ಸರಿಯಾಗಿ ತಿಳ್ಕೊಂಡು ಮಾತಾಡಿ: ರಿಹಾನ್ನಾ, ಗ್ರೇಟಾಗೆ ಭಾರತದ ಗುನ್ನಾ!

masthmagaa.com:

ದೇಶದಲ್ಲಿ ನಡೀತಿರೋ ರೈತರ ಪ್ರತಿಭಟನೆ ಬಗ್ಗೆ ಮಾತನಾಡಿರೋ, ಟ್ವೀಟ್ ಮಾಡಿರೋ ಪಾಪ್ ಗಾಯಕಿ ರಿಹಾನ್ನಾ, ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್​ಬರ್ಗ್​​ ಮತ್ತು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ಅವರ ಸೋದರ ಸೊಸೆ ಮೀನಾ ಹ್ಯಾರಿಸ್​ ಸೇರಿದಂತೆ ವಿದೇಶಿ ಗಣ್ಯರ ವಿರುದ್ಧ ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆ ಹೇಳಿಕೆಯೊಂದನ್ನ ಬಿಡುಗಡೆ ಮಾಡಿ ತೀವ್ರ ವಾಗ್ದಾಳಿ ನಡೆಸಿದೆ. ‘ಕೆಲವೊಂದು ಪಟ್ಟಭದ್ರ ಹಿತಾಸಕ್ತಿಗಳು ಸೇರ್ಕೊಂಡು ಭಾರತದ ವಿರುದ್ಧ ಅಂತಾರಾಷ್ಟ್ರೀಯ ಸಮುದಾಯವನ್ನ ಎತ್ತಿ ಕಟ್ಟೋಕೆ ಪ್ರಯತ್ನಿಸಿವೆ. ಅದಕ್ಕೆ ಜನವರಿ 26ರಂದು ನಡೆದ ಘಟನೆಯೇ ಸಾಕ್ಷಿ. ಸಾಮಾಜಿಕ ಜಾಲತಾಣಗಳಲ್ಲಿ ಇದನ್ನ ಉತ್ತೇಜಿಸಲು ಸೆಲೆಬ್ರಿಟಿಗಳು ಮತ್ತು ಇತರರು ಕೊಟ್ಟ ಹೇಳಿಕೆ, ಮಾಡಿದ ಕಾಮೆಂಟ್​ ಮತ್ತು ಹ್ಯಾಷ್​ಟ್ಯಾಗ್​ಗಳು ಸರಿಯಾಗಿಲ್ಲ, ಜವಾಬ್ದಾರಿಯುತವಾಗಿಲ್ಲ. ಈ ಕೃಷಿ ಸುಧಾರಣಾ ಕಾನೂನುಗಳ ಬಗ್ಗೆ ಸಂಪೂರ್ಣವಾಗಿ ಚರ್ಚೆ ನಡೆದ ಬಳಿಕವಷ್ಟೇ ಭಾರತದ ಸಂಸತ್ ಅವುಗಳನ್ನ ಪಾಸ್ ಮಾಡಿದೆ. ಈ ಸುಧಾರಣೆಗಳು ರೈತರಿಗೆ ಮಾರುಕಟ್ಟೆ ವ್ಯಾಪ್ತಿಯನ್ನ ಹೆಚ್ಚು ಮಾಡುತ್ತೆ. ಹೆಚ್ಚು ಆಯ್ಕೆಗಳನ್ನ ನೀಡುತ್ತೆ. ಹೀಗಾಗಿ ಇಂತಹ ವಿಚಾರಗಳ ಬಗ್ಗೆ ಕಾಮೆಂಟ್​ ಮಾಡುವಾಗ, ಹೇಳಿಕೆ ನೀಡೋವಾಗ ನಿಜ ಏನು ಅನ್ನೋದನ್ನ ತಿಳಿದುಕೊಳ್ಳಬೇಕು, ಅರ್ಥ ಮಾಡಿಕೊಳ್ಳಬೇಕು. ಸಾಮಾಜಿಕ ಮಾಧ್ಯಮಗಳಲ್ಲಿ ನೀಡುವ ಪ್ರಚೋದನಾಕಾರಿ ಹೇಳಿಕೆ, ಹ್ಯಾಷ್‌ಟ್ಯಾಗ್‌ಗಳು ಜವಾಬ್ದಾರಿಯಿಂದ ಕೂಡಿರುವುದಿಲ್ಲ. ವಿಶೇಷವಾಗಿ ಸೆಲೆಬ್ರಿಟಿಗಳು ಈ ರೀತಿ ಮಾಡಿದಾಗ’ ಅಂತ ವಿದೇಶಾಂಗ ಇಲಾಖೆ ಹೇಳಿದೆ. ಈ ಮೂವರೂ ಕೂಡ ದೆಹಲಿ ಗಡಿಯಲ್ಲಿ ನಡೀತಿರೋ ಪ್ರತಿಭಟನೆಗೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದರು. ಆದ್ರೆ ಭಾರತದ ಆಂತರಿಕ ವಿಚಾರದಲ್ಲಿ ವಿದೇಶಿಗರು ಮೂಗು ತೂರಿಸೋದೇಕೆ ಅನ್ನೋ ಆಕ್ರೋಶ ಕೂಡ ಕೇಳಿ ಬಂದಿತ್ತು.

-masthmagaa.com

Contact Us for Advertisement

Leave a Reply