ನನ್ನ ಗಂಡ ಬೈಡೆನ್‌ 30ರ ಯುವಕರಿಗಿಂತ ಕಡಿಮೆಯಿಲ್ಲ: ಜಿಲ್‌ ಬೈಡೆನ್‌

masthmagaa.com:

ಅಮೆರಿಕ ಅಧ್ಯಕ್ಷೀಯ ಆಕಾಂಕ್ಷಿಯಾಗಿರುವ ಭಾರತೀಯ ಮೂಲದ ನಿಕ್ಕಿ ಹಾಲೆ ದಿನಕ್ಕೊಂದು ಹೇಳಿಕೆ ಕೊಟ್ಟು ಸುದ್ಧಿಯಾಗ್ತಿದಾರೆ. ಇತ್ತೀಚಿಗೆ 75 ವರ್ಷ ಮೇಲ್ಪಟ್ಟ ಅಧ್ಯಕ್ಷೀಯ ಅಭ್ಯರ್ಥಿಗಳಿಗೆ ಮಾನಸಿಕ ಸಾಮರ್ಥ್ಯ ಪರೀಕ್ಷೆ ಮಾಡ್ಬೇಕು ಅಂತ ಹಾಲಿ ಅಧ್ಯಕ್ಷ ಬೈಡೆನ್‌ರನ್ನ ಟಾರ್ಗೆಟ್‌ ಮಾಡ್ಕೊಂಡು ನಿಕ್ಕಿ ಹಾಲೆ ಹೇಳಿದ್ರು. ಇದೀಗ ಗಂಡನ ವಿರುದ್ದ ಮಾತನಾಡಿದ್ದಕ್ಕೆ ಬೈಡನ್‌ ಪತ್ನಿ ಜಿಲ್‌ ಬೈಡೆನ್‌ ನಿಕ್ಕಿ ಹಾಲೆ ವಿರುದ್ದ ತೀವ್ರ ವಾಗ್ದಾಳಿ ಮಾಡಿದ್ದಾರೆ. ನಿಕ್ಕಿ ಹಾಲೆ ಅವರ ಹೇಳಿಕೆ, ಹಾಸ್ಯಾಸ್ಪದ..ಅಂತಹ ವಿಷಯಗಳನ್ನ ನಾವು ಯಾವುತ್ತೂ ಚರ್ಚೆ ಮಾಡಲ್ಲ. ಬೈಡೆನ್‌ ಅವರು ಆಕ್ಟೀವ್‌ ಆಗಿ ಇದ್ದಾರೆ ಅನ್ನೋದಕ್ಕೆ ಇತ್ತೀಚಿಗೆ ಅವರು ಯುಕ್ರೇನ್‌ಗೆ ಹೋಗಿದ್ದೇ ಸಾಕ್ಷಿ. ಯಾವ 30 ವರ್ಷದ ವ್ಯಕ್ತಿ ತಾನೇ ಪೊಲಾಂಡ್‌ಗೆ ಹೋಗಿ ಅಲ್ಲಿಂದ ಟ್ರೈನ್‌ನಲ್ಲಿ 9 ಗಂಟೆ ಪ್ರಯಾಣ ಮಾಡಿ ಯುಕ್ರೇನ್‌ಗೆ ಸೀಕ್ರೇಟ್‌ ಆಗಿ ಹೋಗ್ತಾರೆ? ಅಲ್ಲಿನ ಅಧ್ಯಕ್ಷ ಝೆಲೆನ್ಸ್ಕಿ ಅವ್ರನ್ನ ಮೀಟ್‌ ಮಾಡ್ತಾರೆ? ನೀವೆ ನೋಡಿ ಈ ವಯಸ್ಸಲ್ಲಿ ಅವ್ರು ಎಷ್ಟೆಲ್ಲಾ ಮಾಡ್ತಿದಾರೆ ಅಂತ ಜಿಲ್‌ ಬೈಡೆನ್‌ ತಮ್ಮ ಗಂಡನ ಕೆಲಸವನ್ನ ಕೊಂಡಾಡಿದ್ದಾರೆ. ಅಂದಹಾಗೆ ಬೈಡೆನ್‌ ಅವರು ವಿಮಾನದ ಮೂಲಕ ಯುಕ್ರೇನ್‌ಗೆ ಹೋಗಿದ್ರು ಅಂತ ಸುದ್ದಿಯಾಗಿತ್ತು. ಆದ್ರೆ ಜಿಲ್‌ ಬೈಡೆನ್‌ ಮಾತ್ರ ಬೈಡೆನ್‌ ಅವರು ರೈಲಿನಲ್ಲಿ ಹೋಗಿದ್ರು ಅಂತ ಹೇಳಿದ್ದಾರೆ. ಇದು ತೀವ್ರ ಕೂತುಹಲ ಕೆರಳಿಸಿದೆ.

-masthmagaa.com

Contact Us for Advertisement

Leave a Reply