ಒಂದು ಹೆಜ್ಜೆ ಹಿಂದಿಟ್ಟ ಪುಟಿನ್! ಚೂರು ಸರಿದ ಯುದ್ಧದ ಕಾರ್ಮೋಡ!

masthmagaa.com:

ಯುಕ್ರೇನ್​ ಮೇಲೆ ರಷ್ಯಾ ಆಕ್ರಮಣ ಮಾಡ್ಬೋದು ಅನ್ನೋ ಆತಂಕ ಜಗತ್ತಿನಲ್ಲೆಡೆ ಸಾಕಷ್ಟು ಕೋಲಾಹಲ ಎಬ್ಬಿಸಿರೋ ನಡುವೆ ರಷ್ಯಾ ಕಡೆಯಿಂದ ಒಂದು ಗುಡ್​ನ್ಯೂಸ್​ ಬಂದಿದೆ. ಯುಕ್ರೇನ್​ ಗಡಿ ಸಮೀಪ ರಷ್ಯಾ ನಿಯೋಜಿಸಿದ್ದ ಕೆಲವೊಂದು ಸೇನಾಪಡೆಗಳು ಬೇಸ್​​ಗೆ ವಾಪಸ್ ಬರ್ತಿವೆ ಅಂತ ರಷ್ಯಾ ಹೇಳಿದೆ. ದಕ್ಷಿಣ ಮತ್ತು ಪಶ್ಚಿಮದಲ್ಲಿ ನಿಯೋಜನೆಗೊಂಡಿದ್ದ ಯೂನಿಟ್​​ಗಳು ತಮ್ಮ ಟಾಸ್ಕ್​ ಮುಗಿಸಿದ್ದು, ತಮ್ಮ ಲಗೇಜನ್ನ ರೈಲು ಮತ್ತು ವಾಹನಗಳಿಗೆ ತುಂಬುತ್ತಿದ್ದಾರೆ. ಇವತ್ತು ವಾಪಸ್​ ಬರೋ ಪ್ರಕ್ರಿಯೆ ಶುರುವಾಗುತ್ತೆ ಅಂತ ರಷ್ಯಾ ಹೇಳಿದೆ. ಯುಕ್ರೇನ್​ ಅನ್ನ ಮೂರು ಕಡೆಯಿಂದ ಸುತ್ತುವರಿದಿರೋ ರಷ್ಯಾ, ಇದೇ ಮೊದಲ ಬಾರಿಗೆ ತನ್ನ ಸೇನೆಯನ್ನ ಹಿಂದಕ್ಕೆ ಕರೆಸಿಕೊಳ್ತಿರೋದು ಮಹತ್ವ ಪಡೆದುಕೊಂಡಿದೆ. ಇದರ ಬೆನ್ನಲ್ಲೇ ನಿನ್ನೆ ಭಾರಿ ಕುಸಿತ ಕಂಡಿದ್ದ ಮಾರ್ಕೆಟ್​ ಇವತ್ತು ಭಾರಿ ಏರಿಕೆ ಕಂಡಿದೆ. ಅಂದ್ಹಾಗೆ ರಷ್ಯಾ ಅಧ್ಯಕ್ಷ ಪುಟಿನ್​ ಮತ್ತು ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೋವ್​ ನಡುವೆ ಸೋಮವಾರ ಮೀಟಿಂಗ್ ನಡೆದಿತ್ತು. ಈ ವೇಳೆ ಇಬ್ಬರು ನಾಯಕರ ಟೋನ್​ ಸ್ವಲ್ಪ ಚೇಂಜ್​ ಆದಂತೆ ಕಂಡಿತ್ತು. ಯುಕ್ರೇನ್​ ವಿಚಾರವಾಗಿ ಪಾಶ್ಚಿಮಾತ್ಯ ದೇಶಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಯಾವಾಗಲೂ ಅವಕಾಶ ಇತ್ತು. ಆ ಅವಕಾಶ ಮುಂದುವರಿಸೋ ಬಗ್ಗೆ ನಾನು ಸಲಹೆ ಕೊಡ್ತೀನಿ ಅಂತ ಸೆರ್ಗ ಲಾವ್ರೋವ್ ಹೇಳಿದ್ದರು. ಅದಕ್ಕೆ ಪುಟಿನ್​, ಓಕೆ ಫೈನ್​ ಎಂದಿದ್ದರು. ಸೋ ರಾಜತಾಂತ್ರಿಕ ಮಾರ್ಗಗಳ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ರಷ್ಯಾ ಮುಂದಾಗಿದ್ಯಾ ಅನ್ನೋ ಕುತೂಹಲ ಮೂಡಿತ್ತು. ಇದ ಬೆನ್ನಲ್ಲೇ ರಷ್ಯಾ ತನ್ನ ಕೆಲವೊಂದು ಸೇನಾ ಯೂನಿಟ್​​ಗಳನ್ನ ವಾಪಸ್​ ಕರೆಸಿಕೊಳ್ತಿರೋದಾಗಿ ಘೋಷಿಸಿದೆ. ಆದ್ರೆ ಎಷ್ಟು ಪ್ರಮಾಣದಲ್ಲಿ ಸೇನೆ ಹಿಂದಕ್ಕೆ ಬರುತ್ತೆ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಹೀಗಾಗಿ ಯುದ್ಧದ ಕಾರ್ಮೋಡ ಇನ್ನೂ ಸರಿಯಾಗಿ ತಿಳಿಯಾಗಿಲ್ಲ.

– ಫೆಬ್ರವರಿ 16ರಂದು ಅಂದ್ರೆ ನಾಳೆ ರಷ್ಯಾ ಅಟ್ಯಾಕ್​​ ಮಾಡ್ಬೋದು ಅಂತ ಪಾಶ್ಚಿಮಾತ್ಯ ದೇಶಗಳ ಕೆಲ ಮಾಧ್ಯಮಗಳು ವರದಿ ಮಾಡಿವೆ. ಇದರ ಬೆನ್ನಲ್ಲೇ ಫೆಬ್ರವರಿ 16ಕ್ಕೆ ದೇಶದ ಜನ ಒಗ್ಗಟ್ಟು ಪ್ರದರ್ಶಿಸಬೇಕು ಅಂತ ಯುಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಕರೆ ಕೂಡ ಕೊಟ್ಟಿದ್ದಾರೆ. ದೇಶವನ್ನು ಉದ್ದೇಶಿಸಿ ಮಾತನಾಡಿದ ಝೆಲೆನ್​​ಸ್ಕಿ, ಫೆಬ್ರವರಿ 16ಕ್ಕೆ ಅಟ್ಯಾಕ್​ ಮಾಡ್ಬೋದು ಅಂತ ಹೇಳಲಾಗ್ತಿದೆ. ನಾವು ಆ ದಿನವನ್ನ ಏಕತೆಯ ದಿನವನ್ನಾಗಿ ಮಾಡಬೇಕು. ಆ ದಿನದಂದು ಯುಕ್ರೇನ್​ನ ಎಲ್ಲಾ ಗ್ರಾಮಗಳಲ್ಲಿ, ಪಟ್ಟಣಗಳಲ್ಲಿ ರಾಷ್ಟ್ರ ಧ್ವಜವನ್ನ ಹಾರಿಸಬೇಕು. ಬೆಳಗ್ಗೆ 10 ಗಂಟೆಗೆ ಇಡೀ ದೇಶದಲ್ಲಿ ರಾಷ್ಟ್ರಗೀತೆಯನ್ನ ಹಾಡಬೇಕು ಅಂತೆಲ್ಲಾ ಯುಕ್ರೇನ್​​ ಜನತೆಗೆ ಕರೆ ಕೊಟ್ಟಿದ್ದಾರೆ. ಅಲ್ಲದೆ ಯುದ್ಧದ ವಾತಾವರಣ ಇರೋದ್ರಿಂದ ಯೋಧರು ಮತ್ತು ಬಾರ್ಡರ್ ಗಾರ್ಡ್ಸ್​ನ ವೇತನವನ್ನ ಹೆಚ್ಚಿಸುವಂತೆಯೂ ಆದೇಶಿಸಿದ್ದಾರೆ. ಹಾಗಂತ ಫೆಬ್ರವರಿ 16ಕ್ಕೇ ರಷ್ಯಾ ಅಟ್ಯಾಕ್​ ಮಾಡುತ್ತೆ ಅಂತ ಝೆಲೆನ್​​ಸ್ಕಿ ಪ್ರಿಡಿಕ್ಟ್ ಮಾಡಿದ್ದಲ್ಲ, ಬದಲಾಗಿ ಕೆಲ ವಿದೇಶಿ ಮಾಧ್ಯಮಗಳ ವರದಿಗೆ ಪ್ರತಿಕ್ರಿಯಿಸಿದ್ದು ಅಂತ ಯುಕ್ರೇನ್ ಅಧಿಕಾರಿಗಳು ಸಮಜಾಯಿಷಿ ಕೊಡೋ ಪ್ರಯತ್ನ ಮಾಡಿದ್ದಾರೆ.

– ಕಳೆದ ಎರಡು ದಿನದಲ್ಲಿ ಯುಕ್ರೇನ್​ ಸುತ್ತಮುತ್ತ ರಷ್ಯಾ ತನ್ನ ಸೇನಾ ಜಮಾವಣೆಯನ್ನ ಹೆಚ್ಚಿಸಿರೋದು ಹೊಸ ಉಪಗ್ರಹ ಚಿತ್ರಗಳಲ್ಲಿ ಗೊತ್ತಾಗಿದೆ. ಪ್ರಮುಖವಾಗಿ ಯುಕ್ರೇನ್​ನ ದಕ್ಷಿಣದಲ್ಲಿರೋ ಕ್ರೈಮಿಯಾ, ಪೂರ್ವದಲ್ಲಿರೋ ಯುಕ್ರೇನ್​-ರಷ್ಯಾ ಗಡಿ ಮತ್ತು ಉತ್ತರದ ಬೆಲಾರುಸ್​​ನಲ್ಲಿ ರಷ್ಯಾ ಮೊದಲಿಗಿಂತ ಹೆಚ್ಚಿನ ಸೇನೆಯನ್ನ ನಿಯೋಜಿಸಿದೆ. ದೊಡ್ಡ ಸೇನಾ ತುಕಡಿಗಳ ಆಗಮನ, ದಾಳಿ ಮಾಡುವಂಥಾ ಹೆಲಿಕಾಪ್ಟರ್​ಗಳು, ಸ್ಫೋಟಕಗಳನ್ನ ಹಾಕಬಲ್ಲ ಫೈಟರ್​ ಜೆಟ್​​ಗಳು ಸ್ಯಾಟಲೈಟ್​ ಚಿತ್ರಗಳಲ್ಲಿ ಕಾಣಿಸ್ತಿವೆ. ಕೆಲವೊಂದು ಲೊಕೇಷನ್​​ಗಳಲ್ಲಿ ಹತ್ತು ದಿನದ ಹಿಂದೆ ಇದ್ದ ರಷ್ಯಾ​ ಸೇನೆ ಈಗ ಅಲ್ಲಿ ಇಲ್ಲದಿರೋದು ಕೂಡ ಗೊತ್ತಾಗುತ್ತೆ. ಹಾಗಿದ್ರೆ ಇಲ್ಲಿದ್ದೋರು ಎಲ್ಲೋದ್ರು, ಯುಕ್ರೇನ್​​ನ ಮತ್ತಷ್ಟು ಹತ್ತಿರಕ್ಕೆ ಹೋದ್ರಾ ಅನ್ನೋ ಅನುಮಾನ ಮೂಡಿದೆ.

-masthmagaa.com

Contact Us for Advertisement

Leave a Reply