ಮತ್ತೊಂದು ವಿವಾದದ ಸುಳಿಯಲ್ಲಿ ರಿಷಿ ಸುನಾಕ್‌!

masthmagaa.com:

ಬ್ರಿಟನ್‌ ಪಿಎಂ ರೇಸ್‌ನಲ್ಲಿರೊ ಕರ್ನಾಟಕದ ಅಳಿಯ ರಿಷಿ ಸುನಾಕ್‌ ಬೋರಿಸ್‌ ಜಾನ್ಸನ್‌ರ ಉತ್ತರಾಧಿಕಾರಿ ಆಗೋದು ಡೌಟಾಗಿತ್ತು. ಇದೀಗ ರಿಷಿ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಅವ್ರು ಚಾನ್ಸಲರ್‌ ಆಗಿದ್ದ ಟೈಮಲ್ಲಿ ಯುಕೆಯ ಹಿಂದುಳಿದ ಪ್ರದೇಶಗಳಿಗೆ ಸರ್ಕಾರ ನೀಡಿದ್ದ ಫಂಡ್‌ಗಳನ್ನ ಉದ್ದೇಶಪೂರ್ವಕವಾಗಿ ಹಿಂತೆಗೆದುಕೊಂಡ ಬಗ್ಗೆ ರಿಷಿ ಹೆಮ್ಮೆ ಪಟ್ಟ ವಿಡಿಯೋ ಒಂದು ವೈರಲ್‌ ಆಗಿದೆ. ಅದ್ರಲ್ಲಿ, ʻಹಿಂದುಳಿದ ಪ್ರದೇಶಗಳಿಗೆ ಹೆಚ್ಚಿನ ಫಂಡಿಂಗ್‌ ಕೊಡೋದನ್ನ ನಾವು ಲೇಬರ್‌ ಪಕ್ಷದಿಂದ ಕಲಿತಿದ್ದೇವೆ. ಆದ್ರೆ ಅದು ಸ್ಟಾಪ್‌ ಅಗಬೇಕು ಹಾಗೂ ಆ ಕೆಲಸವನ್ನ ಮಾಡೋಕೆ ನಾನು ಶುರು ಮಾಡಿದ್ದೇನೆʼ ಅಂತ ರಿಷಿ ಹೇಳಿದ್ರು. ಇದೀಗ ಈ ಹೇಳಿಕೆಗೆ ಭಾರಿ ಟೀಕೆಗಳು ಕೇಳಿಬರ್ತಿವೆ.

-masthmagaa.com

Contact Us for Advertisement

Leave a Reply