masthmagaa.com:

ಸ್ನಾಯು ಸೆಳೆತದಿಂದ ಗುಣಮುಖರಾಗಿರುವ ಟೀಂ ಇಂಡಿಯಾದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಆಸ್ಟ್ರೇಲಿಯಾಗೆ ತೆರಳಿದ್ದಾರೆ. ಆದ್ರೆ ಕೊರೋನಾ ಹಾವಳಿ ಹಿನ್ನೆಲೆ ಆಸ್ಟ್ರೇಲಿಯಾದಲ್ಲಿ 14 ದಿನಗಳ ಕಾಲ ಕ್ವಾರಂಟೈನ್​ನಲ್ಲಿ ಇರಬೇಕಿದೆ. ಹೀಗಾಗಿ ಮೊದಲೆರೆಡು ಟೆಸ್ಟ್​ ಪಂದ್ಯಗಳನ್ನ ಮಿಸ್ ಮಾಡಿಕೊಳ್ಳಲಿರುವ ರೋಹಿತ್, ಮೂರನೇ ಟೆಸ್ಟ್​ಗೆ ಲಭ್ಯವಾಗುವ ಸಾಧ್ಯತೆ ಇದೆ. ಹೀಗಾಗಿ ಕ್ವಾರಂಟೈನ್ ಅವಧಿಯಲ್ಲೂ ತಮ್ಮ ಫಿಟ್ನೆಸ್​ ಕಾಪಾಡಿಕೊಳ್ಳಲು ವರ್ಕೌಟ್ ಮಾಡಲಿದ್ದಾರೆ. ಅವರು ಫಿಟ್ ಎನಿಸಿದ್ರೆ ಮಾತ್ರ ಮೂರನೇ ಟೆಸ್ಟ್​ಗೆ ಆಯ್ಕೆಯಾಗಲಿದ್ದಾರೆ. ಡಿಸೆಂಬರ್ 17ರಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೊದಲ ಡೇ-ನೈಟ್​ ಟೆಸ್ಟ್ ಪಂದ್ಯ ನಡೆಯಲಿದೆ. ಮೊದಲ ಟೆಸ್ಟ್ ಬಳಿಕ ವಿರಾಟ್ ಕೊಹ್ಲಿ ರಜೆ ಮೇಲೆ ತೆರಳಲಿದ್ದಾರೆ. ಹೀಗಾಗಿ ಎರಡನೇ ಪಂದ್ಯಕ್ಕೆ ಕೊಹ್ಲಿ ಮತ್ತು ರೋಹಿತ್ ಅಲಭ್ಯರಾಗಲಿದ್ದಾರೆ.

-masthmagaa.com

Contact Us for Advertisement

Leave a Reply