ರಷ್ಯಾದಲ್ಲಿ ಯುದ್ಧ ವಿರೋಧಿ ಪ್ರತಿಭಟನೆ! ಸಾವಿರಾರು ಜನ ಅರೆಸ್ಟ್

masthmagaa.com:

ಯುಕ್ರೇನ್​​ನಲ್ಲಿ ರಷ್ಯಾ ಮುಂದುವರಿದಂತೆ ರಷ್ಯಾದಲ್ಲಿ ಯುದ್ಧ ವಿರೋಧಿ ಪ್ರತಿಭಟನೆ ಕೂಡ ಜೋರಾಗಿದೆ. ಇದ್ರ ನಡುವೆಯೇ ಜೈಲು ಶಿಕ್ಷೆಗೆ ಗುರಿಯಾಗಿರೋ ಪುಟಿನ್ ವಿರೋಧಿ ನಾಯಕ ಅಲೆಕ್ಸಿ ನಾವಲ್ನಿ ಕೂಡ ಯುಕ್ರೇನ್ ಅತಿಕ್ರಮಣ ವಿರೋಧಿಸಿ ಪ್ರತಿಭಟನೆ ನಡೆಸುವಂತೆ ಕರೆ ನೀಡಿದ್ದಾರೆ. ಪ್ರತಿಭಟನೆ ವೇಳೆ ಮಾಸ್ಕೋ, ಸೈಂಟ್ ಪೀಟರ್ಸ್​​ಬರ್ಗ್​​​​ನಲ್ಲಿ ನೂರಾರು ಜನರನ್ನು ಅರೆಸ್ಟ್ ಮಾಡಿದ್ದಾರೆ. ಪುಟಿನ್ ತವರು ಪ್ರದೇಶವಾದ ಸೈಂಟ್ ಪೀಟರ್ಸ್​ಬರ್ಗ್​​ನಲ್ಲಿ ಪ್ರತಿಭಟನೆ ಹಿಂಸಾತ್ಮಕ ರೂಪ ಪಡ್ಕೊಂಡಿದ್ದು, ಪ್ರತಿಭಟನಕಾರರನ್ನು ಪೊಲೀಸರು ಚದುರಿಸಿದ್ದಾರೆ. ನೂರಕ್ಕೂ ಹೆಚ್ಚು ಜನರನ್ನು ಅರೆಸ್ಟ್ ಕೂಡ ಮಾಡಿದ್ದಾರೆ. ಯುಕ್ರೇನ್ ಮೇಲೆ ದಾಳಿ ನಡೆದ ಬಳಿಕ ಈವರೆಗೆ ರಷ್ಯಾದಲ್ಲಿ 7 ಸಾವಿರಕ್ಕೂ ಹೆಚ್ಚು ಪ್ರತಿಭಟನಕಾರರನ್ನು ವಶಕ್ಕೆ ಪಡೆಯಲಾಗಿದೆ ಅಂತ ಮಾಹಿತಿ ಲಭ್ಯವಾಗಿದೆ.

-masthmagaa.com

Contact Us for Advertisement

Leave a Reply