ನಮ್ಮ ದೇಶದಲ್ಲಿ ಜೈವಿಕ ಅಸ್ತ್ರ ರೆಡಿ ಆಗ್ತಿಲ್ಲ: ಯುಕ್ರೇನ್‌ ಅಧ್ಯಕ್ಷ

masthmagaa.com:

ಯುಕ್ರೇನ್​​ ಜೈವಿಕ ಅಸ್ತ್ರಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಯೋಗ ನಡೆಸ್ತಿದೆ ಅಂತ ಆರೋಪಿಸಿದ್ದ ರಷ್ಯಾಗೆ ಯುಕ್ರೇನ್ ಅಧ್ಯಕ್ಷ ಝೆಲೆನ್​ಸ್ಕಿ ತಿರುಗೇಟು ನೀಡಿದ್ದಾರೆ. ನಾನು ಸಮರ್ಪಕವಾದ ದೇಶವೊಂದರ ಅಧ್ಯಕ್ಷ.. ಎರಡು ಮಕ್ಕಳ ತಂದೆ ಕೂಡ ಹೌದು. ನನ್ನ ನೆಲದಲ್ಲಿ ಯಾವುದೇ ರೀತಿಯ ರಾಸಾಯನಿಕ ಅಥವಾ ಜೈವಿಕ ಅಸ್ತ್ರದ ಅಭಿವೃದ್ಧಿಯಾಗ್ತಿಲ್ಲ. ಇಡೀ ಪ್ರಪಂಚಕ್ಕೇ ಅದು ಗೊತ್ತಿದೆ. ಒಂದು ವೇಳೆ ರಷ್ಯಾ ಯುಕ್ರೇನ್ ಮೇಲೆ ಜೈವಿಕ ಅಸ್ತ್ರ ಪ್ರಯೋಗ ಮಾಡಿದ್ರೆ ಅದಕ್ಕೆ ಪ್ರತಿಯಾಗಿ ದೊಡ್ಡಮಟ್ಟದ ನಿರ್ಬಂಧಗಳನ್ನು ಎದುರಿಸಲಿದೆ ಅಂತ ಕೂಡ ಎಚ್ಚರಿಸಿದ್ದಾರೆ. ಇನ್ನು ವಿದೇಶಾಂಗ ಸಚಿವ ಡಿಮಿಟ್ರಿ ಕುಲೇಬಾ ಪ್ರತಿಕ್ರಿಯಿಸಿ, ರಷ್ಯಾ ಈ ರೀತಿ ಸುಳ್ಳು ಹೇಳುತ್ತಿರೋದು ಮತ್ತೊಂದು ಹಂತದ ಕಾರ್ಯಾಚರಣೆಗೆ ರೆಡಿಯಾಗ್ತಿರೋದನ್ನು ಸೂಚಿಸುತ್ತೆ ಅಂತ ಹೇಳಿದ್ದಾರೆ.

ಇನ್ನು ಇದೇ ವಿಚಾರವಾಗಿ ರಷ್ಯಾ ಮನವಿ ಮೇರೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆ ನಡೆಯಲಿದೆ. ಇಲ್ಲಿ ಅಮೆರಿಕ ಯುಕ್ರೇನ್​ನಲ್ಲಿ ಜೈವಿಕ ಅಸ್ತ್ರ ಅಭಿವೃದ್ಧಿಗೆ ಪ್ರಯತ್ನಿಸ್ತಿರೋ ಬಗ್ಗೆ ರಷ್ಯಾ ಪ್ರಸ್ತಾಪಿಸಲಿದೆ. ಈಗಾಗಲೇ ರಷ್ಯಾದ ಈ ಸಾಕ್ಷ್ಯ ರಹಿತ ಆರೋಪವನ್ನು ಅಮೆರಿಕ ತಳ್ಳಿ ಹಾಕಿದ್ದು, ನಗೆಪಾಟಲುತನದ ವಿಚಾರ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply