ಪುಟಿನ್​ಗೆ ಮೋದಿ ಕರೆ ಬೆನ್ನಲ್ಲೇ ಅಮೆರಿಕದಿಂದ ಭಾರತಕ್ಕೆ ಬಂತು ಕರೆ!

masthmagaa.com:

ಇನ್ನೊಂದ್‌ ಕಡೆ ವಿದೇಶಾಂಗ ಮಂತ್ರಿ ಎಸ್‌. ಜೈಶಂಕರ್‌ ಯುಕ್ರೇನ್‌ ಬಿಕ್ಕಟ್ಟಿನ ವಿಚಾರವಾಗಿ ಅಮೇರಿಕದ ಸ್ಟೇಟ್‌ ಸೆಕ್ರಟರಿ ಆಂಟೊನಿ ಬ್ಲಿಂಕೆನ್‌ ಮತ್ತು ರಷ್ಯಾದ ವಿದೇಶಾಂಗ ಮಂತ್ರಿ ಸೆರ್ಗೆಯ್‌ ಲಾರ್ವೋವ್‌ ಜೊತೆ ಪ್ರತ್ಯೇಕ ಕರೆಗಳಲ್ಲಿ ಮಾತ್ನಾಡಿದ್ದಾರೆ. ಪುಟಿನ್​ ಜೊತೆ ಪ್ರಧಾನಿ ಮೋದಿ ಮಾತನಾಡಿದ ಬೆನ್ನಲ್ಲೇ ಅಮೆರಿಕದಿಂದ ಜೈಶಂಕರ್​ಗೆ ಕಾಲ್​ ಬಂದಂತೆ ಕಾಣ್ತಿದೆ. ಪುಟಿನ್​ ಮೈಂಡ್​​ನಲ್ಲಿ ಏನಿದೆ ಅನ್ನೋದನ್ನ ರೀಡ್​ ಮಾಡಲು ಅಮೆರಿಕ ಕಾಲ್​ ಮಾಡಿದೆ ಅನ್ಸಿತ್ತೆ. ಆದ್ರೆ ಈ ಬಗ್ಗೆ ಟ್ವೀಟ್‌ ಮಾಡಿರೋ ಜೈಶಂಕರ್​, ಬ್ಲಿಂಕೆನ್‌ ಕಾಲ್‌ ಮಾಡಿದ್ದನ್ನ ಅಪ್ರಷಿಯೇಟ್‌ ಮಾಡ್ತಿನಿ. ಯುಕ್ರೇನ್‌ನಲ್ಲಿ ನಡೀತಿರೋ ಬೆಳವಣಿಗೆಗಳ ಬಗ್ಗೆ ಮತ್ತು ಅವುಗಳ ಪರಿಣಾಮಗಳ ಬಗ್ಗೆ ಚರ್ಚೆ ಮಾಡಿದ್ವಿ ಅಂತಷ್ಟೇ ಹೇಳಿದ್ದಾರೆ. ಬ್ಲಿಂಕೆನ್‌ ಕೂಡ ಟ್ವೀಟ್‌ ಮಾಡಿದ್ದು, ರಷ್ಯಾದ ಆಕ್ರಮಣದ ವಿರುದ್ಧ ಒಗ್ಗಟ್ಟಾದ ಪ್ರತಿಕ್ರಿಯೆ ನೀಡುವುದರ ಪ್ರಾಮುಖ್ಯತೆ ಬಗ್ಗೆ ಮಾತನಾಡಿದ್ದೀವಿ ಅಂತಷ್ಟೇ ಹೇಳಿದ್ದಾರೆ. ಇನ್ನು ಮತ್ತೊಂದ್‌ ಟ್ವೀಟ್‌ನಲ್ಲಿ ಜೈಶಂಕರ್‌, ಸೆರ್ಗೆಯ್‌ ಲಾರ್ವೋವ್‌ ಜೊತೆ ಮಾತಾಡ್ದೆ, ಡಿಪ್ಲೊಮಸಿ ಮತ್ತು ಮಾತುಕತೆಯೇ ಒಳ್ಳೆ ದಾರಿಗಳು ಅಂತ ತಿಳಿಸಿದ್ದೇನೆ ಎಂದಿದ್ದಾರೆ.

-masthmagaa.com

Contact Us for Advertisement

Leave a Reply