ಯುಕ್ರೇನ್​ ರಾಜಧಾನಿ ಕಡೆ ಮುನ್ನುಗ್ಗುತ್ತಿದೆ ರಷ್ಯಾ ಸೇನೆ!

masthmagaa.com:

ಯುಕ್ರೇನ್​ ಮೇಲೆ ರಷ್ಯಾ ಘೋಷಿಸಿರೋ ಯುದ್ಧ ಎರಡನೇ ದಿನವೂ ಮುಂದುವರಿದಿದೆ. ಯುಕ್ರೇನ್​ ರಾಜಧಾನಿ ಕಿಯವ್​ ಸುತ್ತಮುತ್ತನೇ ತನ್ನ ಸೇನೆಯನ್ನ ಕೇಂದ್ರಿಕರಿಸಿರೋ ರಷ್ಯಾ, ಸ್ಫೋಟಗಳನ್ನ ನಡೆಸ್ತಿದೆ. ಕ್ಷಿಪಣಿ ದಾಳಿ ಮಾಡ್ತಿದೆ. ಶುಕ್ರವಾರ ಬೆಳ್ಳಂಬೆಳಗ್ಗೆಯೇ ಕಿಯವ್​​ ನಗರದಲ್ಲಿ ಭಾರಿ ಸ್ಫೋಟದ ಸದ್ದುಗಳು ಕೇಳಿಸಿವೆ. ದಾಳಿಯಲ್ಲಿ ಹಲವು ಕಟ್ಟಡಗಳು ಧ್ವಂಸವಾಗಿವೆ.
ಲಾಸ್ಟ್ ಟೈಮ್ ಈ ಥರ ನಮ್ಮ ರಾಜಧಾನಿ ದಾಳಿಗೆ ಒಳಗಾಗಿದ್ದು 1941ರಲ್ಲಿ. ಎರಡನೇ ಮಹಾಯುದ್ಧ ವೇಳೆ. ಆಗ ಹಿಟ್ಲರನ ನಾಝಿ ಸೇನೆ ಕಿಯೆವ್ ಮೇಲೆ ದಾಳಿ ಮಾಡಿತ್ತು ಅಂತ ಯುಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೇಬಾ ಹೇಳಿದ್ದಾರೆ. ಜೊತೆಗೆ ಅಮೆರಿಕದ ಸೆಕ್ರಟರಿ ಆಫ್ ಸ್ಟೇಟ್ ಆಂಟನಿ ಬ್ಲಿಂಕನ್ ಜೊತೆ ನಾನು ಮಾತಾಡಿದ್ದೀನಿ. ಇನ್ನಷ್ಟು ಶಸ್ತ್ರಾಸ್ತ್ರಗಳನ್ನ ಕಳಿಸಿಕೊಡ್ತೀವಿ ಅಂತ ಅವ್ರು ಹೇಳಿದ್ದಾರೆ ಅಂತ ಯುಕ್ರೇನ್ ಫಾರಿನ್ ಮಿನಿಸ್ಟರ್ ಕುಲೇಬಾ ಹೇಳಿದ್ದಾರೆ.
ಇಷ್ಟುದಿನ ಪೂರ್ವ ಯುಕ್ರೇನ್​ನ ಡಾನೆಟ್ಸ್ಕ್​ ಮತ್ತು ಲುಹಾನ್ಸ್ಕ್​ ಪ್ರದೇಶಗಳ ಬಗ್ಗೆ ಮಾತಾಡ್ತಿದ್ದ ರಷ್ಯಾದ ಪ್ಲಾನೇ ಬೇರೆ ಇರಬೋದಾ ಅನ್ನೋ ಅನುಮಾನ ಮೂಡಿದೆ. ರಾಜಧಾನಿ ಕಿಯವ್​ ಅನ್ನ ಸಂಪೂರ್ಣವಾಗಿ ವಶಪಡಿಸಿಕೊಂಡು, ಹಾಲಿ ಇರೋ ಸರ್ಕಾರವನ್ನ ಕೆಡವಿ, ಅಲ್ಲಿ ರಷ್ಯಾ ಪರ ಇರೋ ಸರ್ಕಾರ ಬರುವಂತೆ ನೋಡಿಕೊಳ್ಳೋದು ಪುಟಿನ್ ಪ್ಲಾನ್​ ಅಂತ ಅಮೆರಿಕದ ಹಿರಿಯ ರಕ್ಷಣಾ ಅಧಿಕಾರಿಯೊಬ್ಬರು ಹೇಳಿದ್ದಾರೆ. ಉತ್ತರ, ದಕ್ಷಿಣ ಮತ್ತು ಪೂರ್ವ – ಮೂರೂ ಕಡೆಗಳಿಂದಾನೂ ಕಿಯವ್ ಟಾರ್ಗೆಟ್​ ಮಾಡಿ ರಷ್ಯಾ ದಾಳಿ ಮಾಡ್ತಿರೋದು ನೋಡಿದ್ರೆ ಹೀಗೇ ಅನ್ಸುತ್ತೆ ಅಂತ ಅವರು ಹೇಳಿದ್ದಾರೆ. ಇದೆಲ್ಲದರ ನಡುವೆ ಯುಕ್ರೇನ್​ನ ಮಾಜಿ ಅಧ್ಯಕ್ಷರ ಹೆಸರೊಂದು ಮುನ್ನೆಲೆಗೆ ಬರ್ತಿದೆ. ಅವರೇ ವಿಕ್ಟರ್​ ಯನಕೋವಿಚ್​.. 2010ರಿಂದ 2014ರವರೆಗೆ ಯುಕ್ರೇನ್​​ ಅಧ್ಯಕ್ಷರಾಗಿದ್ದಿದ್ದು ಇವರೇ. ಆದ್ರೆ ರಷ್ಯಾ ಪರವಾಗಿದ್ದ ಇವರ ವಿರುದ್ಧ 2014ರಲ್ಲಿ ಭಾರಿ ಪ್ರತಿಭಟನೆಗಳು ನಡೆದು ಇವರನ್ನ ಕುರ್ಚಿಯಿಂದ ಕೆಳಗಿಳಿಸಲಾಯ್ತು. ಇದೇ ಟೈಮಲ್ಲಿ ಕ್ರೈಮಿಯಾ ಮೇಲೆ ಆಕ್ರಮಣ ಮಾಡಿದ ರಷ್ಯಾ ಅದನ್ನ ವಶಪಡಿಸಿಕೊಳ್ತು. ವಿಕ್ಟರ್​ ಯನಕೋವಿಚ್​​ ಬಳಿಕ ಯುಕ್ರೇನ್​ನಲ್ಲಿ ಯುಕ್ರೇನ್​ ಪರವಾಗಿರೋ ಅಧ್ಯಕ್ಷರು ಅಧಿಕಾರಕ್ಕೆ ಬರೋಕೆ ಶುರುವಾದ್ರು. ಆದ್ರೀಗ ಯುಕ್ರೇನ್​ ಮೇಲೆ ರಷ್ಯಾ ಆಕ್ರಮಣ ಮಾಡಿ, ಅಲ್ಲಿನ ಸರ್ಕಾರ ಕೆಡವಿ, ತಮ್ಮ ಪರವಾಗಿರೋ ಸರ್ಕಾರವನ್ನ ರಚಿಸಬಹುದು ಅನ್ನೋ ಆತಂಕ ಮೂಡಿರೋ ನಡುವೆ ವಿಕ್ಟರ್ ಯನಕೋವಿಚ್​​ ಹೆಸರು ಕೇಳಿ ಬರ್ತಿರೋದು ವಿಶೇಷ. ಸೋ 71 ವರ್ಷದ ಯನಕೋವಿಚ್​​ರನ್ನೇ ಅಧ್ಯಕ್ಷರನ್ನಾಗಿ ಮಾಡೋ ಲೆಕ್ಕಾಚಾರದಲ್ಲಿ ಪುಟಿನ್​ ಇರಬಹುದಾ ಅನ್ನೋ ಅನುಮಾನ ಮೂಡಿದೆ.

-masthmagaa.com

Contact Us for Advertisement

Leave a Reply