ಝೆಲೆನ್​ಸ್ಕಿ ಹತ್ಯೆಗೆ ಮತ್ತೆ ಪುಟಿನ್ ಆದೇಶ!

masthmagaa.com:

ಯುಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಹತ್ಯೆಗೆ ಕಿಯೆವ್ ತಲುಪಿರೋ ವ್ಯಾಗ್ನರ್ ಗ್ರೂಪ್​​​ನ ಎಲ್ಲಾ ಪ್ರಯತ್ನಗಳು ವಿಫಲವಾಗ್ತಿದೆ. ಅದ್ರ ಬೆನ್ನಲ್ಲೇ ಈಗ ಮತ್ತೆ ಪುಟಿನ್ ಮತ್ತೊಮ್ಮೆ ಝೆಲೆನ್​ಸ್ಕಿ ಹತ್ಯೆಗೆ ಪ್ರಯತ್ನಿಸುವಂತೆ ಖುದ್ದು ಆದೇಶ ನೀಡಿದ್ದಾರೆ ಅಂತ ಯುಕ್ರೇನ್ ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿವೆ. ಈಗಾಗಲೇ ಈ ಗ್ರೂಪ್​​ನ ಸದಸ್ಯರು ಹಲವಾರು ಬಾರಿ ಝೆಲೆನ್​ಸ್ಕಿ ಹತ್ಯೆಗೆ ಸಂಚು ರೂಪಿಸಿದ್ದು, ಅವರೆಲ್ಲರನ್ನೂ ಹೊಡೆದುರುಳಿಸಲಾಗಿದೆ. ಇನ್ನೂ ಕೂಡ ಈ ಗ್ರೂಪ್​ನ ಹಲವು ಹಂತಕರು ಕಿಯೆವ್​ನಲ್ಲಿದ್ದಾರೆ. ಅಂದಹಾಗೆ ಸುಮಾರು 400 ಮಂದಿ ಹಂತಕರನ್ನು ಯುಕ್ರೇನ್​​ಗೆ ಝೆಲೆನ್​ಸ್ಕಿ ಸೇರಿದಂತೆ 24 ಮಂದಿ ಟಾಪ್ ನಾಯಕರ ಹತ್ಯೆಗೆ ಕಳುಹಿಸಲಾಗಿದೆ ಅಂತ ಈ ಹಿಂದೆ ವರದಿಯಾಗಿತ್ತು. ಆದ್ರೆ ಝೆಲೆನ್​ಸ್ಕಿ ಹತ್ಯೆಯ ಪ್ರಯತ್ನವನ್ನು ರಷ್ಯಾದ ಫೆಡರಲ್ ಸೆಕ್ಯೂರಿಟಿ ಸರ್ವೀಸ್​​ನ ಯುದ್ಧ ಬಯಸದ ಕೆಲ ಅಧಿಕಾರಿಗಳೇ ವಿಫಲಗೊಳಿಸಿದ್ರು ಅಂತ ಕೂಡ ಯುಕ್ರೇನ್ ಹೇಳಿಕೊಂಡಿತ್ತು. ಈಗ ಮತ್ತೆ ಪುಟಿನ್ ಆದೇಶ ನೀಡಿರೋದ್ರಿಂದ ಹಂತಕರು ಯಾವ ರೀತಿ ಪ್ರಯತ್ನಿಸ್ತಾರೆ ಅನ್ನೋದನ್ನ ಕಾದು ನೋಡ್ಬೇಕು. ಅಂದಹಾಗೆ ಈ ವ್ಯಾಗ್ನರ್ ಗ್ರೂಪ್​​​​ ಹೈಲಿ ಟ್ರೈನ್ಡ್​ ಫೈಟರ್​​ಗಳನ್ನು ಹೊಂದಿದ್ದು, ಪುಟಿನ್​​ರ ಪರ್ಸನಲ್ ಹಂತಕರ ಪಡೆ ಅಂತಲೇ ಕರೆಯಲಾಗುತ್ತೆ. ಇವರು ವಿಶ್ವದಾದ್ಯಂತ ಹಬ್ಬಿಕೊಂಡಿದ್ದು, ರಷ್ಯಾದ ಕೆಲವೊಂದು ಕೆಟ್ ಕೆಲಸಗಳನ್ನು ಪೂರ್ಣಗೊಳಿಸೋ ಕೆಲಸ ಮಾಡ್ತಿದ್ದಾರೆ.

-masthmagaa.com

Contact Us for Advertisement

Leave a Reply