ರಿಷಿ ಪಾಕಿಸ್ತಾನ ಮೂಲದವರು, ಅವರ ಮೇಲೆ ಪಾಕ್‌ಗೆ ಹಕ್ಕಿದೆ: ಪಾಕ್‌ ಪ್ರಜೆ

masthmagaa.com:

ಬ್ರಿಟನ್‌ನ ನೂತನ ಪ್ರಧಾನಿ ರಿಷಿ ಸುನಾಕ್‌ ಭಾರತೀಯ ಮೂಲದವ್ರು ಅಂತ ಇತ್ತ ಭಾರತ ಸೇರಿದಂತೆ ಇಡೀ ಪ್ರಪಂಚ ಹೇಳ್ತಿದ್ರೆ, ಅತ್ತ ಪಾಕಿಸ್ತಾನ ಕೂಡ ರಿಷಿ ನಮ್ಮವ ಅಂತ ಹೇಳ್ತಿದೆ. ಪಾಕಿಸ್ತಾನದಲ್ಲಿ ಈ ವಿಚಾರ ಟ್ರೆಂಡಿಂಗನಲ್ಲಿದೆ. ರಿಷಿ ಕೇವಲ ಭಾರತೀಯ ಮೂಲವನ್ನ ಹೊಂದಿಲ್ಲ, ಪಾಕ್‌ ಮೂಲವನ್ನ ಹೊಂದಿದ್ದಾರೆ ಅಂತ ಕೆಲವು ಪಾಕ್‌ ಮಾದ್ಯಮಗಳು, ಸೋಷಿಯಲ್‌ ಮೀಡಿಯಾ ಬಳಕೆದಾರರು ಪೋಸ್ಟ್‌ ಹಾಕ್ತಿದ್ದಾರೆ. ರಿಷಿ ಅಜ್ಜ-ಅಜ್ಜಿ ಈಗಿನ ಪಾಕ್‌ನ ಪಂಜಾಬ್‌ ಪ್ರಾಂತ್ಯದ ಗುಜ್ರನ್‌ವಾಲಾ ನಗರದಲ್ಲಿ ಹುಟ್ಟಿ ಬೆಳೆದಿದ್ದಾರೆ. ಸೋ ರಿಷಿ ಮೇಲೆ ಪಾಕ್‌ಗೆ ಹಕ್ಕಿದೆ, ಅಂದ್ರೆ ಅವರು ನಮ್ಮವರು ಅಂತ ಟ್ವಿಟರ್‌ನಲ್ಲಿ ಪಾಕ್‌ ಯುಸರ್‌ ಒಬ್ಬ ಬರೆದಿದ್ದಾರೆ. ಇನ್ನೊಬ್ಬ ಯುಸರ್‌ ಅಂತೂ, ಪಾಕಿಸ್ತಾನಿ ಒಬ್ರು ಇಂಗ್ಲೆಂಡ್‌ನ ಅತ್ಯುನ್ನತ ಹುದ್ದಗೆ ಆಯ್ಕೆಯಾಗಿದ್ದಾರೆ ಅಂತಲೇ ಬರೆದುಕೊಂಡಿದ್ದಾರೆ. ಹಾಗೆ ನೋಡಿದರೆ ಇಡೀ ಪಾಕಿಸ್ತಾನವೇ ಭಾರತ ಮೂಲದ್ದು! ಅಲ್ಲವೇ?!.

ಭಾರತ-ಪಾಕ್‌ ರಿಷಿ ಪಿಎಂ ಆಗಿದ್ದಕ್ಕೆ ನಮ್ಮವರು ನಮ್ಮವರು ಅಂತ ಖುಷಿ ಪಡ್ತಿದ್ರೆ, ಅತ್ತ ರಿಷಿ ಸುನಾಕ್‌ರನ್ನ ಅಲ್ಲಿನ ಕೆಲ ಸಂಪ್ರದಾಯಸ್ಥ ಬ್ರಿಟನ್‌ನ ಪ್ರಜೆಗಳು ತಮ್ಮ ಲೀಡರ್‌ ಅಂತ ಒಪ್ಪಿಕೊಂಡಿಲ್ಲ ಅನ್ನೋದು ಮತ್ತೆ ಗೊತ್ತಾಗಿದೆ. ರಿಷಿ ಸುನಾಕ್‌ ಬಗ್ಗೆ ವಿಚಾರದ ಬಗ್ಗೆ ಬ್ರಿಟಿಷ್‌ ರೇಡಿಯೋ ಒಂದ್ರಲ್ಲಿ ಕಾಲರ್‌ ಒಬ್ರು ಮಾತನಾಡಿದ್ದಾರೆ. ನಾನು ಪಾಕಿಸ್ತಾನದ ಪಿಎಂ ಆಗೋದನ್ನ ಇಮ್ಯಾಜಿನ್‌ ಮಾಡೋಕಾಗುತ್ತಾ? ಇಂಗ್ಲೆಂಡ್‌ನ ಜನ ಅವರ ಹಾಗೆ ಇರೊರನ್ನ ಮಾತ್ರ ಇಷ್ಟಪಡ್ತಾರೆ..ಬೇರೆ ರೀತಿಯಲ್ಲಿ ಇರೋರನಲ್ಲ ಅಂತ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಯಿಸಿದ ಅಲ್ಲಿನ ಪ್ರಖ್ಯಾತ ಕಾಮಿಡಿಯನ್‌ ಟ್ರೆವರ್‌ ನೋಹ್, ವೈಟ್‌ ಇಂಗ್ಲಿಷ್‌ ಜನ ತಮ್ಮ ಹಾಗೆ ಕಾಣದ ದೇಶಗಳಲ್ಲಿ ಆಳ್ವಿಕೆ ಮಾಡೋದನ್ನ ಇಮ್ಯಾಜಿನ್‌ ಮಾಡ್ಕೊಳ್ಳಬಹುದಾ ಅಂತ ತಿರುಗೇಟು ನೀಡಿದ್ದಾರೆ. ಜೊತೆಗೆ ಕೆಲ ಬ್ರಿಟನ್‌ ಜನ ಇದನ್ನ ತಪ್ಪಾಗಿ ನೋಡ್ತಿದಾರೆ. ಸುನಾಕ್‌ ಪಿಎಂ ಅಗಿರೋದು ಒಳ್ಳೆ ವಿಷಯ ಅಂತ ಹೇಳಿದ್ದಾರೆ. ಇನ್ನು ಪ್ರಧಾನಿ ಆದ ಬಳಿಕ ರಿಷಿ ಸುನಾಕ್‌ ಮೊದಲ ಬಾರಿಗೆ ಇಂದು ಸಂಸತ್ತಿನಲ್ಲಿ ವಿರೋದ ಪಕ್ಷದ ಸಂಸದರನ್ನ ಎದುರಿಸಲಿದ್ದಾರೆ. ಅಂದ್ರೆ ಬಹುಮತ ಸಾಬೀತು ಪಡಿಸಬೇಕಾಗಿ ಬರುತ್ತೆ. ಇನ್ನು ಅಧಿಕಾರಕ್ಕೆ ಬಂದ ಬೆನ್ನಲ್ಲೇ ತಮ್ಮ ಸಚಿವ ಸಂಪುಟವನ್ನ ಕೂಡ ರಚಿಸುತ್ತಿದ್ದಾರೆ. ಮಾಜಿ ಪ್ರಧಾನಿ ಲಿಜ್‌ ಟ್ರಸ್‌ರ ಕ್ಯಾಬಿನೆಟ್‌ನಿಂದ ಹೊರಹೋಗಿದ್ದ ಭಾರತೀಯ ಮೂಲದ ಸುಯೆಲ್ಲ ಬ್ರೇವರ್‌ಮನ್‌ ಅವ್ರನ್ನ ಸೆಕ್ರಟರಿ ಆಫ್‌ ಸ್ಟೇಟ್‌ ಆಗಿ, ಅಂದ್ರೆ ಗೃಹ ಇಲಾಖೆಗೆ ಮತ್ತೆ ನೇಮಿಸಲಾಗಿದೆ. ಇನ್ನೊಂದ್‌ ಕಡೆ ಸುನಾಕ್‌, ಯುಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ ಜೊತೆ ಮಾತಾಡಿದ್ದಾರೆ. ಹೀಗಾಗಿ ರಷ್ಯಾ, ಯುಕೆ ಜೊತೆ ಉತ್ತಮ ಸಂಬಂಧಗಳನ್ನ ಹೊಂದೊ ಹೋಪ್ಸ್‌ ಇಲ್ಲ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply