ದೇಶದಲ್ಲಿ RSS 3 ವರ್ಷ ಬ್ಯಾನ್‌ ಆಗಿತ್ತು, ಕಾಂಗ್ರೆಸ್‌ ಹಿಂದೆಯೂ ಇತ್ತು, ಮುಂದೆಯೂ ಇರಲಿದೆ! ಛಾಟಿ ಬೀಸಿದ ಕಾಂಗ್ರೆಸ್‌!

masthmagaa.com:

RSS​ ನಿಷೇಧದ ಬಗ್ಗೆ ಶಾಸಕ ಪ್ರಿಯಾಂಕ್ ಖರ್ಗೆ ನೀಡಿರೋ ಹೇಳಿಕೆ ವಿಚಾರವಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ನಾನು ಸವಾಲು ಹಾಕುತ್ತೇನೆ, RSS​​ ನಿಷೇಧಿಸಲಿ ನೋಡೋಣ. ಯಾವುದೇ ಸಂಘ-ಸಂಸ್ಥೆಯನ್ನು ನಿಷೇಧ ಮಾಡುವ ಅಧಿಕಾರ ಇವರಿಗಿಲ್ಲ. ಒಂದು ಸಮುದಾಯದ ತುಷ್ಟೀಕರಣಕ್ಕೆ ಇಂಥ ಹೇಳಿಕೆ ಕೊಡುತ್ತಿದ್ದಾರೆ. RSS, ಬಜರಂಗದಳ ನಿಷೇಧ ಬಗ್ಗೆ ಸಿಎಂ ನಿಲುವು ಸ್ಪಷ್ಪಪಡಿಸಲಿ. ಸಚಿವರ ಹೇಳಿಕೆಗೆ ಸಿಎಂ ಬೆಂಬಲ ಇದೆಯಾ ಅಂತ ಜನರಿಗೆ ತಿಳಿಸಲಿ. RSS ನಿಷೇಧ ಯಾರಿಂದಲೂ ಸಾಧ್ಯವಿಲ್ಲ ಅಂತ ಹೇಳಿದ್ದಾರೆ. ಕಾಂಗ್ರೆಸ್ ಏನಾದ್ರು RSS ಮೇಲೆ ಕೈ ಹಾಕಿದ್ರೆ ಕಾಂಗ್ರೆಸ್‌ ಇರಲ್ಲ ಅಂತ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಕಾಂಗ್ರೆಸ್‌, ಭಾರತದಲ್ಲಿ RSS ಅನ್ನೊ ಸಂಘಟನೆ ಈಗಾಗಲೇ 3 ಬಾರಿ ನಿಷೇಧಕ್ಕೆ ಒಳಪಟ್ಟಿತ್ತು. ಆದ್ರೆ ಕಾಂಗ್ರೆಸ್ ಆಗಲೂ ಇತ್ತು, ಈಗಲೂ ಇದೆ, ಮುಂದೆಯೂ ಇರಲಿದೆ ಅಂತ ತಿರುಗೇಟು ನೀಡಿದೆ. ಅಲ್ದೆ ಸರ್ದಾರ್ ಪಟೇಲರೇ RSS ಅನ್ನ ಭಾರತ ವಿರೋಧಿ ಸಂಘಟನೆ ಅಂತ ಕರೆದಿದ್ರು. ಅಷ್ಟೇ ಅಲ್ಲ ಸರ್ಕಾರಿ ಹಾಗೂ ಅನುದಾನಿತ ಶಾಲಾ ಆವರಣದಲ್ಲಿ RSS ಚಟುವಟಿಕೆಗಳನ್ನ ತಡೆಯುವ ಕುರಿತು ನಾವು ಪರಿಶೀಲನೆ ಮಾಡ್ತೀವಿ ಅಂತ ಕಾಂಗ್ರೆಸ್‌ ಹೇಳಿದೆ.

-masthmagaa.com

Contact Us for Advertisement

Leave a Reply