ಬಲಿಷ್ಠ ರಷ್ಯಾ ಸೇನೆಗೆ 2ನೇ ದಿನ ತಿರುಗೇಟು ಕೊಟ್ಟ ಯುಕ್ರೇನ್​!

masthmagaa.com:

ಬಲಿಷ್ಠ ರಷ್ಯಾ ಸೇನೆ ಮುಂದೆ ಯುಕ್ರೇನ್​ ಸೇನೆ ಕೈ ಕಟ್ಟಿ ಕೂತಿಲ್ಲ. ತನ್ನಿಂದ ಎಷ್ಟು ಸಾಧ್ಯವೋ ಅಷ್ಟು ಹೋರಾಟ ಮಾಡ್ತಿದೆ. ರಷ್ಯಾ ಸೇನೆಗೆ ಎಷ್ಟಾಗುತ್ತೋ ಅಷ್ಟು ಡ್ಯಾಮೇಜ್​ ಮಾಡೋ ಪ್ರಯತ್ನ ಮಾಡ್ತಿದೆ. ರಾಜಧಾನಿ ಕಿಯವ್​ನಲ್ಲಿ ರಷ್ಯಾದ ಯುದ್ಧ ವಿಮಾನವೊಂದನ್ನ ಯುಕ್ರೇನ್​​ ಸೇನೆ ಹೊಡೆದುರುಳಿಸಿದೆ. ಬಳಿಕ ಆ ಯುದ್ಧ ವಿಮಾನ​ ಹೋಗಿ ಜನವಸತಿ ಕಟ್ಟಡಕ್ಕೆ ಅಪ್ಪಳಿಸಿ ಬೆಂಕಿ ಹೊತ್ತಿಕೊಂಡಿದೆ ವರದಿಯಾಗಿದೆ. ಮತ್ತೊಂದುಕಡೆ ಶುಕ್ರವಾರ ಬೆಳಗ್ಗೆ ನಾಗರಿಕರನ್ನ ಗುರಿಯಾಗಿಸಿ ದಾಳಿ ಮಾಡಿದ ಎದುರಾಳಿ ಕಡೆಯವರ ‘ಎರಡು ಡೆಡ್ಲಿ ಗಿಫ್ಟ್​ಗಳನ್ನ’ ನಮ್ಮ ಏರ್​ ಡಿಫೆನ್ಸ್ ಸಿಸ್ಟಮ್ಸ್​ ಹಿಮ್ಮೆಟ್ಟಿಸಿದೆ ಅಂತ ಯುಕ್ರೇನ್​ ಸೇನೆ ಹೇಳಿಕೊಂಡಿದೆ. ನಿನ್ನೆ ಯುಕ್ರೇನ್​ ಆಗಸದಲ್ಲಿ ರಷ್ಯಾದ ಹೆಲಿಕಾಪ್ಟರ್​ಗಳು ಹಾರಾಟ ನಡೆಸಿದ್ದು ನೋಡಿದ್ರೆ ಯುಕ್ರೇನ್​ನ ಏರ್ ಡಿಫೆನ್ಸ್ ಸಿಸ್ಟಂ ಸಂಪೂರ್ಣ ವಿಫಲವಾಯ್ತಾ ಅನ್ನೋ ಅನುಮಾನ ಮೂಡಿತ್ತು. ಆದ್ರೀಗ ಯುಕ್ರೇನ್​ನ ಏರ್​ ಡಿಫೆನ್ಸ್​ ಸಿಸ್ಟಂ ಚೆನ್ನಾಗಿ ಕೆಲಸ ಮಾಡಿದೆ ಅಂತ ಯುಕ್ರೇನ್​ ಹೇಳಿದೆ. ಇದಲ್ಲದೆ ಕಿಯವ್​ ನಗರದ ಹೊರವಲಯದಲ್ಲಿರೋ ಆಂಟನೋವ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನ ರಷ್ಯಾ ಸೇನೆ ನಿನ್ನೆ ತನ್ನ ಕಂಟ್ರೋಲ್​ಗೆ ತೆಗೆದುಕೊಂಡಿತ್ತು. ಅದನ್ನೀಗ ಯುಕ್ರೇನ್​​ ಸೇನೆ ಮತ್ತೆ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ ಅಂತ ವರದಿಯಾಗಿದೆ. ಅತ್ತ ಯುಕ್ರೇನ್​ಗೆ ಸೇರಿದ ಕಪ್ಪು ಸಮುದ್ರದಲ್ಲಿದ್ದ ಝಿಮಿನಿಯಾ ದ್ವೀಪವನ್ನ ರಷ್ಯಾ ಸೇನೆ ವಶಪಡಿಸಿಕೊಂಡಿದೆ. ಈ ಸಂಘರ್ಷದ ನಡುವೆನೇ ರಷ್ಯಾದ AN-26 ಅನ್ನೋ ಮಿಲಿಟರಿ ಟ್ರಾನ್ಸ್​ಪೋರ್ಟ್​ ವಿಮಾನವೊಂದು ರಷ್ಯಾದಲ್ಲಿ ಪತನವಾಗಿದೆ. ಅದರಲ್ಲಿದ್ದ ಕ್ರೂ ಮೆಂಬರ್ಸ್ ಮೃತಪಟ್ಟಿದ್ದಾರೆ. ಇನ್ನು ಕಪ್ಪು ಸಮುದ್ರದಲ್ಲಿ ಸಂಚರಿಸುತ್ತಿದ್ದ ಕಾರ್ಗಿಲ್​​ ಇನ್​ಕಾರ್ಪೊರೇಷನ್​ ಕಂಪನಿಯ ಸರಕು ಸಾಗಣೆ ಹಡಗಿಗೂ ಸ್ಫೋಟಕ ಬಂದು ಅಪ್ಪಳಿಸಿದೆ ಅಂತ ಕಂಪನಿ ಹೇಳಿದೆ. ಆದ್ರೆ ದೊಡ್ಡ ಸಮಸ್ಯೆ ಏನೂ ಆಗಿಲ್ಲ. ಅದರಲ್ಲಿದ್ದ ಕ್ರೂ ಮೆಂಬರ್ಸ್ ಸೇಫಾಗಿದ್ದಾರೆ ಅಂತೇಳಿದೆ. ತನ್ನ ಮೇಲೆ ರಷ್ಯಾ ಆಕ್ರಮಣ ಮಾಡಿದ ಬೆನ್ನಲ್ಲೇ, ಯುಕ್ರೇನ್​ ತನ್ನ ಬಂದುರುಗಳಿಂದ ಕಮರ್ಷಿಯಲ್​ ಶಿಪ್ಪಿಂಗ್​ ಅನ್ನ ನಿಲ್ಲಿಸಿದೆ. ಅಂದ್ರೆ ಯುಕ್ರೇನ್​ ಬಂದರುಗಳು ಈಗ ವಾಣಿಜ್ಯ ವ್ಯವಹಾರಕ್ಕೆ ಬಂದ್​ ಆಗಿದೆ. ಇದರಿಂದ ಧಾನ್ಯ ಮತ್ತು ಎಣ್ಣೆ ಬೀಜಗಳ ರಫ್ತಿನ ಮೇಲೆ ಪರಿಣಾಮ ಬೀರಲಿದೆ. ಅಂದ್ಹಾಗೆ ಯುಕ್ರೇನ್​ ಮೆಕ್ಕೆಜೋಳದ ಪ್ರಮುಖ ರಫ್ತುದಾರ ದೇಶ. ಇಲ್ಲಿನ ಮೆಕ್ಕೆಜೋಳ ಹೆಚ್ಚಾಗಿ ಚೀನಾ ಮತ್ತು ಯುರೋಪಿಯನ್​ ಯೂನಿಯನ್​ಗೆ ಹೋಗುತ್ತೆ.

-masthmagaa.com

Contact Us for Advertisement

Leave a Reply