ಪುಟಿನ್‌ಗೆ ಹೊಸ ಆಪರೇಷನ್! ಏನಾಗಿತ್ತು ಇಲ್ನೋಡಿ..

masthmagaa.com:

ಯುಕ್ರೇನ್‌ ಮೇಲೆ ಯುದ್ಧ ಸಾರಿ ಇಡೀ ವಿಶ್ವಕ್ಕೇ ಒಂದು ರೀತಿ ಡಿಕ್ಟೇಟರ್‌ ಥರ ಕಾಣ್ಸ್ತಾಇರೋ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಆರೋಗ್ಯ ಸರಿಯಿಲ್ಲ ಅನ್ನೊ ಊಹಾಪೋಹಗಳ ನಡುವೆ ಈಗ ಪುಟಿನ್‌ ಹೊಸ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಅಂತ ವರದಿಯಾಗಿದೆ.‌ ಈ ಸರ್ಜರಿ ಅವ್ರ ಕಿಬ್ಬೊಟ್ಟೆಯ ದ್ರವವನ್ನ ತೆಗೆಯೋಕೆ ಮಾಡಲಾಗಿದ್ದು, ಕ್ಯಾನ್ಸರ್‌ಗೆ ಸಂಬಂಧಿಸಿಲ್ಲ ಅಂತ ವರದಿಗಳು ತಿಳಿಸಿವೆ. ಆದ್ರೆ ರಷ್ಯಾ ಮಾತ್ರ ಇದು ಈ ಹಿಂದೆ ಹೇಳಿದ ಸರ್ಜಿಕಲ್‌ ಆಪರೇಷನ್‌ ಅಲ್ಲ ಕೇವಲ ಒಂದು ಮೆಡಿಕಲ್‌ ಪ್ರೊಸಿಜರ್‌. ಆ ಸರ್ಜರಿ ಇನ್ನೂ ಆಗಿಲ್ಲ ಅಂತ ಟೆಲಿಗ್ರಾಮ್‌ನಲ್ಲಿ ಹೇಳಿಕೊಂಡಿದೆ.

-masthmagaa.com

Contact Us for Advertisement

Leave a Reply