ಚೆರ್ನೋಬಿಲ್​ ನುಗ್ಗಿದ ರಷ್ಯನ್ ಸೈನಿಕರ ಕಥೆ ಏನಾಗಿದೆ ಗೊತ್ತಾ?

masthmagaa.com:

ಯುಕ್ರೇನ್​ನ ಚೆರ್ನೋಬಿಲ್​​​​​ ಪರಮಾಣು ದುರಂತದ ಸ್ಥಳವನ್ನು ಅತಿಕ್ರಮಿಸಿಕೊಂಡ ರಷ್ಯನ್ ಯೋಧರಿಗೆ ವಿವಿಧ ರೀತಿಯ ಸಮಸ್ಯೆಗಳು ಎದುರಾಗಬಹುದು ಅಂತ ಅಲ್ಲಿನ ನೌಕರರು ಹೇಳಿದ್ದಾರೆ. ಫೆಬ್ರುವರಿ 24ರಂದು ರಷ್ಯನ್ ಸೈನಿಕರು ಆರ್ಮೋರ್ಡ್​ ವೆಹಿಕಲ್​​​ಗಳನ್ನು ಈ ಘಟಕದ ಒಳಗೆ ನುಗ್ಗಿಸಿದ್ರು. ಕಂಟ್ರೋಲ್​ಗೆ ತಗೊಂಡಿದ್ರು. ಈ ವೇಳೆ ಅವರು ಯಾವುದೇ ರೀತಿಯ ಪರಮಾಣು ರಕ್ಷಕ ವಸ್ತುಗಳನ್ನು ಧರಿಸಿರಲಿಲ್ಲ. ಹೀಗಾಗಿ ಮಣ್ಣಿನಲ್ಲಿದ್ದ ರೇಡಿಯೋಆಕ್ಟೀವ್ ಡಸ್ಟ್​ ರಷ್ಯನ್ ಸೈನಿಕರ ದೇಹವನ್ನು ಪ್ರವೇಸಿಸಿದ್ದು, ಹೆಚ್ಚುಕಡ್ಮೆ ಇದು ಆತ್ಮಹತ್ಯೆಗೆ ಸಮ.. ಮುಂದೊಂದು ದಿನ ವಿವಿಧ ರೀತಿಯ ಸಮಸ್ಯೆಗಳು ಎದುರಾಬಹುದು ಅಂತ ಅಂದಾಜಿಸಿದ್ದಾರೆ. ಅಂದಹಾಗೆ ರಷ್ಯನ್ ಸೇನೆ ಚೆರ್ನೋಬಿಲ್ ಘಟಕ ವಶಕ್ಕೆ ಪಡೆದ ಮರುದಿನ ಪ್ರತಿಕ್ರಿಯಿಸಿದ್ದ ಯುಕ್ರೇನ್​ನ ನ್ಯೂಕ್ಲಿಯರ್ ಇನ್​ಸ್ಪೆಕ್ಟೋರೇಟ್​​​, ಚೆರ್ನೋಬಿಲ್​ನಲ್ಲಿ ರೇಡಿಯೇಷನ್ ಲೆವೆಲ್ ಜಾಸ್ತಿಯಾಗಿದೆ. ದೊಡ್ಡಮಟ್ಟದಲ್ಲಿ ವಾಹನಗಳು ಓಡಾಡಿದ್ದರಿಂದ ಈ ರೀತಿಯಾಗಿರಬಹುದು ಅಂತ ಹೇಳಿತ್ತು. ಆದ್ರೆ ನಿಜವಾಗಿಯೂ ಅಲ್ಲಿ ಏನು ನಡೀತು ಅನನೋದು ಸ್ಪಷ್ಟವಾಗಿ ಯಾರಿಗೂ ಗೊತ್ತಿಲ್ಲ.

-masthmagaa.com

Contact Us for Advertisement

Leave a Reply