ಯುಕ್ರೇನ್​ನ ಮೆಲಿಟೋಪೋಲ್​ ಮೇಯರ್

masthmagaa.com:

ಯುಕ್ರೇನ್​ನ ಮತ್ತೊಂದು ನಗರ ಮೆಲಿಟೋಪೋಲ್​ಗೂ ರಷ್ಯಾ ಸೈನಿಕರು ಎಂಟ್ರಿ ಕೊಟ್ಟಿದ್ದಾರೆ. ಅಲ್ದೇ ರಷ್ಯಾದ ದಾಳಿ ತಡೆಯೋಕೆ ಹೋದ ಅಲ್ಲಿನ ಮೇಯರ್‌ ಇವನ್‌ ಪೆಡರೋವ್‌ ಅವರನ್ನು ಕೂಡ ರಷ್ಯಾ ಸೈನಿಕರು ಕಿಡ್ನಾಪ್‌ ಮಾಡಿರೋದಾಗಿ ಯುಕ್ರೇನ್‌ ಆರೋಪ ಮಾಡಿದೆ. 10 ಜನರ ಬಂದೂಕುಧಾರಿಗಳ ಗುಂಪೊಂದು ಮೇಯರ್‌ ಅವರನ್ನ ಅಪಹರಣ ಮಾಡಿದೆ. ಅವರೆಲ್ಲಾ ಕಪ್ಪು ಬಟ್ಟೆ ಧರಿಸಿದ್ರು ಅಂತ ಯುಕ್ರೇನ್‌ ಅಧ್ಯಕ್ಷೀಯ ಕಛೇರಿ ಮಾಹಿತಿ ಕೊಟ್ಟಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಯುಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ”ರಷ್ಯನ್‌ ಸೈನಿಕರು ಐಎಸ್​ ಉಗ್ರರಂತೆ ನಡ್ಕೊಳ್ತಿದ್ದಾರೆ. ಉಕ್ರೇನ್‌ ಗೆಲ್ಲೋಕೆ ಸಾಮರ್ಥ್ಯ ಇಲ್ಲದ ರಷ್ಯಾ ಆಕ್ರಮಣಕಾರರ ಹತಾಶೆಯನ್ನ ಇದು ತೋರಿಸುತ್ತೆ” ಅಂತ ಕಿಡಿಕಾರಿದ್ದಾರೆ. ಅಲ್ದೇ ಇದು ಕೇವಲ ಮೇಯರ್‌ ಅಥವಾ ಉಕ್ರೇನ್‌ ಮೇಲಿನ ಮೇಲಿನ ದಾಳಿಯಲ್ಲ.. ಇದು ಪ್ರಜಾಪ್ರಭುತ್ವದ ಮೇಲೆ ನಡೀತಿರುವ ಆಕ್ರಮಣ ಅಂತ ರಷ್ಯಾ ವಿರುದ್ದ ಬೆಂಕಿಯುಗುಳಿದ್ದಾರೆ.

-masthmagaa.com

Contact Us for Advertisement

Leave a Reply