ವಿಶ್ವಸಂಸ್ಥೆಯಲ್ಲಿ ರೊಚ್ಚಿಗೆದ್ದ ರುಚಿರಾ! UfC ಮಾಡೆಲ್‌ಗೆ ತೀವ್ರ ಖಂಡನೆ!

masthmagaa.com:

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸುಧಾರಣೆಯಾಗ್ಬೇಕು ಅಂತ ಭಾರತ ಮತ್ತೆ ಆಗ್ರಹ ಮಾಡಿದೆ. ಭದ್ರತಾ ಮಂಡಳಿಯ ಯುನೈಟೆಡ್‌ ಫಾರ್‌ ಕೋಸೆನ್ಸಸ್‌ (UfC) ಮಾಡೆಲ್‌ನ್ನ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್‌ ವಿರೋಧಿಸಿದ್ದಾರೆ. ಈ UfC ಅಂದ್ರೆ ಭದ್ರತಾ ಮಂಡಳಿಯಲ್ಲಿ ಈಗಿರೋ ರಾಷ್ಟ್ರಗಳೇ ಇರಬೇಕು. ಇದನ್ನ ವಿಸ್ತರಣೆ ಮಾಡೋದು ಬೇಡ ಅಂತ ಆಗ್ರಹಿಸೋ ಗುಂಪು. ಹೇಗೆ ಜಿ4 ದೇಶಗಳು ಅಂದ್ರೆ ಜರ್ಮನಿ, ಜಪಾನ್‌, ಭಾರತ, ಬ್ರೆಜಿಲ್‌ಗಳು ನಮಗೂ ಶಾಶ್ವತ ಸದಸ್ಯತ್ವ ಬೇಕು ಅಂತಾರೋ ಅದನ್ನ ವಿರೋಧಿಸೋಕೆ ಹುಟ್ಟಿರೋ ಗುಂಪು ಇದು. ಇದರಲ್ಲಿ ಅರ್ಜೆಂಟಿನಾ, ಕೆನಡಾ, ಕೊಲಂಬಿಯಾ, ಕೋಸ್ಟಾ ರಿಕಾ, ಇಟಲಿ, ಮಾಲ್ಟಾ, ಮೆಕ್ಸಿಕೋ, ಪಾಕಿಸ್ತಾನ, ದಕ್ಷಿಣ ಕೊರಿಯಾ, ಸ್ಯಾನ್‌ ಮಾರಿನೋ, ಸ್ಪೇನ್‌ ಮತ್ತು ಟರ್ಕಿ ಸೇರ್ಕೊಂಡಿದೆ. ಚೀನಾ ಈ ಗುಂಪಲ್ಲಿ ಶಾಶ್ವತ ಸದಸ್ಯತ್ವ ಹೊಂದಿದೆ. ಇಟಲಿ ಈ ಮಾಡೆಲ್‌ನ್ನ ಮುಂದಿಟ್ಟಿತ್ತು. ಇದಕ್ಕೆ ರುಚಿರಾ ಕಾಂಬೋಜ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ʻUfC ಮಾಡೆಲ್‌ನ್ನ ಭಾರತ ತೀವ್ರವಾಗಿ ಖಂಡಿಸುತ್ತೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸುಧಾರಣೆಯಾಗಲೇಬೇಕುʼ ಅಂದಿದ್ದಾರೆ.

-masthmagaa.com

Contact Us for Advertisement

Leave a Reply