ಯುಕ್ರೇನ್-ರಷ್ಯಾ: ಯುದ್ಧದ ಭೀಕರತೆ ಉಪಗ್ರಹ ಚಿತ್ರದಲ್ಲಿ ಸೆರೆ

masthmagaa.com:

ರಷ್ಯಾ ಯುಕ್ರೇನ್​​ನಲ್ಲಿ ಯಾವ ರೀತಿಯಲ್ಲಿ ದಾಳಿ ನಡೆಸ್ತಿದೆ ಅನ್ನೋದಕ್ಕೆ ಸಂಬಂಧಿಸಿದಂತೆ ಉಪಗ್ರಹ ಚಿತ್ರಗಳು ಬಿಡುಗಡೆ ಮಾಡಿವೆ. ಅಮೆರಿಕದ ಉಪಗ್ರಹ ಸಂಸ್ಥೆ ಮಾಕ್ಸಾರ್ ಟೆಕ್ನಾಲಜೀಸ್ ನಿನ್ನೆಯ ಫೋಟೋಗಳನ್ನು ಬಿಡುಗಡೆ ಮಾಡಿದೆ. ಇದ್ರಲ್ಲಿ ಯುಕ್ರೇನ್ ರಾಜಧಾನಿ ಕಿಯೆವ್ ಬಳಿ ಸುತ್ತುವರಿದಿರೋ ರಷ್ಯನ್ ಸೇನೆ ನಗರದ ಜನವಸತಿ ಪ್ರದೇಶಗಳ ಮೇಲೆ ದಾಳಿ ನಡೆಸ್ತಿರೋದು ಸೆರೆಯಾಗಿದೆ. ಒಂದು ಫೋಟೋದಲ್ಲಿ ಆರ್ಟಿಲರಿ ಬಟಾಲಿಯನ್ ನಿರಂತರವಾಗಿ ಫೈರಿಂಗ್ ಮಾಡ್ತಿರೋದು ಸೆರೆಯಾಗಿದೆ. ಮತ್ತೊಂದು ಫೋಟೋದಲ್ಲಿ ಮನೆಗಳು, ಕಟ್ಟಡಗಳು ಬೆಂಕಿ ಹೊತ್ತು ಉರಿಯುತ್ತಿರೋದು ಸೆರೆಯಾಗಿದೆ. ಇಲ್ಲಿನ ಮಾಸ್​ಚುನ್​​ನಲ್ಲಿ ದೊಡ್ಡ ದೊಡ್ಡ ಗುಂಡಿಗಳು ಸೃಷ್ಟಿಯಾಗಿರೋದು ಕೂಡ ಸೆರೆಯಾಗಿದೆ. ಮತ್ತೊಂದು ಫೋಟೋದಲ್ಲಿ ಕಿಯೆವ್​ನಿಂದ ಹೊರಗೆ ಹೊರಟಿರೋ ಉದ್ದ ಕಾರಿನ ಲೈನೊಂದನ್ನು ನೋಡಬಹುದಾಗಿದೆ.

-masthmagaa.com

Contact Us for Advertisement

Leave a Reply