ರಷ್ಯಾ-ಯುಕ್ರೇನ್​ ಯುದ್ಧ: ಪ್ರಾಣ ಕಳೆದುಕೊಂಡವರೆಷ್ಟು, ಗಾಯಗೊಂಡವರೆಷ್ಟು?

masthmagaa.com:

ಇನ್ನು ಮೊದಲ ದಿನದ ಆಕ್ರಮಣ ಯಶಸ್ವಿಯಾಗಿದೆ ಅಂತ ನಿನ್ನೆ ರಾತ್ರಿ ಘೋಷಣೆ ಮಾಡಿದ್ದ ರಷ್ಯಾ, ಫಸ್ಟ್​ ಡೇ ಏನೆಲ್ಲಾ ಮಾಡ್ಬೇಕು ಅಂದುಕೊಂಡಿದ್ವಿ ಅದನ್ನೆಲ್ಲಾ ಮಾಡಿದ್ದೀವಿ. ಮೊದಲ ದಿನ ಒಟ್ಟು 83 ಟಾರ್ಗೆಟ್​​ಗಳನ್ನ ರಷ್ಯಾ ಧ್ವಂಸ ಮಾಡಿದೆ ಅಂತ ರಷ್ಯಾದ ಮಾಧ್ಯಮವೊಂದು ಹೇಳಿದೆ. ಮತ್ತೊಂದುಕಡೆ ರಷ್ಯಾ ನಡೆಸಿದ ಮೊದಲ ದಿನದ ಆಕ್ರಮಣದಲ್ಲಿ 137 ಜನ ಪ್ರಾಣ ಕಳ್ಕೊಂಡಿದ್ದಾರೆ ಅಂತ ಯುಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್​ಕಿ ಹೇಳಿದ್ದಾರೆ. ಇದರಲ್ಲಿ ಯೋಧರು ಮತ್ತು ನಾಗರಿಕರು ಕೂಡ ಸೇರಿದ್ದಾರೆ. ಇವರೆಲ್ಲರನ್ನ ಹಿರೋಸ್​ ಅಂತ ಕರೆದಿರೋ ಝೆಲೆನ್ಸ್​ಕಿ, 316 ಜನ ಗಾಯಗೊಂಡಿದ್ದಾರೆ ಅಂತ ಮಾಹಿತಿ ನೀಡಿದ್ದಾರೆ. ಅಲ್ಲದೆ ರಷ್ಯಾ ಸೇನೆ ಜನರ ಮಾರಣಹೋಮ ನಡೆಸ್ತಿದೆ, ಶಾಂತವಾಗಿದ್ದ ನಗರಗಳನ್ನ ಟಾರ್ಗೆಟ್​​ ಮಾಡ್ತಿದೆ. ಇದನ್ನ ನಾವು ಯಾವತ್ತು ಕ್ಷಮಿಸೋದಿಲ್ಲ. ನಮ್ಮ ರಕ್ಷಣೆಗೆ ಯಾರು ಬರ್ಲಿಲ್ಲ, ನಾವು ಒಂಟಿಯಾಗಿ ಹೋರಾಡಬೇಕಾಯ್ತು. ಶತ್ರುಗಳ ನಂ.1 ಟಾರ್ಗೆಟ್‌ ನಾನೇ ಆಗಿದ್ದೀನಿ. ಆದ್ರೂ ಕೂಡ ಕಿಯವ್​ನಲ್ಲೇ ಇರ್ತೀನಿ, ನನ್ನ ಕುಟುಂಬ ಕೂಡ ರಾಜಧಾನಿಯಲ್ಲೇ ಇರುತ್ತೆ ಅಂತ ಗುರುವಾರ ರಾತ್ರಿ ದೇಶವನ್ನ ಉದ್ದೇಶಿಸಿ ಮಾತನಾಡುವಾಗ ಝೆಲೆನ್ಸ್​ಕಿ ಹೇಳಿದ್ದಾರೆ. ಇನ್ನು ಗುರುವಾರ ರಾತ್ರಿ ರಾಜಧಾನಿ ಕಿಯವ್​ನಲ್ಲಿ ಕರ್ಪ್ಯೂ ಜಾರಿ ಮಾಡಲಾಗಿತ್ತು. ರಾತ್ರಿ 10 ಗಂಟೆಯಿಂದ ಬೆಳಗ್ಗೆ 7 ಗಂಟೆವರೆಗೆ ಸಾರ್ವಜನಿಕ ಸಾರಿಗೆಯನ್ನ ಸಂಪೂರ್ಣ ಬಂದ್​ ಮಾಡಲಾಗಿತ್ತು.

-masthmagaa.com

 

Contact Us for Advertisement

Leave a Reply