ಮತ್ತೊಮ್ಮೆ ಟೀಕೆಗೆ ಗುರಿಯಾದ ರಿಷಿ ಸುನಾಕ್‌! ಕಾರಣ ಏನು?

masthmagaa.com:

ಬ್ರಿಟನ್‌ನ ಪ್ರಧಾನಿ ಚುನಾವಣೆ ಇನ್ನೇನ್‌ ಹತ್ತಿರ ಬರ್ತಿದ್ದಂತೆ ರಿಷಿ ಸುನಾಕ್, ಅವರ ಜೀವನಶೈಲಿ ವಿಚಾರವಾಗಿ ಮತ್ತೊಮ್ಮೆ ಟೀಕೆಗೆ ಗುರಿಯಾಗಿದ್ದಾರೆ. ರಿಷಿ ತಮ್ಮ ಐಷರಾಮಿ ಮನೆಯಲ್ಲಿ ಸ್ವಿಮ್ಮಿಂಗ್‌ ಪೂಲ್‌ನ ನಿರ್ಮಾಣಕ್ಕಾಗಿ ಸುಮಾರು 3.8 ಕೋಟಿ ರೂಪಾಯಿಯನ್ನ ವೆಚ್ಚ ಮಾಡ್ತಿದಾರೆ ಅಂತ ಹೇಳಲಾಗ್ತಿದೆ. ಪೂಲ್‌ ಜೊತೆ ಟೆನ್ನಿಸ್‌ ಕೋರ್ಟ್‌ ಹಾಗೂ ಜಿಮ್‌ ಕೂಡ ಕಟ್ಟಿಸ್ತಿದಾರೆ ಅಂತ ಪತ್ರಿಕೆಯೊಂದುರ ವರದಿ ಮಾಡಿದೆ. ಅಂದ್ಹಾಗೆ ಇಂಧನ ಬೆಲೆ ಏರಿಕೆಯಿಂದಾಗಿ ಲೋಕಲ್‌ ಪೂಲ್‌ಗಳನ್ನ ಮುಚ್ಚಲಾಗಿದೆ. ಜೊತೆಗೆಇಂಗ್ಲೆಂಡ್‌ನ ಕೆಲವು ಭಾಗಗಳು ಬರಗಾಲ ಮತ್ತು ತೀವ್ರವಾದ ಹೀಟ್‌ವೇವ್‌ನ್ನ ಎದುರಿಸ್ತಿವೆ. ಈ ಟೈಮಲ್ಲಿ ರಿಷಿ ಈ ರೀತಿ ಅಧಿಕ ವೆಚ್ಚದಲ್ಲಿ ಪೂಲ್‌ ಕಟ್ತಿರೋದು ಎಷ್ಟರ ಮಟ್ಟಿಗೆ ಸರಿ ಅಂತ ಇದರ ವಿರುದ್ದ ಆಕ್ರೋಶ ಕೇಳಿ ಬರ್ತಿದೆ. ಇನ್ನು ಈ ರಿಷಿ ತಮ್ಮ ಜೀವನ ಶೈಲಿಯ ವಿಚಾರವಾಗಿ ವಿವಾದಕ್ಕೀಡಾಗಿದ್ದು ಇದೇ ಮೊದಲೇನಲ್ಲ. ಈ ಹಿಂದೆ ಅವ್ರ ಪತ್ನಿ ಅಕ್ಷತಾ ಮೂರ್ತಿ ಎಕ್ಸ್‌ಪೆನ್ಸಿವ್‌ ಕಪ್‌ನಲ್ಲಿ ಟೀ ತಂದಿದ್ದು ಕೂಡ ಭಾರೀ ವಿವಾದ ಸೃಷ್ಟಿಸಿತ್ತು.

-masthmagaa.com

Contact Us for Advertisement

Leave a Reply