35 ವರ್ಷದ ಬಳಿಕ ಇಂಡಿಯನ್​ ಟೆಸ್ಟ್​ ಟೀಂ ಅನ್ನ ಮುನ್ನಡೆಸಲಿರುವ ಬೌಲರ್‌ ಬುಮ್ರಾ!

masthmagaa.com:

ಜುಲೈ 1ರಿಂದ ನಡೆಯಲಿರೋ ಇಂಗ್ಲೆಂಡ್‌ ವಿರುದ್ದದ 5ನೇ ಟೆಸ್ಟ್‌ ಪಂದ್ಯಕ್ಕೆ ಭಾರತ ತಂಡವನ್ನ ವೇಗಿ ಜಸ್‌ಪ್ರೀತ್‌ ಬುಮ್ರಾ ಮುನ್ನಡೆಸಲಿದ್ದಾರೆ. ರೋಹಿತ್‌ ಶರ್ಮಾಗೆ ಕೊರೋನಾ ಬಂದ ಕಾರಣಕ್ಕೆ ಬುಮ್ರಾರನ್ನ ನಾಯಕರನ್ನಾಗಿ ಮಾಡಲಾಗಿದೆ. ಈ ಮೂಲಕ 35 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಬೌಲರ್‌ ಒಬ್ರು ಇಂಡಿಯನ್​ ಟೆಸ್ಟ್​ ಟೀಂ ಅನ್ನ ಮುನ್ನಡೆಸಲು ರೆಡಿಯಾದಂತಾಗಿದೆ. ಅಂದ್ಹಾಗೆ ಈ ಹಿಂದೆ 1987ರಲ್ಲಿ ವೇಗಿ ಕಪಿಲ್‌ ದೇವ್‌ ತಂಡದ ನಾಯಕರಾಗಿದ್ರು. 1932ರಿಂದ ಟೆಸ್ಟ್‌ ಕ್ರಿಕೆಟ್​ ಆಡ್ತಿರೋ ಭಾರತಕ್ಕೆ ಬೂಮ್ರಾ 36ನೇ ಟೆಸ್ಟ್ ಕ್ಯಾಪ್ಟನ್‌ ಆಗಿದ್ದಾರೆ.

-masthmagaa.com

Contact Us for Advertisement

Leave a Reply