YASH 19 ಗೂ ಮುನ್ನ ಹೊಸ ಅಪ್‌ಡೇಟ್‌ ಕೊಟ್ಟ ರಾಕಿಂಗ್‌ ಸ್ಟಾರ್‌ ಯಶ್‌!

masthmagaa.com:

ಕೆಜಿಎಫ್ ಸಕ್ಸಸ್ ಬಳಿಕ ರಾಕಿಂಗ್ ಸ್ಟಾರ್‌ ಯಶ್ ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಈಗ ಕೆಜಿಎಫ್ ಹೀರೋ ಯಶ್‌ ಪ್ರತಿಷ್ಠಿತ ಪೆಪ್ಸಿ ಬ್ರಾಂಡ್‌‌ನ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ. ಕೆಜಿಎಫ್ 2 ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಬಾಚಿಕೊಂಡಿದೆ. ಭಾರತದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ಪೈಕಿ ಕೆಜಿಎಫ್ -2 ಕೂಡ ಒಂದು. ಕೆಜಿಎಫ್ 2 ಬಳಿಕ ಯಶ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಹೆಚ್ಚಾಗಿತ್ತು. ಆದರೆ ಸಿನಿಮಾಗೂ ಮೊದಲು ಯಶ್ ಪೆಪ್ಸಿ ಜಾಹೀರಾತಿನ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ‘ಜನ ಪ್ರತಿ ಹಂತದಲ್ಲೂ ಗೇಲಿ ಮಾಡ್ತಾರೆ. ಒಬ್ಬೊಬ್ಬರು ಒಂದೊಂದು ಹೇಳಿ ಮಾತಿನ ದಾಳಿ ಮಾಡ್ತಾರೆ. ಇದು ಮಾಡು, ಅದು ಬೇಡ ಅಂತಾರೆ. ಹೇಳಿದ್ದು ಕೇಳ್ತೀವಿ ಅಂತ ಗೊತ್ತಾದ್ರೆ ಮಾತ್ ಮಾತಲ್ಲೇ ಜಡ್ಜ್​ ಮಾಡ್ತಾರೆ, ಕಂಟ್ರೋಲ್ ಮಾಡ್ತಾರೆ, ಮಾತಲ್ಲೇ ಮುಳುಗಿಸಿ ಬಿಡ್ತಾರೆ. ಎಲ್ಲಾ ಗೇಲಿಗೂ ಹೊಡಿ ಗೋಲಿ. ನೀನು ನೀನಾಗಿರು ಜಸ್ಟ್‌ ರೈಸ್‌ʼ ಎಂದು ಯಶ್‌ ಈ ಜಾಹೀರಾತಿನಲ್ಲಿ ಖಡಕ್‌ ಡೈಲಾಗ್‌ ಹೇಳಿದ್ದಾರೆ. ಅಂದಹಾಗೆ 2022ರಲ್ಲಿ ಪೆಪ್ಸಿ ಬ್ರಾಂಡ್‌ಗೆ ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಅಂಬಾಸಿಡರ್‌ ಆಗಿದ್ದರು. ಈ ವರ್ಷ 2023ಗೆ ಯಶ್ ಆಗಿರುವುದು ಅಭಿಮಾನಿಗಳಿಗೆ ಹಾಗೂ ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ.

-masthmagaa.com

Contact Us for Advertisement

Leave a Reply