ಮುಂದಿನ 3 ದಿನದಲ್ಲಿ ರಾಜಧಾನಿ ಕಿಯವ್‌ಗೆ ನುಗ್ಗಲಿದೆ ರಷ್ಯಾ ಸೇನೆ’: ಅಮೆರಿಕ

masthmagaa.com:

ಮುಂದಿನ ಮೂರು ದಿನಗಳೊಳಗಾಗಿ ಯುಕ್ರೇನ್ ರಾಜಧಾನಿ ಕಿಯವ್​ ಮೇಲೆ ರಷ್ಯಾ ಸೇನೆ ದಾಳಿ ಮಾಡ್ಬೋದು ಅಂತ ಅಮೆರಿಕ ಮೂಲದ ಇನ್​​ಸ್ಟಿಟ್ಯೂಟ್ ಫಾರ್ ದಿ ಸ್ಟಡಿ ಆಫ್​ ವಾರ್ ಅಂದಾಜು ಮಾಡಿದೆ. ರಾಜಧಾನಿ ಮೇಲೆ ದಾಳಿ ಮಾಡೋದು ಈ ಯುದ್ಧದ ಕ್ರಿಟಿಕಲ್​ ಮೂಮೆಂಟ್ ಅಂತಾನೂ ಅದು ಹೇಳಿದೆ. ಯುಕ್ರೇನ್​ ಅಧ್ಯಕ್ಷ ಅಂತೂ ನಾನು ಕಿಯವ್​ನಲ್ಲೇ ಇರ್ತೀನಿ, ಯುದ್ಧ ಗೆಲ್ಲೋವರೆಗೂ ಇದನ್ನ ಬಿಟ್ಟು ಹೋಗಲ್ಲ ಅಂತಿದ್ದಾರೆ. ಮತ್ತೊಂದುಕಡೆ ರಷ್ಯಾ ಝೆಲೆನ್ಸ್​ಕಿಯನ್ನ ಮುಗಿಸೋಕು ಪ್ಲಾನ್​ ಮಾಡ್ಕೊಂಡಿರಬಹುದು ಅನ್ನೋ ಅನುಮಾನವಿದೆ. ಮಗದೊಂದುಕಡೆ ​ಕಿಯವ್​ ಹೊರವಲಯದಲ್ಲಿ ಈಗಾಗಲೇ ರಷ್ಯಾ ಸೇನೆಯ ವಾಹನಗಳು ಸಾಲಾಗಿ ನಿಂತಿರೋದು ಸ್ಯಾಟಲೈಟ್​ ಇಮೇಜ್​ಗಳಲ್ಲಿ ಗೊತ್ತಾಗುತ್ತೆ.
ಈ ನಡುವೆ, ಯುಕ್ರೇನ್‌ನಿಂದ ಹೊರಹೋದ ನಿರಾಶ್ರಿತರ ಸಂಖ್ಯೆ ಸುಮಾರು 20 ಲಕ್ಷ ತಲುಪಿದೆ ಅಂತ ಯುಎನ್‌ ಹೈ ಕಮೀಷನರ್‌ ಫಾರ್‌ ರೆಫ್ಯೂಜೀಸ್‌ ಫಿಲಿಪ್ಪೋ ಗ್ರ್ಯಾಂಡಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply