ʻಗೇಮ್‌ ಚೆಂಜರ್‌ ಆಫ್‌ ದಿ ಇಯರ್‌ʼ ಅವಾರ್ಡ್‌ ಪಡೆದ ರಿಷಬ್‌ ಶೆಟ್ಟಿ!

masthmagaa.com:

ರಿಷಬ್‌ ಶೆಟ್ಟಿ ಅವರಿಗೆ 2022 ತುಂಬಾ ಮಹತ್ವದ ವರ್ಷ ಅಂತಾ ಹೇಳಬಹುದು. ʻಕಾಂತಾರಾʼ ಸಿನಿಮಾ ರಿಷಬ್‌ ಅವರ ಸಿನಿಪಯಣವನದಲ್ಲಿ ಹೊಸದೊಂದು ಅಧ್ಯಾಯ ಶುರುಮಾಡಿದೆ. ಇನ್ನೂ ʼಕಾಂತಾರಾʼ ಚಿತ್ರದ ಮೂಲಕ ರಿಷಬ್ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡು ಸಾಕಷ್ಟು ಯಶಸ್ಸು ಪಡೆದುಕೊಂಡರು. ವಿಶ್ವಸಂಸ್ಥೆಯಲ್ಲಿಯೂ ಸಿನಿಮಾದ ಕುರಿತು ಕನ್ನಡದಲ್ಲಿ ಮಾತನಾಡಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡರು. ಇದೀಗ ಮತ್ತೊಂದು ಖ್ಯಾತಿ ಇವರನ್ನ ಅರಸಿ ಬಂದಿದೆ. ಲುಮಿನಸ್‌ OTT ಪ್ಲೇ ಚೇಂಜ್‌ ಮೇಕರ್ಸ್‌ ಅವಾರ್ಡ್ಸ್‌ 2023 ಇಂದ ರಿಷಬ್‌ ಶೆಟ್ಟಿ ಅವರಿಗೆ ʻಗೇಮ್‌ ಚೆಂಜರ್‌ ಆಫ್‌ ದಿ ಇಯರ್‌ʼ ಅವಾರ್ಡ್‌ ದೊರೆತಿದೆ. ಸಿನಿಮಾರಂಗದಲ್ಲಿ ಹೊಸ ಕ್ರಾಂತಿಯನ್ನ ಮೂಡಿಸಿದಂತಹ ಪ್ರತಿಭೆಗಳನ್ನ ಸನ್ಮಾನಿಸಿ ಗೌರವಿಸುವುದು ಲುಮಿನಸ್‌ ಓಟಿಟಿ ಪ್ಲೇ ಚೇಂಜ್‌ ಮೇಕರ್ಸ್‌ ಅವಾರ್ಡ್ಸನ ಉದ್ದೇಶ. ಮುಂಬೈನ ಪ್ರಸಿದ್ಧ JW ಮ್ಯಾರಿಯಟ್‌ನಲ್ಲಿ ನಡೆದ ಅವಾರ್ಡ್ಸ್‌ ಕಾರ್ಯಕ್ರಮದಲ್ಲಿ ರಿಷಬ್‌ ಅವರಿಗೆ ʻಗೇಮ್‌ ಚೆಂಜರ್‌ ಆಫ್‌ ದಿ ಇಯರ್‌ʼ ಅವಾರ್ಡ್‌ ನೀಡಲಾಯಿತು.
ಕಾಂತಾರ ಇದೊಂದು ಅದ್ಬುತವಾದ ಸಿನಿಮಾ.

ಈ ಸಿನಿಮಾದಲ್ಲಿ ದೈವಿಕತೆ ಇದೆ, ಭಕ್ತಿ ಇದೆ, ಅಲೌಕಿಕ ಶಕ್ತಿ ಇದೆ, ಉತ್ತಮ ಸಂದೇಶವಿದೆ, ಕಣ್ಣಿಗೆ ಹಬ್ಬ ನೀಡುವ ದೃಶ್ಯಗಳಿವೆ, ಕಿವಿಗೆ ಆನಂದ ನೀಡುವ ಅದ್ಭುತ ಹಾಡುಗಳಿವೆ, ಮೈ ಜುಮ್ ಎನಿಸುವಂಥ ಬ್ಯಾಕ್​ಗ್ರೌಂಡ್ ಮ್ಯೂಸಿಕ್ ಇದೆ. ಪುರಾಣ, ಜಾನಪದ, ಮಣ್ಣಿನ ಸಂಸ್ಕೃತಿ, ಡ್ರಾಮಾ ಮತ್ತು ಆಕ್ಷನ್ ಗಳ ಸಂಗಮವೇ ಈ ಕಾಂತಾರ ಸಿನಿಮಾ. ಕಾಂತಾರದ ಕ್ಲೈಮ್ಯಾಕ್ಸ್ ನಿಜಕ್ಕೂ ವಿಸ್ಮಯಕಾರಿ. ಕಾಂತಾರದ ಕ್ಲೈಮ್ಯಾಕ್ಸ್ ಅನ್ನ ಬಿಜಿಎಂ ಮತ್ತಷ್ಟು ಶ್ರೀಮಂತಗೊಳಿಸಿದೆ. ಭೂತ ಕೋಲ ಟ್ಯೂನ್ ಅನ್ನು ಸ್ಯಾಕ್ಸೋಫೋನ್‌, ಶಹನಾಯಿ ಮತ್ತು ಡ್ರಮ್​ಗಳನ್ನು ಬಳಸಿ ಮತ್ತೊಂದು ಲೆವೆಲ್​ಗೆ ತೆಗೆದುಕೊಂಡು ಹೋಗಲಾಗಿದೆ. ಸಮಾಜದ ಎಲ್ಲ ಗಡಿಯನ್ನ ಮೀರಿ ಕಾಂತಾರಾ ಸಿನಿಮಾ ವಿಶ್ವಮಟ್ಟದಲ್ಲಿ ರಾರಾಜಿಸಿದೆ. ಈ ಎಲ್ಲ ಕೀರ್ತಿ ರಿಷಬ್‌ ಶೆಟ್ಟಿಯವರಿಗೆ ಹಾಗೂ ಸಿನಿಮಾತಂಡಕ್ಕೆ ಸಲ್ಲುತ್ತದೆ.

-masthmagaa.com

Contact Us for Advertisement

Leave a Reply