ಚೀನಾದಲ್ಲಿ ಕೊರೋನಾ ಜೊತೆ ಜೊತೆಗೇ ಬರ್ತಿದೆ ಹಕ್ಕಿಜ್ವರ!

masthmagaa.com:

ಚೀನಾದಲ್ಲಿ ಹಕ್ಕಿಜ್ವರದ ಸೋಂಕು ತಗಲುತ್ತಿರುವವರ ಸಂಖ್ಯೆ ದಿನೇ ದಿನೇ ಜಾಸ್ತಿಯಾಗ್ತಿರೋದು ತಜ್ಞರ ಆತಂಕಕ್ಕೆ ಕಾರಣವಾಗಿದೆ. ಈಗ ಹರಡುತ್ತಿರುವ ಹಕ್ಕಿಜ್ವರದ ತಳಿ ಕಳೆದ ಬಾರಿಗೆ ಹೋಲಿಸಿದ್ರೆ ರೂಪಾಂತರಗೊಂಡಿದ್ದು, ತುಂಬಾ ಹೆಚ್ಚು ಹರಡೋ ಸಾಮರ್ಥ್ಯ ಇರಬಹುದು ಅಂತ ತಜ್ಞರು ಅಭಿಪ್ರಾಯಪಟ್ಟಿದ್ಧಾರೆ. ಚೀನಾದಲ್ಲಿ ಈ ವರ್ಷ ಈವರೆಗೆ 21 ಮಂದಿಯಲ್ಲಿ ಹೆಚ್​​5ಎನ್​​6 ಹಕ್ಕಿಜ್ವರ ಅಂಟಿದೆ. ಕಳೆದ ವರ್ಷ ಇದು ಕೇವಲ 5 ಮಂದಿಯಲ್ಲಿ ಮಾತ್ರವೇ ಪತ್ತೆಯಾಗಿದೆ. ಆದ್ರೆ 2017ಕ್ಕೆ ಹೋಲಿಸಿದ್ರೆ ಈ ಸಂಖ್ಯೆ ಕಡಿಮೆ ಅಂತಲೇ ಹೇಳಬಹುದು. ಯಾಕಂದ್ರೆ ಆವಾಗ ಚೀನಾದಲ್ಲಿ ನೂರಾರು ಮಂದಿಗೆ ಹೆಚ್​​​7ಎನ್9 ಹಕ್ಕಿಜ್ವರ ತಗುಲಿತ್ತು. ಹಲವರು ಗಂಭೀರ ಸ್ಥಿತಿಗೆ ಬಂದ್ರೆ 6 ಮಂದಿ ಪ್ರಾಣ ಕಳ್ಕೊಂಡಿದ್ರು. ಆದ್ರೂ ಕೂಡ ಈ ವೈರಾಣು ತುಂಬಾ ಮಾರಕವಾಗೋ ಸಾಧ್ಯತೆ ಇರೋದ್ರಿಂದ ಈ ವರ್ಷ ಸೋಂಕಿತರ ಸಂಖ್ಯೆ ಹೆಚ್ಚಿರೋದು ಆತಂಕಕ್ಕೆ ಕಾರಣವಾಗಿದೆ. ಕೋಳಿಫಾರಂ ಸಂಪರ್ಕದಿಂದ ಹೆಚ್ಚಿನವರಿಗೆ ಈ ವೈರಾಣು ಅಂಟಿದ್ದು, ಮನುಷ್ಯರಿಂದ ಮನುಷ್ಯರಿಗೆ ಹರಡಿರೋ ಬಗ್ಗೆ ಈವರೆಗೆ ಮಾಹಿತಿ ಸಿಕ್ಕಿಲ್ಲ ಅಂತ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಇನ್ನು ಚೀನ ವಿಶ್ವದ ಅತಿ ದೊಡ್ಡ ಪೌಲ್ಟ್ರಿ ಮತ್ತು ಬಾತುಕೋಳಿ ಉತ್ಪಾದಕ ದೇಶವಾಗಿದೆ. ಅದೇ ಕಾರಣಕ್ಕೆ ಇಲ್ಲಿ ವೈರಾಣುಗಳ ಸಂಖ್ಯೆ ಕೂಡ ಜಾಸ್ತಿಯೇ ಇದೆ. ಆದ್ರೆ ಹಕ್ಕಿಜ್ವರದ ಈ ಹೊಸ ತಳಿ ಮನುಷ್ಯರಲ್ಲಿ ಪತ್ತೆಯಾಗಿರೋ ಬಗ್ಗೆ ಚೀನಾದ ನ್ಯಾಷನಲ್ ಹೆಲ್ತ್ ಕಮಿಷನ್ ಯಾವುದೇ ಮಾಹಿತಿ ನೀಡಿಲ್ಲ.

-masthmagaa.com

Contact Us for Advertisement

Leave a Reply