ಅಮೆರಿಕ ಏರ್​ಸ್ಟ್ರೈಕ್​​ನಲ್ಲಿ 10 ಅಮಾಯಕರು ಬಲಿ: ಕುಟುಂಬಸ್ಥರು

masthmagaa.com:

ಅಮೆರಿಕ ಇತ್ತೀಚೆಗೆ ನಡೆಸಿದ್ದ ಏರ್​ಸ್ಟ್ರೈಕ್​​ನಲ್ಲಿ 6 ಮಂದಿ ಮಕ್ಕಳು ಸೇರಿದಂತೆ 10 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ ಅಂತ ವರದಿಯಾಗಿತ್ತು. ಅದೀಗ ನಿಜ ಅಂತ ಮೃತರ ಕುಟುಂಸ್ಥರು ಹೇಳಿದ್ದಾರೆ. ಅಮೆರಿಕ ಭಾನುವಾರ ಏರ್​ಸ್ಟ್ರೈಕ್​ ನಡೆಸಿತ್ತು. ಇದ್ರಲ್ಲಿ ಕಾರಿನಲ್ಲಿ ಸ್ಫೋಟಕ ತುಂಬಿಕೊಂಡು ಏರ್​ಪೋರ್ಟ್​​ ಕಡೆಗೆ ಬರುತ್ತಿದ್ದ ವ್ಯಕ್ತಿಯನ್ನು ಹೊಡೆದುರುಳಿಸಿದ್ದೀವಿ ಅಂತ ಹೇಳಿತ್ತು. ಆದ್ರೆ ಘಟನೆಯಲ್ಲಿ ತನ್ನ ಸಹೋದರನನ್ನು ಕಳೆದುಕೊಂಡಿರೋ ಐಮಲ್ ಅಹ್ಮದಿ ಈ ಬಗ್ಗೆ ಮಾತನಾಡಿದ್ದಾರೆ. ನನ್ನ ಸಹೋದರ ಎಜ್ಮರೈ ಅಹ್ಮದಿ ಎಂದಿನಂತೆ ಕೆಲಸ ಮುಗಿಸಿಕೊಂಡು ಕಾರಿನಲ್ಲಿ ಮನೆಗೆ ಮರಳಿದ್ರು. ನಂತರ ಕಾರನ್ನು ಪಾರ್ಕ್​ ಮಾಡಲು ತನ್ನ ಹಿರಿಯ ಮಗನಿಗೆ ಕೊಟ್ಟು, ಅಲ್ಲೇ ಪಕ್ಕದಲ್ಲಿ ನಿಂತು ನೋಡ್ತಿದ್ರು. ಕಾರ್ ಪಾರ್ಕ್ ಮಾಡುವಾಗ ಅವರ ಮಕ್ಕಳು, ಸಹೋದರಿಯ ಸಣ್ಣ ಸಣ್ಣ ಮಕ್ಕಳು ಬಂದು ಕಾರು ಹತ್ತಿಕೊಂಡಿದ್ದಾರೆ. ಈ ವೇಳೆ ವೇಗವಾಗಿ ಬಂದ ಕ್ಷಿಪಣಿ ಕಾರಿಗೆ ಅಪ್ಪಳಿಸಿದೆ. ಇದ್ರಲ್ಲಿ 10 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಅಂತ ಎಎಫ್​​​​ಪಿ ಮಾಧ್ಯಮಕ್ಕೆ ನೋವು ತೋಡಿಕೊಂಡಿದ್ದಾರೆ. ಆದ್ರೆ ಎಎಫ್​​ಪಿ ಮಾಧ್ಯಮ ಇದ್ರ ಸತ್ಯಾಸತ್ಯತೆ ಪರಿಶೀಲಿಸಲು ಸಾಧ್ಯವಾಗಿಲ್ಲ. ಅಂದಹಾಗೆ ಈ ಬಗ್ಗೆ ಈಗಾಗಲೇ ಪ್ರತಿಕ್ರಿಯಿಸಿರೋ ಅಮೆರಿಕ, ನಾವು ನಡೆಸಿರೋ ದಾಳಿಯಲ್ಲಿ ಅಮಾಯಕರು ಬಲಿಯಾಗಿರೋ ಬಗ್ಗೆ ನಮಗೆ ಮಾಹಿತಿ ಇಲ್ಲ. ಈ ಬಗ್ಗೆ ತನಿಖೆ ನಡೆಸ್ತೀವಿ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply