ಲಿಥುವೇನಿಯಾ ಹಾಗೂ ರಷ್ಯಾದ ನಡುವಿನ ಸಂಬಂಧ ಉದ್ವಿಗ್ನ: ವಿಶ್ವಸಂಸ್ಥೆ ಆತಂಕ

masthmagaa.com:

ಯುಕ್ರೇನ್ ಹಾಗೂ ರಷ್ಯಾ ನಡುವಿನ ಸಂಘರ್ಷ ಕೊನೆಯಾಗಲಿ. ಜಾಗತಿಕವಾಗಿ ಉಧ್ಬವಿಸಿರೋ ಎಲ್ಲ ಸಮಸ್ಯೆಗಳು ನಿವಾರಣೆಯಾಗಲಿ ಅಂತ ಇಡೀ ವಿಶ್ವವೇ ಪ್ರಾರ್ಥನೆ ಮಾಡ್ತಿದ್ರೆ, ಇತ್ತ ಅದೇ ಯುರೋಪ್‌ನಲ್ಲಿ ಮತ್ತೊಂದು ಯುದ್ದದ ಕಾರ್ಮೋಡ ನಿಧಾನವಾಗಿ ಆವರಿಸಿಕೊಳ್ತಿದೆ. ಯುಕ್ರೇನ್‌ ಯುದ್ದದಿಂದ ಅಮೆರಿಕ ಹಾಗೂ ಮಿತ್ರರು ರಷ್ಯಾ ಮೇಲೆ ಸಾಂಕ್ಷನ್‌ಗಳನ್ನ ಹೇರ್ತಾಯಿದ್ದಾರೆ. ಯುರೋಪಿಯನ್‌ ಯೂನಿಯನ್‌ ಕೂಡ ಒಂದೊಂದೇ ರೀತಿಯಲ್ಲಿ ಆಕ್ರಮಣಕಾರಿ ಹೆಜ್ಜೆಗಳನ್ನ ಇಡುತ್ತಾ ರಷ್ಯಾವನ್ನ ಸಂಕಷ್ಟಕ್ಕೆ ಸಿಲುಕಿಸೋ ಪ್ರಯತ್ನ ಮಾಡ್ತಿದೆ. ಇದರ ನಡುವೆಯೇ ರಷ್ಯಾ – ಲಿಥುವೇನಿಯಾ ಮಧ್ಯೆ ಈಗ ಸಂಬಂಧ ಬಿಗಡಿಯಾಯಿಸುತ್ತಿದ್ದು ಈಗ ಇಡೀ ಜಗತ್ತೇ ಎರಡೂ ದೇಶಗಳ ಚಲವಲನಗಳ ಕಡೆ ದೃಷ್ಠಿ ಹಾಯಿಸಿದೆ. ಒಂದು ಕಾಲದಲ್ಲಿ ಸೋವಿಯತ್‌ ಯೂನಿಯನ್‌ ಭಾಗವಾಗಿದ್ದ ಲಿಥುವೇನಿಯಾ ಆಮೇಲೆ ನ್ಯಾಟೋಗೂ ಸೇರಿಕೊಳ್ತು. ಯೂರೋಪಿಯನ್‌ ಯೂನಿಯನ್‌ಗೂ ಸೇರಿಕೊಳ್ತು. ಒಟ್ಟಾರೆಯಾಗಿ ರಷ್ಯಾದ ವಿರೋಧಿಗಳ ಗುಂಪಿನಲ್ಲಿ ಗುರುತಿಸಿಕೊಳ್ತು. ಕಳೆದ ವಾರ ರಷ್ಯಾದ ಆಡಳಿತವಿರೋ ಬ್ಯಾಲೆಸ್ಟಿಕ್‌ ಸಮುದ್ರದ ಕಲಿನನ್‌ಗ್ರಾಡ್‌ ಅನ್ನೋ ಪ್ರದೇಶಕ್ಕೆ ಲಿಥುವೇನಿಯಾ ಸರಕುಗಳನ್ನ ಪೂರೈಕೆ ಮಾಡೋದನ್ನ ನಿಲ್ಲಿಸಿಬಿಡ್ತು. ಇದರ ಬೆನ್ನಲ್ಲೇ ರಷ್ಯಾದಿಂದ ಬಿಗ್‌ ವಾರ್ನಿಂಗ್‌ ಬಂದಿದ್ದು ಸದ್ಯ ಇಬ್ಬರ ನಡುವಿನ ವೈಮನಸ್ಸು ಯುರೋಪ್‌ನಲ್ಲಿ ಮತ್ತೊಂದು ಸಂಘರ್ಷಕ್ಕೆ ಕಾರಣವಾಗುತ್ತಾ ಅನ್ನೋ ಭೀತಿ ಶುರುವಾಗಿದೆ. ಆದ್ರೆ ಲಿಥುವೇನಿಯಾ ಹೇಳ್ತಿರೋದೆ ಬೇರೆ.. ನಾವು ಯುರೋಪಿಯನ್‌ ಯುನಿಯನ್‌ ವಿಧಿಸಿರೋ ನೀತಿಗಳಿಗೆ ಅನುಗುಣವಾಗಿ ಕ್ರಮ ತೆಗೆದುಕೊಳ್ತೀದ್ದೀವಿ..ರಷ್ಯಾ ನಮ್ಮ ಮೇಲೆ ದಾಳಿ ಮಾಡೋಕೆ ಸಾಧ್ಯವೇ ಇಲ್ಲ ಅಂತ ಹೇಳ್ತಾಯಿದೆ. ಆದ್ರೂ ಹಾಗೊಂದು ವೇಳೆ ಈ ಇಬ್ಬರ ನಡುವೆ ಈಗ ಉಂಟಾಗಿರೋ ಬಿರುಕು ಹೆಚ್ಚಾಯ್ತು ಅಂದ್ರೆ ಅದಕ್ಕಿಂತ ವಿನಾಶ ಮತ್ತೊಂದಿಲ್ಲ. ಯಾಕಂದ್ರೆ ಲಿಥುವೇನಿಯಾ ನ್ಯಾಟೊ ಕಂಟ್ರಿಯಾಗಿರೋದ್ರಿಂದ ಸದ್ಯ ಈ ಎರಡೂ ದೇಶಗಳು ಆತುರಗೆಟ್ಟು ಅತಿರೇಕಕ್ಕೆ ಮುಂದಾದ್ರೆ ಇತಿಹಾಸದಲ್ಲಿ ನ್ಯಾಟೋ ಹಾಗೂ ರಷ್ಯಾದ ನಡುವಿನ ನೇರ ಯುದ್ದಕ್ಕೆ ಇದು ಕಾರಣವಾಗಲಿದೆ. ಇದರ ಬೆನ್ನಲ್ಲೇ ಈ ಬೆಳವಣಿಗೆಗಳ ಬಗ್ಗೆ ವಿಶ್ವಸಂಸ್ಥೆ ಕೂಡ ಆತಂಕ ವ್ಯಕ್ತಪಡಿಸಿದೆ. ಚೀಫ್‌ ಸೆಕ್ರೆಟ್ರಿ ಆಂಟನಿಯೋ ಗುಟ್ರೆಸ್‌ರ ವಕ್ತಾರ ಸ್ಟೇಪನ್‌ ಡುಜಾರಿಕ್‌ ಮಾತನಾಡಿದ್ದು ʻರಷ್ಯಾ ಹಾಗೂ ಲಿಥುವೇನಿಯಾ ನಡುವಿನ ಸದ್ಯದ ಬೆಳವಣಿಗೆಗಳನ್ನ ತುಂಬಾ ಹತ್ತಿರದಿಂದ ಗಮನಿಸ್ತಾ ಇದ್ದೀವಿ. ಎಚ್ಚರಿಕೆಗಳ ಬಗ್ಗೆ ಕೂಡ ನಾವು ತೀವ್ರ ಕಾಳಜಿ ವ್ಯಕ್ತಪಡಿಸ್ತೀದ್ದೀವಿ. ಇದು ಎಲ್ಲ ರೀತಿಯಲ್ಲಿಯೂ ಅತ್ಯಂತ ಮಹತ್ವವಾದುದು. ಮಾತುಕತೆ ಹಾಗೂ ರಾಜತಾಂತ್ರಿಕತೆಗಳ ಮೂಲಕ ಅಂತಾರಾಷ್ಟ್ರೀಯ ಕಾನೂನುಗಳ ಮೂಲಕ ಇದನ್ನ ಬಗೆ ಹರಿಸಿಕೊಳ್ಳಬಹುದು. ಆಕ್ರಮಣಕಾರಿ ಹೇಳಿಕೆಗಳು, ನಿರ್ಧಾರಗಳು ಆತಂಕವನ್ನ ಜಾಸ್ತಿ ಮಾಡ್ತವೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply