ರಿಯಲ್ ಲೈಫ್ ಹೀರೋ ಆದ ರಾಕಿಂಗ್ ಸ್ಟಾರ್ ಯಶ್!

masthmagaa.com:
ಒಂದುಕಡೆ ಸೋ ಕಾಲ್ಲ್ಡ್ ಬಾಲಿವುಡ್ ಸೂಪಸ್ಟಾರ್ಸ್ ಗಳು ಗುಟ್ಕಾ, ಪಾನ್ ಮಸಾಲ ಆಡ್ ಗಳಲ್ಲಿ ಕಾಣಿಸಿಕೊಂಡು ಜನಗಳಿಂದ ತುಪಕ್ ತುಪಕ್ ಅಂತ ಉಗಿಸಿಕೊಳ್ತಾ ಇದ್ದರೆ,
ಇನ್ನೊಂದು ಕಡೆ ಪಾನ್ ಇಂಡಿಯಾದ ಹೊಸ ಸೆನ್ಸೇಷನ್ ಎನಿಸಿಕೊಂಡಿರುವ ಕನ್ನಡ ನಟ ರಾಕಿಂಗ್ ಸ್ಟಾರ್ ಯಶ್ ಪಾನ್ ಮಸಾಲಾ ಮತ್ತು ಎಲೈಚಿ ಬ್ರ್ಯಾಂಡ್‌ನ ಬಹುಕೋಟಿ ಎಂಡಾರ್ಸ್ ಮೆಂಟ್ ಒಪ್ಪಂದವನ್ನು ತಿರಸ್ಕರಿಸಿ ಅಭಿಮಾನಿಗಳ ದೃಷ್ಠಿಯಲ್ಲಿ ರಿಯಲ್ ಲೈಫ್ ಹೀರೋ ಆಗಿದ್ದಾರೆ. ಎಸ್, ಈ ಸುದ್ದಿಯನ್ನ ಯಶ್ ಅವರ ಎಂಡಾರ್ಸ್‌ಮೆಂಟ್ ಡೀಲ್‌ಗಳನ್ನು ನಿರ್ವಹಿಸುವ ಸಂಸ್ಥೆ ಎಕ್ಸೀಡ್ ಎಂಟರ್‌ಟೇನ್‌ಮೆಂಟ್ ಖಚಿತ ಪಡಿಸಿದೆ.
ಪಾನ್ ಮಸಾಲಾಗಳು ಮತ್ತು ಅಂತಹ ಉತ್ಪನ್ನಗಳು ಜನರ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತೆ, ಹಾಗೆ ಇದರಿಂದ ಜೀವಕ್ಕೆ ಅಪಾಯ ಉಂಟಾಗುತ್ತೆ. ಹಾಗಾಗಿ, ತಮ್ಮ ಅಭಿಮಾನಿಗಳ ಹಿತದೃಷ್ಟಿಯಿಂದ ವೈಯಕ್ತಿಕವಾಗಿ ಲಾಭದಾಯಕವಾದ ಒಪ್ಪಂದವನ್ನು ಯಶ್ ನಿರಾಕರಿಸಿದ್ದಾರೆ ಎಂದು ಏಜೆನ್ಸಿ ತಿಳಿಸಿದೆ.
-masthmagaa.com
 
Contact Us for Advertisement

Leave a Reply