ಬಾಹ್ಯಾಕಾಶದಲ್ಲಿ ಶೂಟಿಂಗ್​​​​ಗೆ ಹೊರಟ ರಷ್ಯಾ!

masthmagaa.com:

ಬಾಹ್ಯಾಕಾಶ ಕ್ಷೇತ್ರದಲ್ಲಿ ಅಮೆರಿಕಗಿಂತ ಒಂದು ಹೆಜ್ಜೆ ಮುಂದೆ ಇಡಲು ರಷ್ಯಾ ಮುಂದಾಗಿದೆ. ಅಮೆರಿಕಗಿಂತ ಮುನ್ನ ತಾನೇ ಬಾಹ್ಯಾಕಾಶಕ್ಕೆ ಹೋಗಿ ಸಿನಿಮಾ ಶೂಟಿಂಗ್ ಮಾಡಲು ಪ್ಲಾನ್ ಮಾಡಿದೆ. 37 ವರ್ಷದ ನಟಿ ಯುಲಿಯಾ ಪೆರೆಸಿಲ್ಡ್​ ಮತ್ತು 38 ವರ್ಷದ ನಿರ್ದೇಶಕ ಕ್ಲಿಮ್ ಶಿಪೆಂಕೋ ಅವರನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ನಿರ್ಧರಿಸಿದೆ. ಸೋವಿಯತ್ ಒಕ್ಕೂಟದ ಸದಸ್ಯ ದೇಶವಾಗಿದ್ದ ಕಜಕಿಸ್ತಾನದಲ್ಲಿರೋ ಬೈಕಾನುರ್ ಕಾಸ್ಮೋಡ್ರೋಮ್​ ಬಾಹ್ಯಾಕಾಶ ಕೇಂದ್ರದಿಂದ ಇವರಿಬ್ಬರನ್ನು ಹೊತ್ತ ರಾಕೆಟ್ ಬಾಹ್ಯಾಕಾಶಕ್ಕೆ ಹಾರಲಿದೆ. ಸೋಯೂಜ್​ ಎಂಎಸ್​-19 ಸ್ಪೇಸ್​ಶಿಪ್​​ ಇವರನ್ನು ಹೊತ್ತೊಯ್ಯಲಿದ್ದು, ಖ್ಯಾತ ಗಗನಯಾತ್ರಿ ಅಂಟೋನ್ ಶ್ಕಾಪ್ಲೆರೋವ್ ಕೂಡ ಜೊತೆಗಿದ್ದಾರೆ. 12 ದಿನಗಳ ಮಿಷನ್ ಇದಾಗಿದ್ದು, ಇಂಟರ್​ನ್ಯಾಷನಲ್ ಸ್ಪೇಸ್​ ಸ್ಟೇಷನ್​​​ನಲ್ಲಿ ದಿ ಚಾಲೆಂಜ್ ಅನ್ನೋ ಸಿನಿಮಾಗೆ ಕೆಲವೊಂದು ಸೀನ್​ಗಳ ಶೂಟಿಂಗ್ ನಡೆಯಲಿದೆ. ಅಂದಹಾಗೆ ಅಮೆರಿಕ ಅಂದ್ರೆ ಹಾಲಿವುಡ್ ಕೂಡ ಈ ವರ್ಷದ ಆರಂಭದಲ್ಲಿ ಇದೇ ರೀತಿಯ ಯೋಜನೆಯೊಂದನ್ನು ಘೋಷಿಸಿತ್ತು. ನಾಸಾ ಮತ್ತು ಎಲಾನ್ ಮಸ್ಕ್​​​ರ ಸ್ಪೇಸ್ ಎಕ್ಸ್ ಸಹಯೋಗದಲ್ಲಿ ಬಾಹ್ಯಾಕಾಶಕ್ಕೆ ಟಾಮ್ ಕ್ರೂಸ್ ಅವರನ್ನು ಕಳುಹಿಸಲು ನಿರ್ಧರಿಸಿತ್ತು. ಆದ್ರೆ ಅಮೆರಿಕಕ್ಕಿಂತ ಮುಂಚೆ ಈ ದಾಖಲೆಯನ್ನು ತನ್ನ ಹೆಸರಿಗೆ ಮಾಡಿಕೊಂಡಿದೆ ರಷ್ಯಾ.

-masthmagaa.com

Contact Us for Advertisement

Leave a Reply