ್ಕಿನ್ನೂ ಡೇಟ್​ ಫಿಕ್ಸ್ ಮಾಡಿಲ್ಲ.

-masthmagaa.com

Contact Us for Advertisement

Leave a Reply