SCO: ಭಾರತ ಮತ್ತು ಪಾಕಿಸ್ತಾನ ವಿದೇಶಾಂಗ ಸಚಿವರುಗಳ ದ್ವಿಪಕ್ಷೀಯ ಮಾತುಕತೆ ಇಲ್ಲ

masthmagaa.com:

ಗೋವಾದಲ್ಲಿ ನಡೆಯಲಿರುವ SCO ಶೃಂಗಸಭೆಯಲ್ಲಿ ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ಹಾಗೂ ಪಾಕಿಸ್ತಾನ ಕೌಂಟರ್‌ಪಾರ್ಟ್‌ ಬಿಲಾವಲ್‌ ಭುಟ್ಟೊ ಜರ್ದಾರಿ ಮೀಟ್‌ ಮಾಡುವ ಸಾದ್ಯತೆ ಇಲ್ಲ. SCO ಪೂರ್ವಭಾವಿಯಾಗಿ ವಿದೇಶಾಂಗ ಸಚಿವರುಗಳ ಸಭೆ ಮೇ 4 ಮತ್ತು 5ರಂದು ನಡೆಯಲಿದೆ. ಈ ಸಭೆಯಲ್ಲಿ ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಲ್‌ ಅವ್ರು ಭಾಗವಹಿಸುತ್ತಾರೆ ಅಂತ ಪಾಕಿಸ್ತಾನ ಹೇಳಿತ್ತು. ಆದ್ರೆ ಉಭಯ ದೇಶದ ವಿದೇಶಾಂಗ ಸಚಿವರು ದ್ವಿಪಕ್ಷೀಯ ಮಾತುಕತೆ ನಡೆಸುವ ಸಾಧ್ಯತೆಯಿಲ್ಲ ಎನ್ನಲಾಗಿದೆ. ಇಬ್ಬರು ವಿದೇಶಾಂಗ ಸಚಿವರ ನಡುವೆ ದ್ವಿಪಕ್ಷೀಯ ಸಭೆಗೆ ಪಾಕಿಸ್ತಾನ ಮನವಿ ಮಾಡಿದ್ಯಾ? ಅಂತ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್‌ ಬಗ್ಚಿ, ಭೇಟಿ ಸಾಧ್ಯತೆ ಇಲ್ಲ ಅಂತ ಹೇಳಿದ್ದಾರೆ. ನಾವು SCO ಸಭೆಯ ಯಶಸ್ಸಿನ ಕಡೆಗೆ ಫೋಕಸ್‌ ಮಾಡ್ತೀವಿ. ಯಾವುದೇ ಒಂದು ನಿರ್ದಿಷ್ಟ ರಾಷ್ಟ್ರದ ಭಾಗವಹಿಸೋದ್ರ ಮೇಲೆ ಫೋಕಸ್‌ ಮಾಡೋದು ಸೂಕ್ತವಲ್ಲ ಅಂತ ಪರೋಕ್ಷವಾಗಿ ಎರಡು ದೇಶದ ವಿದೇಶಾಂಗ ಮಂತ್ರಿಗಳ ಭೇಟಿಯಿಲ್ಲ ಅಂತ ಬಗ್ಚಿ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply