ಯೂರೋಪ್​ ಕೌನ್ಸಿಲ್​​ಗೆ ರಷ್ಯಾ ಟಾಟಾ! ಯಾಕೆ ಗೊತ್ತಾ?

masthmagaa.com:

ರಷ್ಯಾ ಯೂರೋಪಿಯನ್ ಯೂನಿಯನ್​ನಿಂದ ಹೊರಹೋಗಬೇಕು ಅನ್ನೋ ಒತ್ತಡ ಜಾಸ್ತಿಯಾಗ್ತಿರುವ ಬೆನ್ನಲ್ಲೇ ರಷ್ಯಾ ಕೂಡ ಹೊರಹೋಗೋ ಪ್ರಕ್ರಿಯೆ ಶುರು ಮಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಷ್ಯಾ ವಿದೇಶಾಂಗ ಸಚಿವಾಲಯ​, ನಾವು ಈಗಾಗಲೇ ಯೂರೋಪಿಯನ್ ಕೌನ್ಸಿಲ್​ನಿಂದ ಹೊರಹೋಗೋ ಪ್ರಕ್ರಿಯೆ ಶುರು ಮಾಡಿದ್ದೀವಿ ಅಂತ ಟೆಲಿಗ್ರಾಂನಲ್ಲಿ ಹೇಳಿಕೆ ಬಿಡುಗಡೆ ಮಾಡಿದೆ. ಗ್ರೂಪ್​​ನ ಸೆಕ್ರೆಟರಿ ಜನರಲ್ ಮರಿಜಿಯ ಪೆಜ್ಸಿನೋವಿಕ್ ಬುರಿಕ್ ಅವರಿಗೆ ನಮ್ಮ ಎಕ್ಸಿಟ್ ಬಗ್ಗೆ ನೋಟಿಫಿಕೇಷನ್ ಕೂಡ ನೀಡಿದ್ದೀವಿ ಅಂತ ಹೇಳಿದೆ. ಅಂದಹಾಗೆ ನಿನ್ನೆಯಷ್ಟೇ ರಷ್ಯಾವನ್ನು ಈ ಕೌನ್ಸಿಲ್​ನಿಂದ ತೆಗೆದು ಹಾಕಬೇಕು.. ಪಾಶ್ಚಿಮಾತ್ಯ ದೇಶಕ್ಕೆ ಸೇನೆ ಕಳುಹಿಸಿದ ಬಳಿಕ ಯೂರೋಪಿಯನ್ ಕೌನ್ಸಿಲ್ ಭಾಗವಾಗಿ ಮುಂದುವರಿಯೋ ಯಾವುದೇ ಅರ್ಹತೆ ಇಲ್ಲ ಅಂತ ಒತ್ತಾಯಿಸಿತ್ತು. ಅದೂ ಅಲ್ಲದೇ ರಷ್ಯಾ ಯುಕ್ರೇನ್ ಮೇಲೆ ದಾಳಿ ಮಾಡಿದ ಬೆನ್ನಲ್ಲೇ ಈ ಸಂಸ್ಥೆಯಲ್ಲಿ ಎಲ್ಲಾ ರೀತಿಯ ಅಧಿಕಾರವನ್ನು ರಷ್ಯಾ ಕಳೆದುಕೊಂಡಿತ್ತು. ಹೀಗಾಗಿ ಇದು ತಾರತಮ್ಯವಾಗಿದೆ. ಹೀಗಾಗಿ ನಾವು ಇಂತಹ ಸ್ಥಿತಿಯಲ್ಲಿ ಈ ಕೌನ್ಸಿಲ್​ನಲ್ಲಿ ಮುಂದುವರಿಯಲ್ಲ ಅಂತ ರಷ್ಯಾ ಹೇಳಿದೆ.

ಅಂದಹಾಗೆ ಈ ಯೂರೋಪಿಯನ್ ಕೌನ್ಸಿಲ್ 2ನೇ ವಿಶ್ವಯುದ್ಧ ಬಳಿಕ ಮಾನವ ಹಕ್ಕುಗಳು, ಪ್ರಜಾಪ್ರಭುತ್ವ, ಕಾನೂನು ರಕ್ಷಣೆಗೆ ಅಂತ 1949ರಲ್ಲಿ ಸ್ಥಾಪನೆಯಾಗಿತ್ತು. ಇದ್ರಲ್ಲಿ ಒಟ್ಟು 82 ಕೋಟಿ ಜನಸಂಖ್ಯೆ ಇರುವ 47 ದೇಶಗಳು ಸದಸ್ಯತ್ವ ಹೊಂದಿವೆ. ಯುಕ್ರೇನ್ ಕೂಡ ಇದ್ರ ಸದಸ್ಯ ದೇಶವೇ ಆಗಿದೆ. ಅಂದಹಾಗೆ 1996ರಲ್ಲಿ ರಷ್ಯಾ ಈ ಕೌನ್ಸಿಲ್​ಗೆ ಸೇರಿತ್ತು. ಆದ್ರೀಗ ಅದ್ರಿಂದ ಹೊರಬರೋದಾಗಿ ಘೋಷಿಸಿರೋ ರಷ್ಯಾ, ಇದ್ರಿಂದ ನಮ್ ದೇಶದ ಜನತೆಯ ಹಕ್ಕುಗಳಲ್ಲಿ ಯಾವುದೇ ಬದಲಾವಣೆ ಆಗೋದಿಲ್ಲ. ಅವರ ಹಕ್ಕುಗಳಿಗೆ ಧಕ್ಕೆಯಾಗೋದಿಲ್ಲ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply