ರಷ್ಯಾ ಅಥವಾ ಯುಕ್ರೇನ್‌ಗೆ ನಾವು ಶಸ್ತ್ರಾಸ್ತ್ರ ಮಾರಾಟ ಮಾಡುವುದಿಲ್ಲ: ಚೀನಾ

masthmagaa.com:

ಯುದ್ದ ಮುಂದುವರೆಸಿರುವ ರಷ್ಯಾ ಈಗ ಯುಕ್ರೇನ್‌ನ ಸ್ಲೋವಿಯನ್ಸ್ಕ್ ಮೇಲೆ ದಾಳಿ ಮಾಡಿದೆ. ಘಟನೆಯಲ್ಲಿ ಮಕ್ಕಳು ಸೇರಿದಂತೆ 8 ಜನ ಮೃತಪಟ್ಟು, 21 ಜನರು ಗಾಯಗೊಂಡಿದ್ದಾರೆ ಅಂತ ಯುಕ್ರೇನ್‌ ಹೇಳಿದೆ. ಇನ್ನೊಂದ್‌ ಕಡೆ ಚೀನಾ ರಷ್ಯಾಗೆ ಶಸ್ತ್ರಾಸ್ತ್ರಗಳ ಪೂರೈಸೋಕೆ ಮುಂದಾಗಿದೆ ಅಂತ ಪಾಶ್ಚಿಮಾತ್ಯ ದೇಶಗಳು ಆರೋಪಿಸಿದ್ದವು. ಈ ಬಗ್ಗೆ ಚೀನಾ ಕ್ಲ್ಯಾರಿಟಿ ನೀಡಿದೆ. ಯುದ್ಧಪೀಡಿತ ಯುಕ್ರೇನ್‌ಗಾಗ್ಲಿ ಅಥವಾ ರಷ್ಯಾಗೆ ಆಗಲೀ ನಾವು ಶಸ್ತ್ರಾಸ್ತ್ರಗಳನ್ನ ಮಾರಾಟ ಮಾಡೋದಿಲ್ಲ ಅಂತ ಚೀನಾ ಸ್ಪಷ್ಟಪಡಿಸಿದೆ. ರಷ್ಯಾ- ಯುಕ್ರೇನ್‌ ಯುದ್ಧದಲ್ಲಿ ಚೀನಾ ತಟಸ್ಥ ನೀತಿಯನ್ನ ಅನುಸರಿಸುತ್ತಿದೆ. ಹೀಗಾಗಿ ಯಾವ ದೇಶಕ್ಕೂ ನಾವು ಶಸ್ತ್ರಾಸ್ತ್ರ ಮಾರಾಟ ಮಾಡಲ್ಲ ಅಂತ ಚೀನಾದ ವಿದೇಶಾಂಗ ಸಚಿವ ಕ್ವಿನ್‌ ಗ್ಯಾಂಗ್‌ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply