ಪುಟಿನ್ ಪರಮಾಣು ಬಾಂಬ್ ರೆಡಿ! ಹೇಗಿದೆ ಗೊತ್ತಾ ಪರಿಸ್ಥಿತಿ?

masthmagaa.com:

ರಷ್ಯಾ ಮತ್ತು ಯುಕ್ರೇನ್ ನಡುವಿನ ಸಂಘರ್ಷ ದಿನೇ ದಿನೇ ಜಾಸ್ತಿಯಾಗುತ್ತಲೇ ಇದೆ. ಈ ಬಗ್ಗೆ ನಾವು ಸುತ್ತು ಜಗತ್ತಿನಲ್ಲಿ ಪ್ರತಿದಿನವೂ ಮಾಹಿತಿ ನೀಡ್ತಾನೇ ಬಂದಿದ್ದೀವಿ. ಅದೇ ರೀತಿ ಇವತ್ತು ಕೂಡ ಹಲವು ಮಹತ್ವದ ಬೆಳೆವಣಿಗೆಗಳು ನಡೆದಿವೆ. ರಷ್ಯಾ ಯುಕ್ರೇನ್ ಗಡಿಯಲ್ಲಿ ಯಾವುದೇ ಕ್ಷಣದಲ್ಲಿ ಬೇಕಾದ್ರೂ ಯುದ್ಧ ಶುರುವಾಗ್ಬೋದು ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ರಷ್ಯಾದ ಪರಮಾಣು ಪಡೆ ಸಮರಾಭ್ಯಾಸ ನಡೆಸಿದೆ. ಹೈಪರ್​ಸಾನಿಕ್ ಮತ್ತು ಕ್ರೂಸ್​ ಕ್ಷಿಪಣಿಗಳನ್ನು ಯಶಸ್ವೀ ಪರೀಕ್ಷೆ ಕೂಡ ನಡೆಸಲಾಗಿದೆ. ಅದನ್ನು ಖುದ್ದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ನೇ ಬೆಲಾರುಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೋ ಅವರೊಂದಿಗೆ ಮೇಲ್ವಿಚಾರಣೆ ಮಾಡಿದ್ದಾರೆ ಅಂತ ವರದಿಯಾಗಿದೆ. ಒಂದ್ಕಡೆ ನಾವು ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ತಿದ್ದೀವಿ ಅಂತಿರೋ ರಷ್ಯಾ ಮತ್ತೊಂದು ಕಡೆ ತನ್ನ ಸಮರಾಭ್ಯಾಸದ ನೆಪದಲ್ಲಿ ಸೇನೆ ನಿಯೋಜನೆಯನ್ನು ಮತ್ತಷಟು ಹೆಚ್ಚಿಸುತ್ತಿದೆ ಅನ್ನೋದು ಗೊತ್ತಾಗಿದೆ.

ಈಗಾಗಲೇ ಯುಕ್ರೇನ್​​ನ ಪೂರ್ವ ಭಾಗದಲ್ಲಿರೋ ಡೊನೆಟ್ಸ್ಕ್​​​ನಲ್ಲಿ ಪ್ರತ್ಯೇಕತಾವಾದಿಗಳು ದಾಳಿ ನಡೆಸೋಕೆ ಶುರು ಮಾಡಿಯಾಗಿದೆ. ನಿನ್ನೆ ರಾತ್ರಿ ಮತ್ತು ಇವತ್ತು ಬೆಳಗ್ಗೆ ಕೂಡ ಹಲವು ಸ್ಫೋಟದ ಶಬ್ದಗಳು ಕೇಳಿ ಬಂದ ಬಗ್ಗೆ ವರದಿಯಾಗಿದೆ. ಆದ್ರೆ ಈ ಶಬ್ದ ಯಾವುದ್ರದ್ದು ಅಂತ ಇನ್ನೂ ಮಾಹಿತಿ ಸಿಕ್ಕಿಲ್ಲ. ಪ್ರತ್ಯೇಕತಾವಾದಿಗಳಾಗಲೀ, ಯುಕ್ರೇನ್ ಸೇನೆಯಾಗಲೀ ಯಾವುದೇ ಮಾಹಿತಿ ನೀಡಿಲ್ಲ.. ಆದ್ರೆ ನಿನ್ನೆ ಒಂದೇ ದಿನ ಪೂರ್ವ ಯುಕ್ರೇನ್​​ನಲ್ಲಿ 1600 ಬಾರಿ ಕದನ ವಿರಾಮ ಉಲ್ಲಂಘನೆಯಾಗಿದೆ. ಇದು ಈ ವರ್ಷದಲ್ಲೇ ಹೆಚ್ಚು. ರಷ್ಯಾ ಪ್ರತ್ಯೇಕತಾವಾದಿಗಳ ಹಿಡಿತದಲ್ಲಿರೋ ಡೊನೆಟ್ಸ್ಕ್​​ ಮತ್ತು ಲುಗನ್ಸ್ಕ್​​​ನಲ್ಲಿ ಹೆಚ್ಚಾಗಿ ಕದನ ವಿರಾಮ ಉಲ್ಲಂಘನೆಯಾಗ್ತಿದೆ ಅಂತ ಮೂಲಗಳು ತಿಳಿಸಿವೆ. ಈಗಾಗಲೇ ಸಂಘರ್ಷದಲ್ಲಿ ಯುಕ್ರೇನ್​​ನ ಇಬ್ಬರು ಯೋಧರು ಪ್ರಾಣ ಕಳ್ಕೊಂಡಿದ್ದಾರೆ.

ಇನ್ನು ಯುಕ್ರೇನ್​ ಸೇನೆಯೇ ನಮ್ಮ ಕಂಟ್ರೋಲ್​​ನಲ್ಲಿರೋ ಪ್ರದೇಶಗಳನ್ನು ವಶಕ್ಕೆ ತಗೊಳ್ಳಕ್ಕೆ ಪ್ಲಾನ್ ಮಾಡಿದೆ ಅಂತ ಪ್ರತ್ಯೇಕತಾವಾದಿಗಳು ಆರೋಪಿಸಿದ್ದಾರೆ. ಜೊತೆಗೆ ಯುಕ್ರೇನ್​ನ ಗೂಢಾಚಾರಿ ಅನ್ನೋ ಆರೋಪದ ಮೇರೆಗೆ ವ್ಯಕ್ತಿಯೊಬ್ಬನನ್ನು ಪರೇಡ್ ಮಾಡಿದ್ದಾರೆ. ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರೋ ಯುಕ್ರೇನ್ ಮಾತ್ರ ನಮ್ಮ ಬಳಿ ಆ ರೀತಿಯ ಯಾವುದೇ ಪ್ಲಾನ್ ಇಲ್ಲ.. ಆ ವ್ಯಕ್ತಿ ನಮ್ಮ ಗೂಢಾಚಾರಿಯೂ ಅಲ್ಲ ಅಂತ ಸ್ಪಷ್ಟನೆ ನೀಡಿದೆ.

ಈ ನಡುವೆ ಪ್ರತಿಕ್ರಿಯಿಸಿರೋ ಯುಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​​ಸ್ಕಿ, ರಷ್ಯಾ ವಿರುದ್ಧ ಇಡಿ ಯೂರೋಪ್​​ಗೆ ಯುಕ್ರೇನ್​​ ಶೀಲ್ಡ್ ರೀತಿ ಇದೆ.. ಹೀಗಾಗಿ ರಷ್ಯಾ ವಿರುದ್ಧ ಸಂಘರ್ಷ ಮಿತಿ ಮೀರಿದ್ರೆ ಬೆಂಬಲ ಅಗತ್ಯ ಅಂತ ಹೇಳಿದ್ದಾರೆ. ಜೊತೆಗೆ ಯುಕ್ರೇನ್ ಪ್ರಚೋದನೆಗಳಿಗೆ ಒಳಗಾಗಿ ಹೆಜ್ಜೆ ಇಡೋದಿಲ್ಲ.. ಆದ್ರೆ ಯಾವುದೇ ರೀತಿಯ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿದ್ದೀವಿ ಅಂತ ಹೇಳಿದ್ದಾರೆ.

ಇದ್ರ ನಡುವೆ ಪ್ರತಿಕ್ರಿಯಿಸಿರೋ ಅಮೆರಿಕ, ರಷ್ಯಾ ಸೇನೆ ಯುಕ್ರೇನ್ ಗಡಿಯಲ್ಲಿ ದೊಡ್ಡಮಟ್ಟದಲ್ಲಿ ನಿಯೋಜನೆಗೊಂಡಿದ್ದು, ಯುದ್ಧಕ್ಕೆ ರೆಡಿಯಾಗಿ ನಿಂತಿದೆ ಅಂತ ಹೇಳಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ನ್ಯಾಷನಲ್ ಸೆಕ್ಯೂರಿಟಿ ಟೀಂ ಕೂಡ ಇನ್ನೂ ರಷ್ಯಾ ಯುಕ್ರೇನ್ ಮೇಲೆ ದಾಳಿ ಮಾಡೋ ಸಾಧ್ಯತೆ ಇದೆ. ಯಾವಾಗ ಬೇಕಾದ್ರೂ ಆಕ್ರಮಣ ನಡೀಬೋದು ಅಂತ ಎಚ್ಚರಿಸಿದೆ. ಹೀಗಾಗಿಯೇ ಜೋ ಬೈಡೆನ್ ರಾಷ್ಟ್ರೀಯ ಭದ್ರತಾ ಸಲಹೆಗಾರರೊಂದಿಗೆ ಸಭೆ ನಡೆಸಿದ್ದು, ಸದ್ಯದ ಪರಿಸ್ಥಿತಿ ಕುರಿತು ಚರ್ಚಿಸಿದ್ದಾರೆ. ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕೂಡ ರಷ್ಯಾ ಯುಕ್ರೇನ್ ಮೇಲೆ ದಾಳಿ ನಡೆಸಿದ್ರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತೆ ಅಂತ ಎಚ್ಚರಿಸಿದ್ದಾರೆ.

ಅಮೆರಿಕದ ಡಿಫೆನ್ಸ್ ಸೆಕ್ರೆಟರಿ ಲಾಯ್ಡ್ ಆಸ್ಟಿನ್ ಮಾತನಾಡಿ, ರಷ್ಯಾ ಸೇನೆ ಯುಕ್ರೇನ್ ಕಡೆಗೆ ಮುನ್ನುಗ್ಗುತ್ತಲೇ ಇದೆ. ಆದ್ರೂ ಕೂಡ ಪುಟಿನ್ ಸಂಘರ್ಷದಿಂದ ಹಿಂದೆ ಸರಿಯುತ್ತಾರೆ ಅನ್ನೋ ನಂಬಿಕೆ ಇದೆ ಅಂತ ಹೇಳಿದ್ದಾರೆ.

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮಾತನಾಡಿ, ರಷ್ಯಾ ಯೂರೋಪವನ್ನು ವಿಶ್ವಯುದ್ಧ ನಂತರದ ಅತಿದೊಡ್ಡ ಸಂಘರ್ಷಕ್ಕೆ ತಳ್ಳುವಂತೆ ಕಾಣ್ತಿದೆ. ಗುಪ್ತಚರ ಮಾಹಿತಿ ಪ್ರಕಾರ ರಷ್ಯಾ, ಬೆಲಾರುಸ್ ಮೂಲಕ ಯುಕ್ರೇನ್ ಮೇಲೆ ದಾಳಿ ನಡೆಸಿ, ಈ ಮೂಲಕ 28 ಲಕ್ಷ ಜನಸಂಖ್ಯೆ ಇರೋ ಯುಕ್ರೇನ್ ರಾಜಧಾನಿ ಕೀವ್​​​​​​​​​ನ್ನು ವಶಕ್ಕೆ ಪಡೆಯೋ ಪ್ಲಾನ್ ಮಾಡ್ತಿದೆ ಅಂತ ಹೇಳಿದ್ದಾರೆ. ಜೊತೆಗೆ ಪ್ರತ್ಯೇಕತಾವಾದಿಗಳ ದಾಳಿ ಶುರು ಅಷ್ಟೆ.. ಪುಟಿನ್ ಈಗಷ್ಟೇ ತಮ್ಮ ಪ್ಲಾನ್ ಶುರು ಮಾಡಿದ್ದಾರೆ.. ಯುದ್ಧ ನಡೆದ್ರೆ ರಷ್ಯಾ, ಯುಕ್ರೇನ್.. ಎರಡೂ ಕಡೆ ದೊಡ್ಡ ಸಂಖ್ಯೆಯಲ್ಲಿ ಜನ ಬಲಿಯಾಗ್ತಾರೆ ಅನ್ನೋದನ್ನ ಅರ್ಥ ಮಾಡ್ಕೊಳ್ಬೇಕು ಅಂತ ಹೇಳಿದ್ದಾರೆ. ಇದ್ರ ಬೆನ್ನಲ್ಲೇ ನ್ಯಾಟೋ ಚೀಫ್ ಜೆನ್ಸ್ ಸ್ಟೋಲನ್​ಬರ್ಗ್​ ಕೂಡ ರಷ್ಯಾ ಪೂರ್ಣ ಪ್ರಮಾಣದ ದಾಳಿಗೆ ಸಿದ್ಧತೆ ನಡೆಸ್ತಿದೆ.. ಯಾವಾಗ ಬೇಕಾದ್ರೂ ದಾಳಿ ಮಾಡ್ಬೋದು ಅಂತ ಹೇಳಿದ್ದಾರೆ.

ಇನ್ನು ಜಿ7 ದೇಶಗಳ ವಿದೇಶಾಂಗ ಸಚಿವರುಗಳು ಕೂಡ ಪ್ರತಿಕ್ರಿಯಿಸಿದ್ದು, ರಷ್ಯಾ ಸೇನೆ ಹಿಂದಕ್ಕೆ ಕರೆಸಿಕೊಳ್ತಿದೆ ಅನ್ನೋದಕ್ಕೆ ನಮ್ಮ ಬಳಿ ಯಾವುದೇ ಸಾಕ್ಷ್ಯಗಳು ಲಭ್ಯವಿಲ್ಲ. ಸದ್ಯದ ಪರಿಸ್ಥಿತಿ ಚಿಂತಾಜನಕವಾಗಿದೆ.. ರಷ್ಯಾ ಸಂಘರ್ಷ ತಿಳಿಗೊಳಿಸಲು ರಾಜತಾಂತ್ರಿಕ ಮಾರ್ಗ ಅನುಸರಿಸಬೇಕು ಅಂತ ಹೇಳಿದ್ದಾರೆ.

ಯುದ್ಧವನ್ನು ತಡೆಯೋ ಕೊನೆಯ ಪ್ರಯತ್ನವಾಗಿ ಇವತ್ತು ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರೋನ್​​ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್​​ಗೆ ಕರೆ ಮಾಡಿ ಮಾತಾಡಿದ್ದಾರೆ. ಈ ಹಿಂದೆಯೂ ಫೆಬ್ರುವರಿ 7ರಂದು ಇಮ್ಯಾನ್ಯುಯೆಲ್ ಮ್ಯಾಕ್ರೋನ್ ಪುಟಿನ್ ಜೊತೆ ಮಾತುಕತೆ ನಡೆಸಿದ್ರು. ಆದ್ರೆ ಅದು ಯಶಸ್ವಿಯಾಗಿರಲಿಲ್ಲ.
-masthmagaa.com

Contact Us for Advertisement

Leave a Reply