ಯುಕ್ರೇನ್​​​ನಲ್ಲಿ ಫೇಲ್ ಆಯ್ತಾ ರಷ್ಯಾ?

masthmagaa.com:

ಯುಕ್ರೇನ್​ ಮೇಲೆ ಆಕ್ರಮಣ ಮಾಡಿರೋ ರಷ್ಯಾ ತನ್ನ ಆರಂಭಿಕ ಅಭಿಯಾನದಲ್ಲಿ ಫೇಲ್​ ಆಗಿದೆ ಅಂತ ISW ಅಂದ್ರೆ ಇನ್​ಸ್ಟಿಟ್ಯೂಟ್​ ಫಾರ್​ ದಿ ಸ್ಟಡಿ ಆಫ್​ ವಾರ್​ ಹೇಳಿದೆ. ಯುಕ್ರೇನ್​ ರಾಜಧಾನಿ ಕಿಯವ್​ ಅನ್ನ ವಶಪಡಿಸಿಕೊಳ್ಳೋದು ಮತ್ತು ಝೆಲೆನ್ಸ್​ಕಿ ನೇತೃತ್ವದ ಸರ್ಕಾರವನ್ನ ಕೆಳಗಿಳಿಸಿ ಯುಕ್ರೇನ್​ನಲ್ಲಿ ತನ್ನ ಕೈಗೊಂಬೆ ಸರ್ಕಾರ ರಚಿಸೋದು ರಷ್ಯಾದ ಆರಂಭಿಕ ಅಭಿಯಾನವಾಗಿತ್ತು. ಆದ್ರೆ ಅದರಲ್ಲಿ ಅದು ವಿಫಲವಾಗಿದೆ ಅಂತ ISW ಹೇಳಿದೆ. ಸದ್ಯ ರಷ್ಯಾ ಮುಂದಿರೋ ಆಯ್ಕೆಗಳಂದ್ರೆ.. ಒಂದನೇದು ಈ ಅಭಿಯಾನವನ್ನ ಕೊನೆಗೊಳಿಸೋದು.. ಎರಡನೇದು ಸುದೀರ್ಘ ವಿರಾಮ ತೆಗೆದುಕೊಳ್ಳೋದು.. ಮೂರನೇದು ಹೊಸ ಅಭಿಯಾನಕ್ಕೆ ಪ್ಲಾನ್​ ಮಾಡೋದು ಮತ್ತು ಆ ಹೊಸ ಅಭಿಯಾನಕ್ಕೆ ಸಂಪನ್ಮೂಲಗಳನ್ನ ಅಂದ್ರೆ ಸೇನಾ ಉಪಕರಣಗಳನ್ನ ರೆಡಿ ಮಾಡಿಕೊಳ್ಳೋದು.. ಇದೆಲ್ಲಾ ಆದ್ಮೇಲೆ ಸಿಚುವೇಷನ್​ ನೋಡ್ಕೊಂಡು ಹೊಸ ಅಭಿಯಾನವನ್ನ ಲಾಂಚ್​ ಮಾಡೋದು. ಆದ್ರೆ ರಷ್ಯಾ ಈ ಹೊಸ ವಿಧಾನವನ್ನ ಇನ್ನೂ ಅಳವಡಿಸಿಕೊಂಡಿಲ್ಲ ಅಂತ ISW ಹೇಳಿದೆ. ಅಂದ್ಹಾಗೆ ಈ ಇನ್​ಸ್ಟಿಟ್ಯೂಟ್​ ಫಾರ್​ ದಿ ಸ್ಟಡಿ ಆಫ್​ ವಾರ್ ಅಮೆರಿಕ ಮೂಲದ ಸಂಸ್ಥೆಯಾಗಿದೆ.

-masthmagaa.com

Contact Us for Advertisement

Leave a Reply