ಹೆಣ್ಣು ಮಗುವಿನ ತಂದೆಯಾದ RRR ಖ್ಯಾತಿಯ ನಟ ರಾಮ್‌ಚರಣ್‌ !

masthmagaa.com:

ರಾಮ್‌ಚರಣ್‌ ಪತ್ನಿ ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ರಾಮ್ ಚರಣ್-ಉಪಾಸನಾ ದಂಪತಿ ಪೋಷಕರಾಗಿ ಪ್ರಮೋಷನ್ ಪಡೆದಿದ್ದಾರೆ. ಮದುವೆಯಾಗಿ ಸುಮಾರು 10 ವರ್ಷಗಳ ನಂತರ, ಉಪಾಸನಾ ಮಗುವಿಗೆ ಜನ್ಮ ನೀಡಿದ್ದಾರೆ. ಹೀಗಾಗಿ ಮೆಗಾ ಫ್ಯಾಮಿಲಿಯಲ್ಲಿ ಸಂಭ್ರಮ ಮನೆ ಮಾಡಿದೆ.

”ಮಂಗಳವಾರ ಬೆಳಿಗಿನ ಜಾವ 1:49 ನಿಮಿಷಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದು ನಮ್ಮ ಕುಟುಂಬಕ್ಕೆ ಬಹಳ ಸಂತಸ ತಂದಿದೆ. ಹೆಣ್ಣು ಮಗು ಜನಿಸಿರುವುದು ನಮಗೆ ಬಹಳ ಖುಷಿಯ ಕ್ಷಣ. ಅವರಿಬ್ಬರು ಪೋಷಕರಾಗಬೇಕು ಎಂಬುದು ನಮ್ಮ ಬಹು ವರ್ಷದ ಆಶಯವಾಗಿತ್ತು. ಅವರು ಅಪ್ಪ-ಅಮ್ಮ ಆಗಬೇಕು, ನಮ್ಮ ಕೈಗೆ ಮಗು ಕೊಡಬೇಕು ಎಂದು ಆಸೆಪಟ್ಟಿದ್ದೆವು. ಇಷ್ಟು ವರ್ಷದ ಬಳಿಕ ಆ ಭಗವಂತನ ದಯೆಯಿಂದ ಈಗ ಸಾಧ್ಯವಾಗಿದೆ. ಈ ಅದ್ಭುತ ಸಂದರ್ಭದಲ್ಲಿ ದೇಶ, ವಿದೇಶಗಳಿಂದ ನಮ್ಮ ಬಂಧುಗಳು, ಸ್ನೇಹಿತರು, ಶ್ರೇಯೋಭಿಲಾಷಿಗಳು ಶುಭಾಶಯ ಹೇಳುತ್ತಿದ್ದಾರೆ ಅವರಿಗೆಲ್ಲ ಧನ್ಯವಾದ. ನಮ್ಮ ಖುಷಿಯನ್ನು ಅವರ ಖುಷಿ ಎಂದುಕೊಳ್ಳುವ ಅಭಿಮಾನಿಗಳೂ ಇದ್ದಾರೆ ಅವರಿಗೂ ಧನ್ಯವಾದ. ಮಂಗಳವಾರ ಜನಿಸಿದೆ ಮಗು. ಬಹಳ ಒಳ್ಳೆಯ ಸಮಯದಲ್ಲಿ ಜನನವಾಗಿದೆ ಎಂದು ದೊಡ್ಡವರು ಹೇಳುತ್ತಿದ್ದಾರೆ. ಆ ಪ್ರಭಾವವನ್ನು ಮೊದಲಿನಿಂದಲೂ ತೋರಿಸುತ್ತಲೇ ಇದೆ. ವೃತ್ತಿಯಲ್ಲಿ ರಾಮ್ ಚರಣ್ ಪ್ರಗತಿ ಆಗಿರಬಹುದು, ಇತ್ತೀಚೆಗೆ ವರುಣ್-ಲಾವಣ್ಯ ನಿಶ್ಚಿತಾರ್ಥವಾಗಿರಬಹುದು ಎಲ್ಲವೂ ಶುಭವೇ ಆಗುತ್ತಿದೆ. ಈಗ ಮಗು ಸಹ ಜನಿಸಿದೆ. ಮಂಗಳವಾರ ಆಂಜನೇಯ ಸ್ವಾಮಿ ವಾರ. ನಮ್ಮ ಕುಟುಂಬ ಆಂಜನೇಯ ಸ್ವಾಮಿಯನ್ನು ನಂಬಿಕೊಂಡಿದೆ. ಈಗ ಆಂಜನೇಯಸ್ವಾಮಿ ಮಂಗಳವಾರವೇ ಹೆಣ್ಣು ಮಗುವನ್ನು ನಮಗೆ ಪ್ರಸಾದಿಸಿದ್ದಾರೆ” ಅಂತ ಚಿರಂಜೀವಿ ಹೇಳಿದ್ದಾರೆ.

ಉಪಾಸನಾ ಬೇಬಿ ಬಂಪ್ ಪಾರ್ಟಿ ಫೋಟೋಗಳು ಕೂಡ ಭಾರೀ ಸದ್ದು ಮಾಡಿತ್ತು. ದಂಪತಿಗೆ ಆಪ್ತರು ತೊಟ್ಟಿಲು ಗಿಫ್ಟ್ ನೀಡಿದ್ದಾರೆ. ಸದ್ಯಕ್ಕೆ ಶೂಟಿಂಗ್ ಕೆಲಸಕ್ಕೆ ಬ್ರೇಕ್ ಹಾಕಿರುವ ರಾಮ್ ಚರಣ್, ಉಪಾಸನಾ ಜೊತೆಯೇ ಇರಲಿದ್ದಾರೆ.

-masthmagaa.com

Contact Us for Advertisement

Leave a Reply