ವಿಕ್ಟರಿ ಡೇ ಸಂಭ್ರದಲ್ಲಿದ್ದ ರಷ್ಯಾಗೆ ಆಘಾತ! ಏನಾಯ್ತು ಅಂತ ಈ ವರದಿ ಓದಿ

masthmagaa.com:

ಯುಕ್ರೇನ್‌ ಮೇಲೆ ರಷ್ಯಾ ಆಕ್ರಮಣ ಮಾಡಿದ ಆರಂಭದಲ್ಲಿ ಯರೋಪ್‌ನಲ್ಲಿ ನಡೆದ ಸೈಬರ್‌ ಅಟ್ಯಾಕ್‌ಗಳ ಹಿಂದೆ ರಷ್ಯಾ ಕೈವಾಡ ಇದೆ ಅಂತ ನಿನ್ನೆಯಷ್ಟೇ ಯುರೋಪ್‌ ಒಕ್ಕೂಟ ಹೇಳಿತ್ತು. ಇದರ ಬೆನ್ನಲ್ಲೇ ಈಗ ರಷ್ಯಾದ ವಿಡಿಯೋ ಫ್ಲಾಟ್‌ಫಾಮ್‌ ರುಟ್ಯೂಬ್‌, ತನ್ನ ಮೇಲೆ ಸೈಬರ್‌ ದಾಳಿ ಆಗಿದೆ ಅಂತ ಆರೋಪಿಸಿದೆ. ರಷ್ಯಾ ವಿಕ್ಟರಿ ಡೇ ಮಾಡಿದ ಒಂದೇ ದಿನಕ್ಕೆ ಈ ದಾಳಿಯಾಗಿದ್ದು ಇದುವೆರೆಗೂ ನಡೆದ ದಾಳಿಗಿಂತ ಇದು ದೊಡ್ಡದಾಗಿತ್ತು.ಇದನ್ನ ಸರಿಮಾಡೋಕೆ ನಮಗೆ ತುಂಬಾ ಸಮಯ ಬೇಕಾಯ್ತು ಅಂತ ರೂಟ್ಯೂಬ್‌ ಹೇಳಿದೆ. ಅಂದ್ಹಾಗೆ ರೂಟ್ಯೂಬ್‌ ರಷ್ಯಾದ ಯೂಟ್ಯೂಬ್‌ ರೀತಿಯ ವಿಡೀಯೊ ಫ್ಲಾಟ್‌ಫರ್ಮ್‌.

-masthmagaa.com

Contact Us for Advertisement

Leave a Reply