₹2,90,00,000 ಬೆಲೆ ಕಾರು ದಾಖಲೆ ಮಾರಾಟ! ರೋಲ್ಸ್ ರಾಯ್ ಘೋಸ್ಟ್ ಮ್ಯಾಜಿಕ್!

masthmagaa.com:

ಕೊರೋನಾ ನಡುವೆಯೂ ರೋಲ್ಸ್​ರಾಯ್ಸ್​​​ ಮೋಟಾರ್ ಸಂಸ್ಥೆಯ ಕಾರುಗಳ ಮಾರಾಟದಲ್ಲಿ ದಾಖಲೆಯ ಏರಿಕೆ ಕಂಡುಬಂದಿದೆ. 2021ರಲ್ಲಿ ಕಾರುಗಳ ಮಾರಾಟ 117 ವರ್ಷಗಳ ಹಿಂದಿನ ದಾಖಲೆ ಮುರಿದಿದೆ. ಈ ಸಲ ಕೊರೋನಾ ಜೊತಗೆ ಸಮಿ ಕಂಡಕ್ಟರ್​ಗಳ ಕೊರತೆ ಕೂಡ ಇತ್ತು. ಆದ್ರೆ ಅವೆಲ್ಲವನ್ನೂ ಮೀರಿ ಕಾರುಗಳ ಮಾರಾಟ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಒಂದೇ ವರ್ಷ ಅಮೆರಿಕ, ಏಷ್ಯಾ ಪೆಸಿಫಿಕ್, ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಒಟ್ಟು 5,586 ರೋಲ್ಸ್​​​​ ರಾಯ್ಸ್ ಕಾರುಗಳು ಮಾರಾಟವಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ 50 ಪರ್ಸೆಂಟ್​​ನಷ್ಟು ಜಾಸ್ತಿಯಾಗಿದೆ ಅಂತ ಸಂಸ್ಥೆ ತಿಳಿಸಿದೆ. 2.6 ಟನ್ ತೂಕದ ಘೋಸ್ಟ್ ಕೂಪ್ ಅನ್ನೋ ಕಾರಿಗೆ ಬೇಡಿಕೆ ಹೆಚ್ಚಾಗಿದ್ರಿಂದ ಇಷ್ಟು ಪ್ರಮಾಣದಲ್ಲಿ ಕಾರುಗಳ ಮಾರಾಟವಾಗಿದೆ. ಮೂರೂವರೆ ಲಕ್ಷ ಯೂರೋ ಅಂದ್ರೆ ಭಾರತದ ರೂಪಾಯಿ ಲೆಕ್ಕದಲ್ಲಿ 2.90 ಕೋಟಿ ರೂಪಾಯಿ ಬೆಲೆಯ ಕಾರು ಇದಾಗಿದೆ. ಇದ್ರ ನಡುವೆಯೇ ರೋಲ್ಸ್​ ರಾಯ್ಸ್​ ಸಂಸ್ಥೆ ತನ್ನ ಮೊದಲ ಸಂಪೂರ್ಣ ಎಲೆಕ್ಟ್ರಿಕ್ ಕಾರು ಸ್ಪೆಕ್ಟರ್ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ತಿದೆ. 20ನೇ ಶತಮಾನದ ಆರಂಭದಲ್ಲಿ ಸ್ಥಾಪನೆಯಾಗಿದ್ದ ಈ ಬ್ರಿಟಿಷ್ ಬ್ರಾಂಡ್​ ಕಾರನ್ನು ಜರ್ಮನಿಯ ಬಿಎಂಡಬ್ಲ್ಯೂ 1998ರಲ್ಲಿ ಖರೀದಿಸಿತ್ತು.

-masthmagaa.com

Contact Us for Advertisement

Leave a Reply